Bike Wheeling: ಎಚ್ಚರ, ಇನ್ಮುಂದೆ ತಮಾಷೆಗೂ ಬೈಕ್ ವ್ಹೀಲಿಂಗ್ ಮಾಡಿದ್ರೆ ಬೀಳೋದು ಕ್ರಿಮಿನಲ್ ಕೇಸೇ !

Latest news shocking news criminal case will be registered for bike wheeling

Bike Wheeling: ಯುವಕರು ಬೈಕ್ ರೈಡ್ ಶೋ ಮಾಡೋದನ್ನು ಅಲ್ಲಲ್ಲಿ ನಾವು ನೋಡಬಹುದು. ಪ್ರಪಂಚದ ಅರಿವಿಲ್ಲದೆ ಯರ್ರಾ ಬಿರ್ರಿ ರೋಡಲ್ಲಿ ಅಡ್ಡಾಡುತ್ತಾ ತಮಾಷೆ ಮಾಡೋರಿಗೆ ಇದೀಗ ಬಿಗ್ ಶಾಕ್ ಕಾದಿದೆ.

ಹೌದು, ಕೆಲ ದಿನಗಳಿಂದ ಬಿಡುವಿಲ್ಲದಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು, ವ್ಹೀಲಿಂಗ್ (Bike Wheeling) ಮಾಡಿ ಪುಂಡಾಟ ಮೆರೆದ ಮೂವರು ಅಪ್ರಾಪ್ತರು ಸೇರಿ 9 ಮಂದಿಯನ್ನು ಬಂಧಿಸಿ, 30 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ವ್ಹೀಲಿಂಗ್ ಮಾಡಿ ಕಿರಿಕಿರಿ ಉಂಟಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಈಗಾಗಲೇ ಬಂಧಿತ ಒಂಭತ್ತು ಮಂದಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸಂಚಾರ ನಿಯಮ ಉಲ್ಲಂಘಿಸಿ ಸಾರ್ವಜನಿಕರಿಗೆ ತೊಂದರೆ ನೀಡುವವರ ಚಾಲನಾ ಪರವಾನಗಿ ರದ್ದು ಮಾಡುವ ಸಂಬಂಧ ಆರ್‌ಟಿಓ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಮುಂದಿನ ದಿನಗಳಲ್ಲಿ ಆ ಕೆಲಸವನ್ನು ಮಾಡಲಾಗುವುದು. ಪುಂಡಾಟ ಮಾಡಿ ಸಿಕ್ಕಿಬಿದ್ದ ಅಪ್ರಾಪ್ತ ರ ಪೋಷಕರನ್ನು ಠಾಣೆಗೆ ಕರೆಸಿ ತಿಳುವಳಿಕೆ ಹೇಳಿರುವ ಜೊತೆಗೆ ಬೈಕ್ ಮೆಕ್ಯಾನಿಕ್‌ಗಳ ಸಭೆ ನಡೆಸಿ ಎಚ್ಚರಿಕೆಯನ್ನೂ ನೀಡಿದೆ ಎಂದು ತಿಳಿಸಿದರು.

ಅಲ್ಲದೇ ವ್ಹೀಲಿಂಗ್ ಮಾಡುತ್ತಿರುವವರ 9 ಬೈಕ್ ಜೊತೆಗೆ ಕರ್ಕಶ ಸದ್ದು ಮಾಡುವಂತೆ ಬೈಕ್ ಸೈಲೆನ್ಸರ್‌ಗಳನ್ನು ಅಳವಡಿಸಿಕೊಂಡು, ಪಾದಚಾರಿಗಳು, ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವವರ ಮೇಲೂ ಕ್ರಮ ಕೈಗೊಳ್ಳಲಾಗಿದೆ. ಆ ರೀತಿಯ 15 ಬೈಕ್‌ಗಳನ್ನು ವಶಕ್ಕೆ ಪಡೆದು ಅದರ ಸೈಲೆನ್ಸರ್‌ಗಳನ್ನು ಮುಟ್ಟುಗೋಲು ಹಾಕಿಕೊಂಡು, ಸಂಬಂಧಿಸಿದವರಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.

ಇಂತಹ ಕಾನೂನು ಬಾಹಿರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಮೆಕ್ಯಾನಿಕ್ ಶಾಪ್ ಮತ್ತು ದ್ವಿಚಕ್ರ ವಾಹನ ಬಿಡಿಭಾಗಗಳ ಮಾರಾಟ ಅಂಗಡಿಗಳ ಮೇಲೂ ದಾಳಿ ನಡೆಸಿ 27 ಸೈಲೆನ್ಸರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.

ನಗರದ ಸಹ್ಯಾದ್ರಿ ವೃತ್ತದ ಬಳಿ ವ್ಹೀಲಿಂಗ್ ಮಾಡಿಸಿಕೊಂಡ ಇಬ್ಬರು ಯುವತಿಯರಿದ್ದ ಬೈಕ್‌ಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ ಪ್ರಕರಣ ಮತ್ತು ನಕಲಿ ಬಂದೂಕು ಹಿಡಿದು ಬೈಕ್‌ನಲ್ಲಿ ಅಲೆದಾಡುತ್ತಿದ್ದ ಇಬ್ಬರು ಯುವಕರು ಪತ್ತೆಯಾದ ಪ್ರಕರಣಗಳ ನಂತರ ಕಾರ್ಯಾಚರಣೆಯನ್ನು ತೀವ್ರಗೊಳಿಸಿ, ವ್ಹೀಲಿಂಗ್ ಮಾಡುವವರ ಇನ್ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಅಕೌಂಟ್‌ನಲ್ಲಿ ಪರಿಶೀಲಿಸಿದ ನಂತರ ಅಪ್‌ಲೋಡ್ ಮಾಡಿದ ವೀಡಿಯೊ ಮತ್ತು ಪುಂಡರ ಪತ್ತೆ ಕಾರ್ಯ ನಡೆಯುತ್ತಿದೆ.

ಮುಖ್ಯವಾಗಿ ಇನ್ನುಮುಂದೆ ಅಪರಾಧ ಪ್ರಕರಣಗಳು ಕಂಡುಬಂದರೆ ಸಾರ್ವಜನಿಕರು ಅದರ ವೀಡಿಯೊ ಅಥವಾ ಫೋಟೋ ತೆಗೆದು ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕು. ಸಮಾಜದಲ್ಲಿ ಶಾಂತಿ ಕಾಪಾಡಲು ಸಾರ್ವಜನಿಕರ ಪಾತ್ರವು ಪೊಲೀಸ್ ಇಲಾಖೆಗೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.

 

ಇದನ್ನು ಓದಿ: Udyogini: ಉಚಿತ ಪ್ರಯಾಣ, ಗೃಹಲಕ್ಷ್ಮೀ ಬೆನ್ನಲ್ಲೇ ಮಹಿಳೆಯರಿಗೆ ಮತ್ತೊಂದು ಭಾಗ್ಯದ ಸಿಹಿ ಸುದ್ದಿ !! ಸರ್ಕಾರದ ಮಹತ್ವದ ಘೋಷಣೆ. 

Leave A Reply

Your email address will not be published.