Aadhaar – Pan card Link: ಆಧಾರ್- ಪಾನ್ ಬಗ್ಗೆ ಬಿಗ್ ಅಪ್ಡೇಟ್ – ಇನ್ನೂ ಲಿಂಕ್ ಮಾಡದವರಿಗೆ ಬಂತು ಹೊಸ ರೂಲ್ಸ್ ; ಸರ್ಕಾರದಿಂದ ಮಹತ್ವದ ಆದೇಶ !
Latest news Aadhaar – Pan update New Rules for Unlinked Aadhaar- PAN
Aadhaar – Pan card Link: ಪ್ಯಾನ್ ಕಾರ್ಡನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ (Aadhaar-PAN Link) ಮಾಡಲು ಜೂನ್ 30, 2023ರ ವರೆಗೆ ಗಡುವು ನೀಡಲಾಗಿತ್ತು. ಆದರೀಗ ಈ ಗಡುವು ಮುಗಿದಿದೆ. ಈ ಬೆನ್ನಲ್ಲೇ ಸರ್ಕಾರ ಈ ಆಧಾರ್- ಪಾನ್ ವಿಚಾರದಲ್ಲಿ ಹೊಸ ರೂಲ್ಸ್ ನೀಡಿದೆ. ಆಧಾರ್ (Adhaar Card) ಮತ್ತು ಪ್ಯಾನ್‌ನ್ನು (Pan Card) ಲಿಂಕ್ ಮಾಡದೇ ಐಟಿಆರ್ ಫೈಲ್ (ITR File) ಮಾಡಿದರೆ 6000ರೂ.ವರೆಗೆ ದಂಡ ವಿಧಿಸಲಾಗುವುದು ಎಂದು ಹಣಕಾಸು ಇಲಾಖೆ (Finance Department) ತಿಳಿಸಿದೆ.
ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್( Aadhaar – Pan card Link) ಲಿಂಕ್ ಮಾಡಿಸಲು ಸರ್ಕಾರವು (Government) ಕೊಟ್ಟ ಕೊನೆಯ ದಿನಾಂಕ ಮುಗಿದಿದೆ. ಒಬ್ಬ ವ್ಯಕ್ತಿಯು ಇನ್ನೂ ತಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಅವರ ಪ್ಯಾನ್ ನಿಷ್ಕ್ರಿಯಗೊಳ್ಳುತ್ತದೆ. ಪಾನ್(Pan) ನಿಷ್ಕ್ರಿಯಗೊಂಡರೆ, ನೀವು ಇದರ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕಾದ ಕೆಲವು ಸೇವೆಗಳನ್ನು ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಆದರೆ ನೀವೀಗ ದಂಡ ಪಾವತಿಸಿ ಲಿಂಕ್ ಮಾಡಬಹುದು.
ನಿಷ್ಕ್ರಿಯಗೊಂಡ ಪಾನ್ ದಂಡ ಪಾವತಿಸಿದ ಬಳಿಕ ಮತ್ತೆ ಸಕ್ರಿಯವಾಗಲು 30 ದಿನಗಳನ್ನು ತೆಗೆದುಕೊಳ್ಳುತ್ತದೆ. ಆಧಾರ್ ಪಾನ್ ಲಿಂಕ್ ಮಾಡಿಸಿ, ತಮ್ಮ ಆದಾಯ ತೆರಿಗೆ ರಿಟರ್ನ್‌ಗಳನ್ನು 31 ಜುಲೈ 2023 ರೊಳಗೆ ಸಲ್ಲಿಸಬೇಕು ಎಂದು ಶಿಫಾರಸು ಮಾಡಲಾಗಿದೆ. ಹೀಗಾಗಿ 2023ರ ಜುಲೈ 31ರ ಮೊದಲು ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸಲು ನಿಮಗೆ ಸಾಧ್ಯವಾಗದೇ ಇದ್ದರೆ ಅಂತವರಿಗೆ ಮತ್ತಷ್ಟೂ ದಂಡ ಬೀಳುವ ಸಾಧ್ಯತೆಯಿದೆ ಎನ್ನಲಾಗಿದೆ.
ಪ್ಯಾನ್ ಕಾರ್ಡ್‌ನಿಂದಾಗಿ ಐಟಿಆರ್ ಫೈಲ್ ಮಾಡುವುದು ತಡವಾದರೆ, ಅದಕ್ಕೆ 5,000 ರೂ. ದಂಡ ಕಟ್ಟಬೇಕಾಗುತ್ತದೆ. PAN ಪ್ರಸ್ತುತ ನಿಷ್ಕ್ರಿಯವಾಗಿದ್ದರೆ ನೀವು 5,000 ರೂಪಾಯಿಗಳ ತಡವಾದ ಫೈಲಿಂಗ್ ಶುಲ್ಕ ಜತೆಗೆ ಪ್ಯಾನ್ ಮತ್ತು ಆಧಾರ್‌ನ್ನು ಲಿಂಕ್‌ಗಾಗಿ 1,000 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಒಟ್ಟು ರೂ.6 ಸಾವಿರ ದಂಡ ಪಾವತಿಸಬೇಕು. ಇನ್ನು ರಿಟರ್ನ್‌ಗಳನ್ನು ಸಲ್ಲಿಸಲು ಸಾಧ್ಯವಾಗದ ತೆರಿಗೆದಾರರು 31ನೇ ಡಿಸೆಂಬರ್ 2023ರವರೆಗೆ ತಡವಾದ ರಿಟರ್ನ್‌ಗಳನ್ನು ಸಲ್ಲಿಸಬಹುದು.
ನೀವು ಜೂನ್ 30, 2023ಕ್ಕೂ ಮುನ್ನ ಆಧಾರ್ ಪ್ಯಾನ್ ಲಿಂಕ್ ಮಾಡಲು ದಂಡವನ್ನು ಪಾವತಿ ಮಾಡಿದ್ದೀರಾ? ಹಾಗಿರುವಾಗ ಪ್ಯಾನ್ ಕಾರ್ಡ್ ಏನಾಗುತ್ತದೆ ಎಂಬ ಬಗ್ಗೆ ಟ್ವಿಟ್ಟರ್ ಸ್ಪಷ್ಟಣೆಯನ್ನು ನೀಡಿದೆ. “ಶುಲ್ಕ ಪಾವತಿ ಮತ್ತು ಲಿಂಕ್ ಮಾಡಲು ಒಪ್ಪಿಗೆಯನ್ನು ಸ್ವೀಕರಿಸಿದ್ದರೆ, ಅಂದರೆ 30,06,2023 ರವರೆಗೆ ಲಿಂಕ್ ಮಾಡಿಲ್ಲದಿದ್ದರೆ, ಇಂತಹ ಪ್ರಕರಣವನ್ನು ಇಲಾಖೆಯು ಪರಿಗಣಿಸುತ್ತದೆ,” ಎಂದು ಟ್ವಿಟ್‌ನಲ್ಲಿ ತಿಳಿಸಲಾಗಿದೆ. ನೀವು ಮೊದಲೇ ದಂಡವನ್ನು ಪಾವತಿಸಿದ್ದರೆ ಈಗ ಪ್ಯಾನ್ ಆಧಾರ್ ಅನ್ನು ಲಿಂಕ್ ಮಾಡಬಹುದಾಗಿದೆ.
ಇದನ್ನು ಓದಿ: Tomato Price: ಟೊಮ್ಯಾಟೋ ಕೊಳ್ಳುವವರಿಗೆ ಮತ್ತೊಂದು ಶಾಕ್ !! ಈ ದಿನದವರೆಗೂ ಕಡಿಮೆ ಆಗೋಲ್ಲ ರೇಟ್ !!