Home Karnataka State Politics Updates HD Kumaraswamy: ಕುಮಾರಸ್ವಾಮಿಯ ಕಪ್ಪು ಪೆನ್ ಡ್ರೈವ್ ಸೋಮವಾರ ಬ್ಲಾಸ್ಟ್ ?!

HD Kumaraswamy: ಕುಮಾರಸ್ವಾಮಿಯ ಕಪ್ಪು ಪೆನ್ ಡ್ರೈವ್ ಸೋಮವಾರ ಬ್ಲಾಸ್ಟ್ ?!

HD Kumaraswamy
Image source: Kannada prabha

Hindu neighbor gifts plot of land

Hindu neighbour gifts land to Muslim journalist

HD Kumaraswamy: ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿರುವ ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಅವರು ಈಗಾಗಲೇ ಕಳೆದ ಬುಧವಾರ ವಿಧಾನಸೌಧಕ್ಕೆ ಪೆನ್‌ಡ್ರೈವ್‌ನೊಂದಿಗೆ ಆಗಮಿಸಿದ್ದು, ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆದಿರುವುದು ಸಾಬೀತಾಗಿದೆ ಮತ್ತು ನನ್ನಲ್ಲಿ ಪೆನ್ ಡ್ರೈವ್‌ನಲ್ಲಿ ಆಡಿಯೋ ಸಾಕ್ಷ್ಯವಿದೆ ಎಂದು ಹೇಳಿಕೊಂಡಿದ್ದರು. ಆದರೆ ಪೆನ್ ಡ್ರೈವ್ ಬಿಡುಗಡೆ ಮಾಡಿರಲಿಲ್ಲ.

ಇದೀಗ ವರ್ಗಾವಣೆ ದಂಧೆಗೆ ಸಂಬಂಧಿಸಿದ ದಾಖಲೆಯಾದ ಪೆನ್ ಡ್ರೈವ್ ಬಿಡುಗಡೆ ಮಾಡಲು ಸೋಮವಾರ ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಹೌದು, ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸೋಮವಾರ ಪೆನ್ ಡ್ರೈವ್ ಆಡಿಯೋ ವನ್ನು ವಿಧಾನ ಸಭೆಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಸದನದಲ್ಲಿ ಬಿಜೆಪಿ (BJP) ಸಹಕಾರದೊಂದಿಗೆ ಸಿದ್ದರಾಮಯ್ಯ (Siddaramaiah) ಟಾರ್ಗೆಟ್ ಮಾಡಿದೆ ಎನ್ನಲಾಗ್ತಿದೆ. ಕುಮಾರಣ್ಣನ ನಂಬಿಕಸ್ಥ ಅಧಿಕಾರಿಗಳು ಪೆನ್‌ಡ್ರೈವ್ ಅಸಲಿಗೆ ಕಾರಣ ಎಂಬ ಚರ್ಚೆ ಶುರುವಾಗಿದೆ.

ಮುಖ್ಯವಾಗಿ 4 ಇಲಾಖೆಗಳಲ್ಲಿ ಮೂವರು ಪ್ರಭಾವಿಗಳ ಸಂಭಾಷಣೆಯ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಪೆನ್‌ಡ್ರೈವ್‌ನ ಪ್ರಮುಖ ಅಧಿಕಾರಿಗಳ ವಿಚಾರದಲ್ಲಿ ಸಂಭಾಷಣೆ ನಡೆಸುತ್ತಿರುವ ಆಡಿಯೋಗಳನ್ನೇ ಮುಂದಿಟ್ಟುಕೊಂಡು ಕುಮಾರಸ್ವಾಮಿ ಪೆಡ್ರೈವ್ ಎಂಬ ರಾಮಬಾಣ ಹೂಡಲಿದ್ದಾರೆ. ಬಜೆಟ್ ಬಳಿಕ ಅಸಲಿ ಆಟ ಶುರು ಅಂತಾ ಆಪ್ತರ ಬಳಿ ಕುಮಾರಸ್ವಾಮಿ ಹೇಳಿಕೊಂಡಿದ್ದಾರಂತೆ.

ಸದ್ಯ ಆಡಳಿತಡಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಯಾವೆಲ್ಲಾ ಸವಾಲುಗಳು ಮುಂದೆ ಬರಲಿದೆ ಎಂದು ಕಾದುನೋಡಬೇಕಿದೆ.

ಇದನ್ನೂ ಓದಿ: ಚೆನ್ನಾಗಿ ಅಡುಗೆ ಮಾಡುತ್ತಾನೆಂದು ಅಡುಗೆ ಭಟ್ಟನನ್ನೇ ಕೊಲೆ ಮಾಡಿದ ಸ್ನೇಹಿತರು !