Home Karnataka State Politics Updates Gruha Jyoti Scheme: ಗೃಹಜ್ಯೋತಿ ಅರ್ಜಿ ಹಾಕಿದವರಿಗೆ ಮತ್ತೆ ಶಾಕ್ !! ಹಾಕಿದ ಅರ್ಜಿಯಲ್ಲಿ ತಾಂತ್ರಿಕ...

Gruha Jyoti Scheme: ಗೃಹಜ್ಯೋತಿ ಅರ್ಜಿ ಹಾಕಿದವರಿಗೆ ಮತ್ತೆ ಶಾಕ್ !! ಹಾಕಿದ ಅರ್ಜಿಯಲ್ಲಿ ತಾಂತ್ರಿಕ ದೋಷ – ಹಲವರ ಅರ್ಜಿ ಕ್ಯಾನ್ಸಲ್

Gruha Jyoti Scheme
image source: Udayavani

Hindu neighbor gifts plot of land

Hindu neighbour gifts land to Muslim journalist

Gruha Jyoti Scheme: ಈಗಾಗಲೇ ಕಾಂಗ್ರೆಸ್‌ ಸರ್ಕಾರದ ಗೃಹ ಜ್ಯೋತಿ ಉಚಿತ ವಿದ್ಯುತ್‌ ಯೋಜನೆಯ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಗೃಹಜ್ಯೋತಿ ಯೋಜನೆಗೆ(Gruha Jyoti Scheme) ಮೊದಲ ಎರಡು ದಿನ ಅರ್ಜಿ ಸಲ್ಲಿಸಿದವರ ಅರ್ಜಿಗಳು( Application) ತಿರಸ್ಕೃತವಾಗಿದೆ ಎಂದು ತಿಳಿದುಬಂದಿದೆ.

ಹೌದು, ತಾಂತ್ರಿಕ ಲೋಪ(Technical error) ಉಂಟಾಗಿರುವುದರಿಂದ ಈ ಅರ್ಜಿಗಳು ತಿರಸ್ಕೃತವಾಗಿವೆ ಎನ್ನಲಾಗುತ್ತಿದೆ. ಆರಂಭದಲ್ಲಿ ಸೇವಾ ಸಿಂಧು ಸರ್ವರ್‌ ಡೌನ್‌(Seva Sindhu server down) ಇತ್ತು. ಹಾಗಾಗಿ ಅರ್ಜಿ ಲಿಂಕ್‌ ಆಗದಿರುವ ಸಾಧ್ಯತೆ ಇದೆ. ಒಂದು ವೇಳೆ ಈ ಎರಡು ದಿನ ಅರ್ಜಿ ಸಲ್ಲಿಸಿ ಇದ್ದಲ್ಲಿ , ನಿಮ್ಮ ಸ್ಟೇಟಸ್‌ನನ್ನು ಚೆಕ್‌ ಮಾಡಿಕೊಳ್ಳಿ. ಒಂದು ವೇಳೆ ತಿರಸ್ಕೃತವಾಗಿದ್ರೆ, ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

ರಾಜ್ಯದಲ್ಲಿ ಈವರೆಗೂ ಗೃಹಜ್ಯೋತಿ ಉಚಿತ ವಿದ್ಯುತ್‌ ಯೋಜನೆಗೆ ಒಂದು ಕೋಟಿಗೂ ಅಧಿಕ ಅರ್ಜಿ ಸಲ್ಲಿಕೆಯಾಗಿವೆ.ಉಚಿತ ವಿದ್ಯುತ್‌ ಯೋಜನೆ ಬೇಕೆಂದರೆ ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು. ಜುಲೈ 25ರೊಳಗೆ ಅರ್ಜಿ ಸಲ್ಲಿಸಿದರೆ ಮಾತ್ರವೇ ಮುಂದಿನ ತಿಂಗಳ ಬಿಲ್‌ನಲ್ಲಿ ಉಚಿತ ವಿದ್ಯುತ್‌ ಶುಲ್ಕವು ಕಡಿತವಾಗಲಿದೆ ಎಂದು ಮಾಹಿತಿ ನೀಡಲಾಗಿದೆ.

 

ಇದನ್ನು ಓದಿ: PUC : ಪಿಯುಸಿ ವಿದ್ಯಾರ್ಥಿಗಳೇ ಗಮನಿಸಿ, ರಾಜ್ಯ ಸರ್ಕಾರದಿಂದ ಹೊಸ ಅಂಕ ಮಾದರಿ ಜಾರಿ ! ಹೇಗಿದೆ ಗೊತ್ತಾ ?