Siddarama swamiji: ‘ಹಿಂದೂ’ ಎನ್ನುವುದು ಧರ್ಮವೇ ಅಲ್ಲ.. ! ಅಚ್ಚರಿ ಹೇಳಿಕೆಯಿಂದ ಶಾಕ್ ಕೊಟ್ಟ ಖ್ಯಾತಿ ಸ್ವಾಮಿ !
Latest news shocking news Siddarama Swamiji's Shocking Statement About Hindu Religion
Siddarama swamiji: ಹಿಂದೂ ಧರ್ಮದ ಬಗ್ಗೆ ತೋಂಟದಾರ್ಯ ಸಿದ್ದರಾಮ ಸ್ವಾಮೀಜಿ (Siddarama swamiji) ವಿವಾದಾತ್ಮಕ ಹೇಳಿಕೆ ನೀಡಿದ್ದು ಇದೀಗ ಚರ್ಚೆಗೆ ಕಾರಣವಾಗಿದೆ. ಹೌದು, ಹಿಂದೂ ಎನ್ನುವುದು ಒಂದು ಧರ್ಮವೇ ಅಲ್ಲ ಎಂದು ಸ್ವಾಮೀಜಿ ಹೇಳಿದ್ದು, ಎಲ್ಲೆಡೆ ಭಾರೀ ಸಂಚಲನ ಮೂಡಿಸಿದೆ.
ಗದಗ ತೋಂಟದಾರ್ಯ ಮಠದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸ್ವಾಮಿಜಿ, ಭಗವದ್ಗೀತೆಯಲ್ಲಿ 18 ಅಧ್ಯಾಯಗಳಿವೆ. ಅದರಲ್ಲಿ ಯಾವ ಶ್ಲೋಕದಲ್ಲಿಯೂ ಹಿಂದೂ ಎಂಬ ಪದ ಬರೆದಿಲ್ಲ. ಹಿಂದೂ ಧರ್ಮದಲ್ಲಿ ಓರ್ವ ಪ್ರವಾದಿ, ಯಾವುದೇ ನಿರ್ದಿಷ್ಟವಾದ ಗ್ರಂಥ ಇಲ್ಲ ಹಿಂದೂ ಧರ್ಮದಲ್ಲಿ ನಿರ್ದಿಷ್ಟವಾದ ದೇವರಿಲ್ಲ ಹಿಂದುಗಳು 33 ಕೋಟಿ ದೇವರನ್ನು ಪೂಜಿಸುತ್ತಾರೆ ಎಂದು ಹೇಳಿದರು.
ನಾವು ಹಿಂದೂ ವಿರೋಧಿಗಳಲ್ಲ ಜೈನರು, ಸಿಖ್ರು, ಬೌದ್ಧರು ಹಿಂದೂ ವಿರೋಧಿಗಳಲ್ಲ. ಹಿಂದೂ ಎನ್ನುವುದು ಒಂದು ಧರ್ಮವೇ ಅಲ್ಲ. ಹಿಂದೂ ಒಂದು ಜೀವನ ಮಾರ್ಗವಷ್ಟೇ. ಯಾವುದೇ ಒಂದು ಧರ್ಮ ಆಗಬೇಕಾದರೆ ಅದಕ್ಕೊಬ್ಬರು ಸ್ಥಾಪಕರಿರಬೇಕು. ಅದಕ್ಕೆ ಅದರದ್ದೇ ಆದ ಒಂದು ಸಂವಿಧಾನವಿರಬೇಕು. ಅವರು ಒಂದೇ ದೇವರನ್ನು ಪೂಜಿಸುವಂತಹವರು ಆಗಿರಬೇಕು. ಇದಕ್ಕೆ ಹಿಂದೂ ಪದ ಅನ್ವಯಿಸಲ್ಲ ಎಂದು ಡಾ. ಸಿದ್ದರಾಮ ಸ್ವಾಮೀಜಿ ಹೇಳಿಕೆ ನೀಡಿದ್ದು, ಸದ್ಯ ಈ ಹೇಳಿಕೆ ಭಾರೀ ಚರ್ಚೆಗೆ ನಾಂದಿ ಹಾಡಿದೆ.
ಇದನ್ನು ಓದಿ: Bar And Restaurant: ಮಧ್ಯಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ – 24 ಗಂಟೆಯೂ ಬಾರ್