List of Richest States in India: ಭಾರತದ ಶ್ರೀಮಂತ ರಾಜ್ಯಗಳ ಪಟ್ಟಿ ಬಿಡುಗಡೆ ! ಯಾವ ರಾಜ್ಯಕ್ಕೆ ಎಷ್ಟನೇ ಸ್ಥಾನ ?

latest news intresting news List of Richest States in India

List of Richest States in India: ಭಾರತದ ಶ್ರೀಮಂತ ರಾಜ್ಯಗಳ ಪಟ್ಟಿ (List of Richest States in India) ರಿಲೀಸ್ ಆಗಿದೆ. ರಾಜ್ಯ ದೇಶೀಯ ಉತ್ಪನ್ನಗಳ ಆಧಾರದ ಮೇಲೆ 2022-23 ರ ಶ್ರೀಮಂತ ರಾಜ್ಯಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಕರ್ನಾಟಕಕ್ಕೆ (Karnataka) ಎಷ್ಟನೇ ಸ್ಥಾನ ಗೊತ್ತಾ? ಹಾಗೇ ಯಾವ ರಾಜ್ಯ ಎಷ್ಟನೇ ಸ್ಥಾನದಲ್ಲಿದೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ‌.

ಮಹಾರಾಷ್ಟ್ರ: ಮಹಾರಾಷ್ಟ್ರ ಭಾರತದ ಅತೀ ಶ್ರೀಮಂತ ರಾಜ್ಯ. ಇದು ಮೊದಲನೆಯ‌ ಸ್ಥಾನ ಪಡೆದಿದೆ. ಮಹಾರಾಷ್ಟ್ರ 400 ಬಿಲಿಯನ್ ಡಾಲರ್ ಜಿ ಎಸ್ ಡಿ ಪಿ ಹೊಂದಿದೆ. ಮಹಾರಾಷ್ಟ್ರವು ಜನಸಂಖ್ಯೆಯಲ್ಲಿ ಭಾರತದ ಎರಡನೆಯ ಅತಿ ದೊಡ್ಡ ರಾಜ್ಯವಾಗಿದೆ.

ತಮಿಳುನಾಡು : ಈ ರಾಜ್ಯ ಭಾರತದ ಶ್ರೀಮಂತ ರಾಜ್ಯದ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ. ಇದರ ಜಿಎಸ್ ಡಿಪಿ 265.49 ಬಿಲಿಯನ್ ಡಾಲರ್ ಆಗಿದೆ. ತಮಿಳುನಾಡು ವಿಸ್ತೀರ್ಣದಲ್ಲಿ ಭಾರತದ ಹನ್ನೊಂದನೆಯ ಅತಿ ದೊಡ್ಡ ರಾಜ್ಯವಾಗಿದೆ ಹಾಗೂ ಜನಸಂಖ್ಯೆಯಲ್ಲಿ ಏಳನೆಯ ಅತಿ ದೊಡ್ಡ ರಾಜ್ಯವಾಗಿದೆ.

ಗುಜರಾತ್ : ಗುಜರಾತ್ (gujrat) ಭಾರತದ ಪ್ರಮುಖ ಕೈಗಾರಿಕೆಗಳನ್ನೊಳಗೊಂಡ ರಾಜ್ಯ. ಭಾರತದ ಶ್ರೀಮಂತ ರಾಜ್ಯಗಳ ಪಟ್ಟಿಯಲ್ಲಿ ಗುಜರಾತ್ ಮೂರನೇ ಸ್ಥಾನದಲ್ಲಿದೆ. 259.25 ಬಿಲಿಯನ್ ಡಾಲರ್ ಜಿಎಸ್ ಡಿಪಿ ಹೊಂದಿದೆ.

ಕರ್ನಾಟಕ: ಭಾರತದ ಶ್ರೀಮಂತ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ ನಾಲ್ಕನೇ ಸ್ಥಾನ ದೊರಕಿದೆ. ಕರ್ನಾಟಕ 247.38 ಬಿಲಿಯನ್ ಅಮೆರಿಕ ಡಾಲರ್ ಜಿಎಸ್ ಡಿಪಿ ಹೊಂದಿದೆ.

ಉತ್ತರ ಪ್ರದೇಶ : 234.96 ಬಿಲಿಯನ್ ಅಮೆರಿಕ ಡಾಲರ್ ಜಿಎಸ್ ಡಿಪಿ ಯೊಂದಿಗೆ ಉತ್ತರ ಪ್ರದೇಶ (Uttar Pradesh) ಐದನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶ 241 ಮಿಲಿಯನ್‌ಗಿಂತಲೂ ಹೆಚ್ಚು ನಿವಾಸಿಗಳೊಂದಿಗೆ, ಇದು ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ ಮತ್ತು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದ ಉಪವಿಭಾಗವಾಗಿದೆ.

ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳ 206.64 ಬಿಲಿಯನ್ ಅಮೆರಿಕ ಡಾಲರ್ ಜಿಎಎಸ್ ಡಿಪಿ ಯೊಂದಿಗೆ ಶ್ರೀಮಂತ ರಾಜ್ಯಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಪಶ್ಚಿಮ ಬಂಗಾಳ ಪೂರ್ವ ಭಾರತದ ರಾಜ್ಯಗಳಲ್ಲೊಂದು. ಜನಸಂಖ್ಯೆಯಲ್ಲಿ ಈ ರಾಜ್ಯದ್ದು ಭಾರತದ ರಾಜ್ಯಗಳ ಪೈಕಿ ನಾಲ್ಕನೆಯ ಸ್ಥಾನ.

ರಾಜಸ್ಥಾನ : ಇದು ಭಾರತದಲ್ಲಿ ಅತಿದೊಡ್ಡ ಪ್ರದೇಶದ ರಾಜ್ಯ ಮತ್ತು ಜನಸಂಖ್ಯೆಯಲ್ಲಿ ಏಳನೇ ಅತಿದೊಡ್ಡ ರಾಜ್ಯವಾಗಿದೆ. ಖನಿಜ ಸಮೃದ್ಧ ರಾಜಸ್ಥಾನವು (rajastan) ಭಾರತದ ಏಳನೇ ಶ್ರೀಮಂತ ರಾಜ್ಯವಾಗಿದೆ. ರಾಜಸ್ಥಾನದ ಜಿಎಸ್ ಡಿಪಿ 161.37 ಬಿಲಿಯನ್ ಅಮೆರಿಕ ಡಾಲರ್ ಆಗಿದೆ. ಇದು ಭಾರತದಲ್ಲಿ ಎರಡನೇ ಅತಿ ದೊಡ್ಡ ಸಿಮೆಂಟ್ ಉತ್ಪಾದಿಸುವ ರಾಜ್ಯವಾಗಿದೆ.

ತೆಲಂಗಾಣ : ಆಂಧ್ರ ಪ್ರದೇಶ ರಾಜ್ಯವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು ತೆಲಂಗಾಣ ಮತ್ತು ಸೀಮಾಂಧ್ರ (ಆಂಧ್ರ). ಸದ್ಯ ತೆಲಂಗಾಣದ ಜಿಎಸ್ ಡಿಪಿ 157.35 ಯ ಮೂಲಕ ಎಂಟನೇ ಅತಿ ದೊಡ್ಡ ರಾಜ್ಯವಾಗಿದೆ. ತೇಲಂಗಾಣ ಭಾರತದ ಅಗ್ರ ಐಟಿ ರಫ್ತು ರಾಜ್ಯಗಳಲ್ಲಿ ಒಂದಾಗಿದೆ.

 

ಇದನ್ನು ಓದಿ: AHF Recruitment: ಪಶು ಇಲಾಖೆ ಖಾಲಿ ಹುದ್ದೆ ಶೀಘ್ರ ಭರ್ತಿ – 400 ವೈದ್ಯರು ಸೇರಿ 200 ನಿರೀಕ್ಷಕರ ನೇಮಕಕ್ಕೆ ಸದ್ಯದಲ್ಲೇ ಆದೇಶ 

Leave A Reply

Your email address will not be published.