Women Death: ಮದುವೆಯಾದ ಕೆಲವೇ ದಿನಗಳಲ್ಲಿ ನವವಿವಾಹಿತೆ ಮೃತ್ಯು ; ಕಾರಣ ಕೇಳಿದ್ರೆ ನೀವೂ ಮರುಗುತ್ತೀರಾ!
Women Death newlyweds died within a few days of their marriage
Women Death: ಮದುವೆಯಾದ ಕೆಲವೇ ದಿನಗಳಲ್ಲಿ ನವವಿವಾಹಿತೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಕೇರಳದ ಪಲಕ್ಕಾಡ್ನಲ್ಲಿ ನಡೆದಿದೆ. ಮೃತ ಮಹಿಳೆಯನ್ನು (Women Death) ಪುಥುಕೋಡ್ನ ಕಣ್ಣನ್ನೂರ್ ಮೂಲದ ಅನಿಶಾ(20) ಎಂದು ಗುರುತಿಸಲಾಗಿದೆ.
ಅನಿಶಾ ಕೊಯಮತ್ತೂರು ಮೂಲದ ಶಕಿರ್ (32) ಎಂಬಾತನನ್ನು ಜೂನ್ 4ರಂದು ಮದುವೆಯಾಗಿದ್ದರು. ನಿನ್ನೆ (ಜು.10) ಬೆಳಗ್ಗೆಸಂಬಂಧಿಕರ ಮನೆಯಲ್ಲಿ ಹಬ್ಬ ಮುಗಿಸಿಕೊಂಡು ಅನಿಶಾ ಹಾಗೂ ಪತಿ ಮನೆಗೆ ವಾಪಾಸ್ಸು ಹಿಂತಿರುಗುವಾಗ ಪಲಕ್ಕಾಡ್ನ ಪುದುಸ್ಸೆರಿಯ ಕುರುಡಿಕಾಡ್ ಎಂಬ ಪ್ರದೇಶದಲ್ಲಿ ದಂಪತಿ ಪ್ರಯಾಣಿಸುತ್ತಿದ್ದ ಬೈಕ್ ಹಾಗೂ ಲಾರಿ ನಡುವೆ ಡಿಕ್ಕಿಯಾಗಿದ್ದು, ಘಟನೆ ಪರಿಣಾಮ ಅನಿಶಾ ಸಾವನ್ನಪ್ಪಿದ್ದು, ಶಕಿರ್ (32) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಂಟೈನರ್ ಓವರ್ಟೇಕ್ ಮಾಡಲು ಹೋಗಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿಯನ್ನು ಕಳೆದುಕೊಂಡ ಶಕೀರ್ ಆಕ್ರಂದನ ಮುಗಿಲು ಮುಟ್ಟಿದೆ. ಮನೆಯವರು ಕಂಬನಿ ಮಿಡಿದಿದ್ದಾರೆ. ಸದ್ಯ ಘಟನೆ ಸಂಬಂದ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.