Telecom News: ಒಂದಕ್ಕಿಂತ ಹೆಚ್ಚು ಸಿಮ್ ಬಳಕೆ ಮಾಡುತ್ತಿದ್ದೀರಾ ! ಕೇಂದ್ರದಿಂದ ಕಾದಿದೆ ಬಿಗ್ ಶಾಕ್, ತಕ್ಷಣದಿಂದ ಜಾರಿ ?!

latest news Telecom News Are you using more than one SIM Shocking news from the center

Telecom Company: ದೇಶದಲ್ಲಿ ಹಲವಾರು ಟೆಲಿಕಾಂ ಕಂಪನಿಗಳಿವೆ (Telecom Company). ಇತ್ತೀಚೆಗೆ ಗ್ರಾಹಕರ ಬಳಕೆ ಹೆಚ್ಚಾಗಿದ್ದು, ಟೆಲಿಕಾಂ ವಲಯದಲ್ಲಾಗುತ್ತಿರುವ ಕೆಲವೊಂದು ವಂಚನೆ, ಸಮಸ್ಯೆಗಳನ್ನು ನಿವಾರಿಸುವ ಉದ್ದೇಶದಿಂದ ಇದೀಗ ಕೇಂದ್ರ ಟೆಲಿಕಾಂ ವಲಯ ಹೊಸ ಹೊಸ ಬದಲಾವಣೆಗಳನ್ನು ಸಹ ತರುತ್ತಿದೆ.

ಈಗಾಗಲೇ ಕೇಂದ್ರ ಸರ್ಕಾರ (Central Govt) 2021ರಲ್ಲಿ ಟೆಲಿಕಾಂ ವಲಯದ ಬಗ್ಗೆ ಹೊಸ ಕ್ರಮಗಳನ್ನು ಪ್ರಸ್ತಾಪಿಸಿತ್ತು. ಈ ಕ್ರಮಗಳು ಈ ವರ್ಷದೊಳಗೆ ಜಾರಿಯಾಗುವ ಸಾಧ್ಯತೆಯಿದೆ. ಇನ್ನು ಈ ಕ್ರಮಗಳ ಬಗ್ಗೆ ಕೆಲದಿನಗಳ ಹಿಂದೆ ಕೇಂದ್ರ ಟೆಲಿಕಾಂ ಸಚಿವ (Union Telecom Minister) ಅಶ್ವಿನಿ ವೈಷ್ಣವ್​ ಮಾತನಾಡಿ ಮುಂದಿನ ದಿನಗಳಲ್ಲಿ ಟೆಲಿಕಾಂ ಸುಧಾರಣೆಗಳ ಕುರಿತು ಕ್ರಮಗಳನ್ನು ಜಾರಿ ಮಾಡಲಾಗುವುದು ಎಂದು ಹೇಳಿದ್ದಾರೆ. ಇನ್ನು ಈ ಸುಧಾರಣಾ ಕ್ರಮಗಳಲ್ಲಿ ಒಂದು ಗುರುತಿನ ಚೀಟಿಗೆ ಸಿಮ್​ ಕಾರ್ಡ್​​ಗಳ ಸಂಖ್ಯೆಯ ಮಿತಿಯನ್ನು ಕಡಿಮೆ ಮಾಡುವುದಾಗಿ ಎ ವೈಷ್ಣವ್ ಹೇಳಿದ್ದಾರೆ.

ಇನ್ನು ಇದುವರೆಗೆ ಒಂದು ಆಧಾರ್​ ಕಾರ್ಡ್​ನಲ್ಲಿ 9 ರವರೆಗೆ ಸಿಮ್​ ಕಾರ್ಡ್​​ಗಳನ್ನು ಖರೀದಿ ಮಾಡಬಹುದಿತ್ತು. ಆದರೆ ಇನ್ಮುಂದೆ ಈ ಸಂಖ್ಯೆ ಮತ್ತಷ್ಟು ಕಡಿಮೆ ಮಾಡುವುದಾಗಿ ಹೇಳಲಾಗಿದೆ. ಸದ್ಯ ಈ ಬಗ್ಗೆ ಪ್ರಸ್ತಾಪ ಮಾತ್ರ ಮಾಡಲಾಗಿದ್ದು, ಎಷ್ಟು ಸಿಮ್ ನೀಡುತ್ತಾರೆ ಎಂದು ನಿಖರವಾಗಿ ತಿಳಿಸಿಲ್ಲ.

ಮುಖ್ಯವಾಗಿ ಇತ್ತೀಚೆಗೆ ಸಿಮ್​ ಬಳಕೆಯಲ್ಲಾಗುತ್ತಿರುವ ವಂಚನೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಜಾರಿಗೊಳಿಸಲಾಗಿದೆ ಎನ್ನಲಾಗಿದೆ.

 

ಇದನ್ನು ಓದಿ: Falaknuma Express Train: ಎಕ್ಸ್‌ಪ್ರೆಸ್‌ ರೈಲಿನಲ್ಲಿ ಭಾರಿ ಬೆಂಕಿ: 3 ಬೋಗಿಗಳು ಸುಟ್ಟು ಕರಕಲು 

Leave A Reply

Your email address will not be published.