Sexual Harassment: ಬ್ರಿಜ್ ಭೂಷಣ್ ನಿಂದ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಆಗಿರೋದು ಸಾಬೀತು ; ಪೋಲೀಸರ ಜಾರ್ಜ್ ಶೀಟ್ ನಲ್ಲಿ ಉಲ್ಲೇಖ !

Latest news Wrestlers were sexually harassed by Brij Bhushan

Sexual Harassment: ಬಿಜೆಪಿ (BJP) ಸಂಸದ ಮತ್ತು ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‍ಭೂಷಣ್ (Brij Bhushan Sharan Singh) ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ದೆಹಲಿ ಪೊಲೀಸರು ಜೂನ್ 13 ರಂದು ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಇದರಲ್ಲಿ ಕ್ರೀಡಾಪಟುಗಳಿಗೆ ಕಿರುಕುಳ, ಲೈಂಗಿಕ ಕಿರುಕುಳ (Sexual Harassment) ನೀಡಿದ್ದು ಶಿಕ್ಷಾರ್ಹ ಎಂದು ದೆಹಲಿ ಪೊಲೀಸರು ಪರಿಗಣಿಸಿದ್ದಾರೆ.

ಭಾರತೀಯ ಕುಸ್ತಿ ಫೆಡರೇಷನ್​ (WFI) ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ದಾಖಲಾಗಿರುವ ವಿವಿಧ ಆರೋಪಗಳು ಬಹಿರಂಗವಾಗಿತ್ತು. ಕುಸ್ತಿಪಟುಗಳಿಗೆ ಬ್ರಿಜ್ ಭೂಷಣ್ ಹಲವಾರು ಬಾರಿ ಕಿರುಕುಳ ನೀಡಿದ್ದಾರೆ. ಬ್ರೀತ್‌ ಚೆಕ್‌ ನೆಪದಲ್ಲಿ ಮಹಿಳಾ ರೆಸ್ಲರ್‌ಗಳ (Wrestlers Protest) ಟೀ ಶರ್ಟ್ ಎಳೆದು ಅವರೊಡನೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆ ಕುಸ್ತಿಪಟುಗಳು ಭಾರೀ ಪ್ರತಿಭಟನೆ ನಡೆಸಿದ್ದರು.

ಅಲ್ಲದೆ, ಲೈಂಗಿಕ ಕಿರುಕುಳದ ಆರೋಪದ ಹಿನ್ನೆಲೆ ಬ್ರಿಜ್ ಭೂಷಣ್ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಸದ್ಯ ಆರೋಪಿ ವಿರುದ್ಧ ದೆಹಲಿ ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.
ಚಾರ್ಜ್ ಶೀಟ್ ನಲ್ಲಿ ಕುಸ್ತಿಪಟುಗಳ ಮೇಲೆ ಸಿಂಗ್ ಪದೇ ಪದೇ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಕ್ರೀಡಾಪಟುಗಳಿಗೆ ಕಿರುಕುಳ, ಲೈಂಗಿಕ ಕಿರುಕುಳ ನೀಡಿದ್ದು ಶಿಕ್ಷಾರ್ಹ ಎಂದು ದೆಹಲಿ ಪೊಲೀಸ್ ಉಲ್ಲೇಖಿಸಲಾಗಿದೆ.

ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಚಾರ್ಜ್​ ಶೀಟ್​ನಲ್ಲಿ ಇದುವರೆಗಿನ ತನಿಖೆಯ ಪ್ರಕಾರ, 6 ಕುಸ್ತಿಪಟುಗಳು ಮಾಡಿದ ಆರೋಪಗಳಿಗಾಗಿ ಅವರನ್ನು ವಿಚಾರಣೆ ಒಳಪಡಿಸಬಹುದು ಹಾಗೂ ಶಿಕ್ಷೆಗೆ ಗುರುಪಡಿಸಬಹುದು ಎಂದು ಹೇಳಲಾಗಿದೆ. ಚಾರ್ಜ್ ಶೀಟ್ ಸುಮಾರು 200 ಸಾಕ್ಷಿಗಳ ಹೇಳಿಕೆಗಳನ್ನು ಒಳಗೊಂಡಿದೆ ಎಂದು ವರದಿಯಾಗಿದೆ.

ಜುಲೈ 7 ರಂದು ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯವು ಬ್ರಿಜ್ ಭೂಷಣ್ ಸಿಂಗ್ ಅವರಿಗೆ ಸಮನ್ಸ್ ನೀಡಿತ್ತು. ಕೋರ್ಟ್ ನೀಡಿದ ಸಮನ್ಸ್‌ನಲ್ಲಿ ಜುಲೈ 18 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಲಾಗಿದೆ. ಇದಲ್ಲದೆ ಸಿಂಗ್ ಅವರ ಮಾಜಿ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಅವರಿಗೂ ನ್ಯಾಯಾಲಯ ಸಮನ್ಸ್ ನೀಡಿದೆ. ತೋಮರ್ ವಿರುದ್ಧ ಐಪಿಸಿ ಸೆಕ್ಷನ್ 109 (ಅಪರಾಧ ಅಧಿಕಾರಿ), 354, 354ಎ, 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಆರೋಪಿಸಲಾಗಿದೆ.

 

ಇದನ್ನು ಓದಿ: Heart Attack: ಜಿಮ್‌ನಲ್ಲಿ ವರ್ಕೌಟ್​​ ಮಾಡಿದ ಬಳಿಕ ಎದೆಯಲ್ಲಿ ನೋವು !! ಕೂಡಲೇ ಹೃದಯಾಘಾತದಿಂದ ಯುವಕ ಸಾವು !! 

Leave A Reply

Your email address will not be published.