Chaluvaraya Swamy: ದೇವೇಗೌಡ್ರ ಹೆಸರೆತ್ತದೆ ರಾಜಕೀಯ ಮಾಡೋ ತಾಕತ್ತಿಲ್ಲ, ಯಾವುದೇ ಒಕ್ಕಲಿಗರ ಬೆಳವಣಿಗೆ ಸಹಿಸಲ್ಲ- ‘ಕುಮಾರಣ್ಣ’ನ ವಿರುದ್ಧ ‘ಚೆಲುವಣ್ಣ’ ಆಕ್ರೋಶ !!

LAtest news political news Chaluvaraya Swamy has expressed his anger against H.D kumaraswamy

Share the Article

Chaluvaraya Swamy: ಒಕ್ಕಲಿಗ ಸಮುದಾಯದಲ್ಲಿ ಬೇರೆ ನಾಯಕರು ಬೆಳೆಯುವುದನ್ನು ಎಚ್.ಡಿ.ಕುಮಾರಸ್ವಾಮಿ ಸಹಿಸುವುದಿಲ್ಲ. ಒಕ್ಕಲಿಗರು ಎಂಬ ಕಾರಣಕ್ಕೇ ನಮ್ಮ ವಿರುದ್ಧ ನಿಂತಿದ್ದಾರೆ. ನಾನು ಒಕ್ಕಲಿಗ ನಾಯಕ ಎಂಬ ಕಾರಣಕ್ಕೆ ನನ್ನ ಮೇಲೆ ದ್ವೇಷ ಕಾರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ (Chaluvaraya Swamy) ಅವರು ಎಚ್.ಡಿ.ಕುಮಾರಸ್ವಾಮಿ (H.D kumaraswamy)ವಿರುದ್ಧ ಕಿಡಿಕಾರಿದ್ದಾರೆ.

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಒಕ್ಕಲಿಗ ಸಮುದಾಯದವರಾದ ಮಂಡ್ಯ ಜಿಲ್ಲೆಯ ಚಂದ್ರೇಗೌಡ ಎಂಬ ಅಧಿಕಾರಿಯನ್ನು ವರ್ಷದಲ್ಲಿ ಏಳು ಬಾರಿ ವರ್ಗಾವಣೆ ಮಾಡಿದ್ದಾರೆ. ಹಾಗೂ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ನಾಗರಾಜ್ ಅವರನ್ನು ತಪ್ಪಿಲ್ಲದಿದ್ದರೂ ಅಮಾನತು ಮಾಡಿದ್ದಾರೆ. ಒಕ್ಕಲಿಗರಿಗೆ ಹೆಚ್ಚು ಅವಕಾಶ ಸಿಗಬಾರದು ಎಂಬ ಭಾವನೆ ಅವರಿಗಿದೆ ಎಂದರು.

ಅಲ್ಲದೆ, ಕುಮಾರಸ್ವಾಮಿಗೆ ದೇವೇಗೌಡ್ರ ಹೆಸರೆತ್ತದೆ ರಾಜಕೀಯ ಮಾಡೋ ತಾಕತ್ತಿಲ್ಲ. ಗೌಡರ ಹೆಸರು ಹೇಳದಿದ್ದರೆ ತಮ್ಮ ಬೇಳೆಕಾಳು ಬೇಯಲ್ಲ ಅನ್ನುವುದು ಅವರಿಗೂ ಗೊತ್ತಿದೆ. ಅದಕ್ಕಾಗಿ ಅವರು ಪ್ರತಿದಿನ ಪ್ರತಿಕ್ಷಣ ದೇವೇಗೌಡರ ಹೆಸರೆತ್ತಿ ಮಾತು ಆರಂಭಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

 

ಇದನ್ನು ಓದಿ: Nurse patient love affair: ಆಸ್ಪತ್ರೆಯಲ್ಲೇ ರೋಗಿ ಜೊತೆ ಸಂಭೋಗ ನಡೆಸಿದ ನರ್ಸ್ !! ಆವೇಶ ಹೆಚ್ಚಾದಂತೆ ಸ್ಥಳದಲ್ಲೇ ರೋಗಿ ಸಾವು!! 

Leave A Reply