Intresting News: ಈ 3 ಜನ ಮಾತ್ರ ಇಡೀ ಜಗತ್ತಿನಲ್ಲಿ ಪಾಸ್ ಪೋರ್ಟ್ ಇಲ್ಲದೆ ಓಡಾಡ್ಬೋದು !

Intresting News Only these 3 people can travel without a passport in the whole world

Intresting News: ವಿದೇಶಕ್ಕೆ ಪ್ರಯಾಣಿಸಬೇಕು ಅಂದ್ರೆ ಪಾಸ್ ಪೋರ್ಟ್ ಅಗತ್ಯವಾಗಿದೆ. ಪಾಸ್ ಪೋರ್ಟ್ ಇಲ್ಲದೆ ಹೋದರೆ ವಿದೇಶ ಪ್ರಯಾಣ ಬೆಳೆಸುವುದು ಸಾಧ್ಯವಿಲ್ಲ. ಆದರೆ, ಈ ಮೂವರು ಪಾಸ್‌ಪೋರ್ಟ್‌ ಇಲ್ಲದೆ ಜಗತ್ತಿನ ಯಾವ ಮೂಲೆಗೆ ಬೇಕಾದರೂ ಪ್ರಯಾಣಿಸಬಹುದು. ಯಾರವರು ?! ಇಲ್ಲಿದೆ ನೋಡಿ ಮಾಹಿತಿ (Intresting News).

ಯುನೈಟೆಡ್ ಕಿಂಗ್‌ಡಮ್‌ನ ಕಿಂಗ್ ಚಾರ್ಲ್ಸ್ III, ಜಪಾನ್‌ನ ಚಕ್ರವರ್ತಿ ನರುಹಿಟೊ ಮತ್ತು ಸಾಮ್ರಾಜ್ಞಿ ಮಸಾಕೊ. ಈ ಮೂವರಿಗೆ ಬೇರೆ ದೇಶಗಳಿಗೆ ಹೋಗಲು ಪಾಸ್‌ಪೋರ್ಟ್‌ ಬೇಕಿಲ್ಲ. ಈ ಮೂವರು ವಿದೇಶದ ಯಾವ ಮೂಲೆಗೆ ಬೇಕಿದ್ದರೂ ಪ್ರಯಾಣಿಸಬಹುದು. ಕಿಂಗ್ ಚಾರ್ಲ್ಸ್ III ರ ಮೊದಲು, ಈ ಸವಲತ್ತು ದಿವಂಗತ ರಾಣಿ ಎಲಿಜಬೆತ್ IIರ ಬಳಿ ಇತ್ತು.

ಪಾಸ್‌ಪೋರ್ಟ್‌ನ ಬದಲಿಗೆ ಡಾಕ್ಯುಮೆಂಟ್ ಅನ್ನು ಯುಕೆ ರಾಜನ ಅಥವಾ ರಾಣಿಯ ಹೆಸರಿನಲ್ಲಿ ನೀಡಲಾಗುತ್ತದೆ. ಹೀಗಾಗಿ ಯುಕೆಯ ರಾಜ ಅಥವಾ ರಾಣಿಗೆ ಪಾಸ್‌ಪೋರ್ಟ್‌ ಇರುವುದಿಲ್ಲ.‌ ಜಪಾನ್‌ ರಾಜ, ರಾಣಿ ಇಬ್ಬರಿಗೂ ಇಲ್ಲಿ ಪಾಸ್‌ಪೋರ್ಟ್‌ ಅಗತ್ಯವಾಗಿಲ್ಲ. ಸಾಮಾನ್ಯ ಪ್ರಜೆಯಾಗಿ ಪಾಸ್‌ಪೋರ್ಟ್ ಬಳಸಿಕೊಂಡು ಚಕ್ರವರ್ತಿ ವಲಸೆ ಅಥವಾ ವೀಸಾ ಕಾರ್ಯವಿಧಾನಗಳಿಗೆ ಒಳಗಾಗುವುದು ಹೆಚ್ಚು ಸೂಕ್ತವಲ್ಲ ಎಂದು ಇಬ್ಬರಿಗೂ ಇದನ್ನು ನೀಡಲಿಲ್ಲ. ಯುಕೆಯ ಕಿಂಗ್ ಚಾರ್ಲ್ಸ್ III ಅವರ ಪತ್ನಿ ರಾಣಿ ಕಾನ್ಸೋರ್ಟ್ ಕ್ಯಾಮಿಲ್ಲಾ ಈ ವಿನಾಯಿತಿ ಹೊಂದಿಲ್ಲ ಮತ್ತು ಇವರು ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ಇಟ್ಟುಕೊಳ್ಳಬೇಕಾಗುತ್ತದೆ.

 

ಇದನ್ನು ಓದಿ: CM Siddaramaiah: 3 ಗಂಟೆಗೂ ಅಧಿಕ ಸಮಯ ಬಜೆಟ್ ಭಾಷಣ: ಮುಖ್ಯಮಂತ್ರಿಗಳಿಗೆ ಕಾಣಿಸಿಕೊಂಡ ವಿಪರೀತ ಕೆಮ್ಮು, ಬಹುತೇಕ ಕಾರ್ಯಕ್ರಮ ರದ್ದು 

Leave A Reply

Your email address will not be published.