Congress Government: ಬಿಜೆಪಿ ಸರ್ಕಾರದ ಬರೋಬ್ಬರಿ 17 ಯೋಜನೆಗಳಿಗೆ ಕೊಕ್ಕೆ ಮಡಗಿದ ಡಿಕೆ – ಸಿದ್ದು ಜೋಡಿ

Congress Government Siddaramaiah d k Sivakumar 17 projects of BJP government have been dropped in the budget

Congress Government : ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರದಂದು 14ನೇ ಬಾರಿಗೆ ಬಜೆಟ್‌ (Karnataka Budget 2023) ಮಂಡನೆ ಮಾಡಿದ್ದು , ಹಲವಾರು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಕಾಂಗ್ರೆಸ್‌ ಸರ್ಕಾರದ (Congress Government) ಐದು ಗ್ಯಾರಂಟಿಗಳು ಸೇರಿದಂತೆ ಮೂಲಸೌಕರ್ಯಕ್ಕೂ ಒತ್ತು ನೀಡಿದ್ದಾರೆ. ಆದರೆ ಬಿಜೆಪಿ ಸರ್ಕಾರದ 17 ಯೋಜನೆಗಳನ್ನು ಬಜೆಟ್ ನಲ್ಲಿ ಕೈಬಿಟ್ಟಿದ್ದಾರೆ ಎನ್ನಲಾಗಿದೆ.

ಈಗಾಗಲೇ ಬಿಜೆಪಿ ಸರ್ಕಾರದಲ್ಲಿ ಜಾರಿಗೊಳಿಸಿದ್ದ ಎನ್ ಐಪಿ, ವಿದ್ಯಾನಿಧಿ, ಜಿಲ್ಲೆಗೊಂದು ಗೋಶಾಲೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ನಮ್ಮ ಕ್ಲಿನಿಕ್ ಸೇರಿದಂತೆ 17ಕ್ಕೂ ಹೆಚ್ಚು ಯೋಜನೆಗಳನ್ನು ಸಿದ್ದರಾಮಯ್ಯ ಸರ್ಕಾರವು ಕೈಬಿಟ್ಟಿರುವುದು ಬಿಜೆಪಿಗೆ ಮತ್ತಷ್ಟು ಹೊಡೆತ ಬಿದ್ದಂತಾಗಿದೆ.

ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ, ಭೂಸಿರಿ ಯೋಜನೆ, ಜಿಲ್ಲೆಗೊಂದು ಗೋಶಾಲೆ ಯೋಜನೆ, ನಮ್ಮ ಕ್ಲಿನಿಕ್ ಯೋಜನೆ, ಮಹಿಳಾ ಸಾಮಾರ್ಥ್ಯ ಯೋಜನೆ, ಕೃಷಿ ಭೂಮಿ ಕಾಯ್ದೆ ಸೇರಿದಂತೆ ಹಲವು ಯೋಜನೆಗಳಿಗೆ ಸಿದ್ದರಾಮಯ್ಯ ಸರ್ಕಾರ ಅಡ್ಡಗಾಲು ಹಾಕಿದೆ.

ಮುಖ್ಯವಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಠ್ಯಪರಿಷ್ಕರಣೆ, ರೈತರು, ಮೀನುಗಾರರು, ಟ್ಯಾಕ್ಸಿ ಚಾಲಕರು ಸೇರಿದಂತೆ ಇತರ ವರ್ಗದ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡುತ್ತಿದ್ದ ವಿದ್ಯಾನಿಧಿ ಯೋಜನೆ ಸಹ ರಾಜ್ಯ ಸರ್ಕಾರ ಸ್ಥಗಿತಗೊಂಡಿದೆ.

ಸದ್ಯ ಬಜೆಟ್ ಮಂಡನೆಯಲ್ಲಿ 17ಕ್ಕೂ ಹೆಚ್ಚು ಯೋಜನೆಗಳನ್ನು ಸಿದ್ದರಾಮಯ್ಯ- ಡಿಕೆ ಸರ್ಕಾರವು ಕೈಬಿಟ್ಟಿರುವುದು ಬಿಜೆಪಿಯನ್ನು ಮತ್ತೆ ಕೆರಳಿಸುವಂತೆ ಮಾಡಿದೆ.

 

ಇದನ್ನು ಓದಿ: Bhagya lakshmi: ಯಡಿಯೂರಪ್ಪನ ‘ಭಾಗ್ಯಲಕ್ಷ್ಮೀ’ ಗೆ ಸಿದ್ದರಾಮಯ್ಯ ಕೋಕ್ !! ರಾಜದಲ್ಲೀಗ ‘ಗೃಹಲಕ್ಷ್ಮಿ’ಯೇ ರಾಕ್ !!

Leave A Reply

Your email address will not be published.