shop licence: ಅಂಗಡಿ ಪರವಾನಿಗೆ ಮತ್ತು ನವೀಕರಣ ಕಡ್ಡಾಯ, ಆಯುಕ್ತರ ಹೊಸ ಆದೇಶ !

Commissioner new order shop license and renewal mandatory

shop licence: ಈಗಾಗಲೇ ಆಯುಕ್ತರು ಪರಿಶೀಲನೆ ಮಾಡಿರುವ ದಾಖಲೆಗಳ ಪ್ರಕಾರ ಅನೇಕ ಅಂಗಡಿ ಮಾಲಿಕರು ಪರವಾನಗಿ ಪಡೆಯದೆ ಉದ್ದಿಮೆ ನಡೆಸುತ್ತಿರುವುದು ಕಲಬುರಗಿ ನಗರದಲ್ಲಿ ಕಂಡುಬಂದಿದೆ. ಈ ಹಿನ್ನೆಲೆ ಕಲಬುರಗಿ ನಗರದ ಎಲ್ಲಾ ಉದ್ದಿಮೆದಾರರು, ಕಡ್ಡಾಯವಾಗಿ ಮಹಾನಗರ ಪಾಲಿಕೆಯಿಂದ ಉದ್ದಿಮೆ ಪರವಾನಿಗೆ/ ನವೀಕರಣ (shop licence) ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ಇನ್ನು ಹೊಸದಾಗಿ ಉದ್ದಿಮೆ ಆರಂಭಿಸುವ, ನವೀಕರಣಕ್ಕಾಗಿ ಅರ್ಜಿದಾರರು ಉದ್ದಿಮೆ ಪರವಾನಿಗೆ ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಆಧಾರ್ ಕಾರ್ಡ್, ಬಾಡಿಗೆ ಕರಾರು ಪತ್ರ, ಚಾಲ್ತಿ ವರ್ಷದ ಆಸ್ತಿ ಪಾವತಿಸಿದ ರಶೀದಿ, ಎರಡು ಪಾಸ್‌ಪೋರ್ಟ್ ಅಳತೆಯ ಫೋಟೋ ಹಾಗೂ ನಿರಾಪೇಕ್ಷಣಾ ಪತ್ರ/ ಸ್ವಯಂ ಘೋಷಣಾ ಪತ್ರವನ್ನು ಲಗತ್ತಿಸಬೇಕೆಂದು ತಿಳಿಸಲಾಗಿದೆ.

ಒಂದು ವೇಳೆ ಉದ್ದಿಮೆದಾರರು, ಕಡ್ಡಾಯವಾಗಿ ಮಹಾನಗರ ಪಾಲಿಕೆಯಿಂದ ಉದ್ದಿಮೆ ಪರವಾನಿಗೆ/ ನವೀಕರಣ ಮಾಡಲು ತಪ್ಪಿದ್ದಲ್ಲಿ ಕೆ.ಎಂ.ಸಿ. ಕಾಯ್ದೆ ೧೯೭೬ ರನ್ವಯ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರು ಆದೇಶ ಮಾಡಿದ್ದಾರೆ.

Leave A Reply

Your email address will not be published.