Jain Muni murder: ಜೈನ ಮುನಿ ಹತ್ಯೆ ಹಿಂದೆ ಮುಸ್ಲಿಂ ಉಗ್ರ ಸಂಘಟನೆ ಐಸಿಎಸ್ ಕೈವಾಡ ?!
Latest news death news Jain Muni murder is linked to Muslim extremist organization ICS
Jain Muni murder: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಜೈನ ಕ್ಷೇತ್ರದಲ್ಲಿ ವಾಸ್ತವ್ಯವಿದ್ದ ಆಚಾರ್ಯ ಮುನಿಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆಯ (Jain Muni murder) ಹಿಂದೆ ಮುಸ್ಲಿಂ ಉಗ್ರ ಸಂಘಟನೆ ಐಸಿಎಸ್ ಕೈವಾಡ ಇದೆ ಎಂದು ಬಿಜೆಪಿ ಎಂಎಲ್ಸಿ ನಾರಾಯಣಸ್ವಾಮಿ ಅವರು ಹೇಳಿದ್ದಾರೆ
ವಿಧಾನ ಪರಿಷತ್ ನಲ್ಲಿ ನಿಯಮ 68ರ ಅಡಿ ನಡೆದ ಚರ್ಚೆ ವೇಳೆ ಮಾತನಾಡಿರುವ ಅವರು, ಇಸಿಸ್ ಭಯೋತ್ಪಾದಕರು ಕೊಡುವ ಟಾರ್ಚರ್ ಬಗ್ಗೆ ಕೇಳಲ್ಪಟ್ಟಿದ್ದೇವೆ. ಜೈನ ಮುನಿಯನ್ನು ಹತ್ಯೆ ಮಾಡಿ ಅವರ ದೇಹವನ್ನು 9 ತುಂಡುಗಳಾಗಿ ಮಾಡಿರುವುದನ್ನು ಗಮನಿಸಿದರೆ ಈ ಕೊಲೆಗೆ ಇಸಿಸ್ ನಂಟಿರುವ ಅನುಮಾನ ಬಲವಾಗಿ ಕಾಡುತ್ತಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಹೇಳಿದರು.
ಮಂಗಳೂರು ನಗರದ ನಾಗುರಿಯಲ್ಲಿ 2022ರ ನ.19ರಂದು ನಡೆದ ಕುಕ್ಕರ್ ಸ್ಫೋಟ ಹಾಗೂ ಶಿವಮೊಗ್ಗದಲ್ಲಿ ನಡೆದ ಟ್ರಯಲ್ ಬಾಂಬ್ ಸ್ಫೋಟ ಘಟನೆಯನ್ನು ಲಘುವಾಗಿ ಪರಿಗಣಿಸಿದೆವು. ಆದರೆ, ಎನ್ಐಎ ತನಿಖೆ ನಂತರವೇ ಇದರ ತೀವ್ರತೆ ಅರಿವಿಗೆ ಬಂತು. ಹಾಗಾಗಿ ಈ ಪ್ರಕರಣವನ್ನೂ ಲಘುವಾಗಿ ಪರಿಗಣಿಸಬಾರದು. 6 ಲಕ್ಷ ಹಣಕ್ಕೆ ಮುನಿಯ ಹತ್ಯೆ ಯಾರೂ ನಂಬಲು ಸಾಧ್ಯವಿಲ್ಲ. ಹಾಗಾಗಿ ಸಿಬಿಐಗೆ ಕೊಡಬೇಕು ಎಂದು ತೇಜಸ್ವಿನಿಗೌಡ ಹೇಳಿದರು.
ಘಟನೆ ವಿವರ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಜೈನ ಕ್ಷೇತ್ರದಲ್ಲಿ ವಾಸ್ತವ್ಯವಿದ್ದ ಆಚಾರ್ಯ ಮುನಿಶ್ರೀ ಕಾಮಕುಮಾರ ನಂದಿ ಮಹಾರಾಜ ಸ್ವಾಮೀಜಿಯವರು ಜು. 6ರ ರಾತ್ರಿಯವರೆಗೂ ಆಶ್ರಮದಲ್ಲೇ ಇದ್ದರು. ಆದರೆ, ಜು. 7ರ ಬೆಳಗ್ಗೆಯಿಂದಲೇ ಅವರು ಆಶ್ರಮದಲ್ಲಿ ಕಾಣಿಸಿರಲಿಲ್ಲ. ಇಡೀ ಆಶ್ರಮವನ್ನು ಹುಡುಕಾಡಿದರು ಕೂಡ ಸ್ವಾಮೀಜಿಯ ಪತ್ತೆಯಾಗದ ಕಾರಣ ಪೊಲೀಸರಿಗೆ ದೂರನ್ನು ದಾಖಲಿಸಲಾಯಿತು. ದೂರಿನನ್ವಯ, ಆಶ್ರಮದ ಸಿಬ್ಬಂದಿ ಹಾಗೂ ಸ್ವಾಮೀಜಿಯವರ ಆಪ್ತರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈನ ಮುನಿಯ ಹತ್ಯೆಯ ಪ್ರಕರಣವನ್ನು ಭೇದಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಅವರು ತಾವೇ ಸ್ವಾಮೀಜಿಯವರ ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಸಾಲದ ವಿಚಾರಕ್ಕೆ ಬಂದ ಭಿನ್ನಾಭಿಪ್ರಾಯವೇ ಕೊಲೆಗೆ ಮೂಲಕಾರಣ ಎಂದು ಬೆಳಕಿಗೆ ಬಂದಿದೆ.
ಆಶ್ರಮದಲ್ಲಿಯೇ ಕೆಲಸ ಮಾಡುತ್ತಿದ್ದ ನಾರಾಯಣ ಮಾಳಿ ಎಂಬವರು ಮುನಿಗಳ ಹತ್ಯೆ ಮಾಡಿದ್ದಾರೆ. ಹೆಣವನ್ನು ಸಾಗಿಸಲು ಹಸನ್ ದಲಾಯತ್ ಅವರಿಂದ ಸಹಾಯ ಪಡೆದುಕೊಂಡಿದ್ದಾರೆ. ಈ ಬಗ್ಗೆ ನಾರಾಯಣ ಮಾಳಿ ತನಿಖೆಯಲ್ಲಿ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ನಾರಾಯಣ ಮಾಳಿ ಹತ್ಯೆ ಮಾಡಿದ ತಂಡದ ಇನ್ನೊಬ್ಬ ವ್ಯಕ್ತಿಯ ಹೆಸರನ್ನು ಬಾಯಿಬಿಟ್ಟಿದ್ದು, ಆತನನ್ನೂ ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಹತ್ಯೆಯ ಭಯಾನಕ ವಿಚಾರ ಹೊರಬಿದ್ದಿದೆ. ‘ಹತ್ಯೆಯು ಹಣಕಾಸಿನ ವ್ಯವಹಾರದ ಸಂಬಂಧ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗುತ್ತಿದೆ’ ಎಂದು ತನಿಖಾಧಿಖಾರಿಗಳು ಹೇಳಿದ್ದಾರೆ.
ಹಂತಕರು ಸ್ವಾಮೀಜಿಯಿಂದ ದೊಡ್ಡ ಮೊತ್ತದ ಹಣವನ್ನು ಸಾಲವಾಗಿ ಪಡೆದಿದ್ದರು. ವರ್ಷಗಳಾದರೂ ಸಾಲವನ್ನು ತೀರಿಸದ ಕಾರಣ ಸ್ವಾಮೀಜಿಯವರು ಹಣ ವಾಪಸ್ ಕೊಡುವಂತೆ ಕೇಳುತ್ತಿದ್ದರು. ಪದೇ ಪದೇ ಸ್ವಾಮೀಜಿಯವರು ಹಣವನ್ನು ಕೇಳಲಾರಂಭಿಸಿದ್ದಕ್ಕೆ ಸ್ವಾಮೀಜಿಯವರನ್ನು ಹತ್ಯೆ ಮಾಡಿರುವುದಾಗಿ ಹಂತಕರು ಬಾಯ್ಬಿಟ್ಟಿದ್ದಾರೆ. ಸದ್ಯ ಸ್ವಾಮೀಜಿಯವರ ಹತ್ಯೆ ಪ್ರಕರಣ ಸಾಮಾಜಿಕ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.
ಇದನ್ನು ಓದಿ: Husband And Wife: ಇದ್ದ ಜಮೀನು ಮಾರಿ ಪತ್ನಿಯನ್ನು ಓದಿಸಿದ ಗಂಡ, ಕಾನ್ಸ್ಟೆ ಬಲ್ ಆಗುತ್ತಿದ್ದಂತೆ ಪತ್ನಿ ಮಾಡಿದ್ದು ಮಾತ್ರ …!