World’s Richest Actor: ಜಗತ್ತಿನ ಶ್ರೀಮಂತ ನಟ ಯಾರು ? ಪಟ್ಟಿಯಿಂದ ಶಾರುಕ್ ಔಟ್ ; ಈತನೇ ನೋಡಿ ವಿಶ್ವದ ಮೋಸ್ಟ್ ರಿಚ್ ನಟ !

latest news cinima news He is the World's Richest Actor

World’s Richest Actor: ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರುಖ್‌ ಖಾನ್‌ (Sharukh khan) ಅವರಿಗೆ ಭಾರತದಲ್ಲಿ ಮಾತ್ರವಲ್ಲದೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಕಳೆದ ಮೂರು ದಶಕಗಳಲ್ಲಿ 90ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಶಾರುಖ್‌ ಖಾನ್‌ ಇದೀಗ ಜಾಗತಿಕ ಸಿನಿಮಾರಂಗದಲ್ಲೂ ಯಶಸ್ವಿ ನಾಯಕ ನಟರ ಸಾಲಿನಲ್ಲಿದ್ದಾರೆ. (World’s Richest Actors) ಆದರೆ, ಸದ್ಯ ಜಗತ್ತಿನ ಅತ್ಯಂತ ಶ್ರೀಮಂತ ನಟರ ಪಟ್ಟಿಯಲ್ಲಿದ್ದ ಶಾರುಖ್‌ ಖಾನ್‌ ರನ್ನು ಹಿಂದಕ್ಕೆ ಹಾಕಿ ವಿಶ್ವದ ಶ್ರೀಮಂತ ನಟನ ಸ್ಥಾನವನ್ನು ಮತ್ತೋರ್ವ ನಟ ಅಲಂಕರಿಸಿದ್ದಾರೆ.

ಈ ಹಿಂದೆ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಫೋರ್ಡ್‌ ಶ್ರೀಮಂತ ನಟರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದರು. ಅವರ ನಂತರ ಟಾಮ್ ಕ್ರೂಸ್, ಡ್ವೇನ್ ಜಾನ್ಸನ್, ಜಾಕಿ ಚಾನ್, ಜಾರ್ಜ್ ಕ್ಲೂನಿ, ರಾಬರ್ಟ್ ಡಿ ನಿರೋ ಮತ್ತು ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಆ ಸ್ಥಾನಕ್ಕೇರಿದ್ದರು. ಶಾರುಖ್‌ ಖಾನ್‌ ಸಂಪತ್ತು ಅಂದಾಜು 770 ದಶಲಕ್ಷ ಡಾಲರ್.‌ ಅಂದರೆ ರೂಪಾಯಿ ಲೆಕ್ಕದಲ್ಲಿ 6,306 ಕೋಟಿ ರೂ. ಇತ್ತು. ಆದರೆ, ಪ್ರಸ್ತುತ, ಟೈಲರ್ ಪೆರ್ನಿ ಶಾರುಕ್ ನನ್ನು ಹಿಂದಿಕ್ಕಿ ಉನ್ನತ ಸ್ಥಾನದಲ್ಲಿದ್ದಾರೆ.

ಟೈಲರ್ ಪೆರ್ರಿ (Tyler Perry) ಪ್ರಸಿದ್ಧ ಅಮೇರಿಕನ್ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರ. ಪ್ರಸ್ತುತ ವಿಶ್ವದ ಶ್ರೀಮಂತ ನಟ ಎಂಬ ಟ್ಯಾಗ್ ಟೈಲರ್ ಪೆರ್ರಿಗೆ ಸೇರಿದೆ. ಫೋರ್ಬ್ಸ್ ಪ್ರಕಾರ, 53 ವರ್ಷ ವಯಸ್ಸಿನವರಾದ ಟೈಲರ್ 2022 ರ ವೇಳೆಗೆ $ 1 ಬಿಲಿಯನ್ (ರೂ. 8,200 ಕೋಟಿಗಿಂತ ಹೆಚ್ಚು) ಸಂಪಾದಿಸಿದ್ದಾರೆ. ಅವರು 2011 ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದರು.

ಟೇಲರ್ ಪೆರ್ರಿ ಸೆಪ್ಟೆಂಬರ್ 13, 1969 ರಂದು ಯುಎಸ್ಎಯ ಲೂಸಿಯಾನಾದಲ್ಲಿ ಜನಿಸಿದರು. 2005 ರಲ್ಲಿ ಬಿಡುಗಡೆಯಾದ ಡೈರಿ ಆಫ್ ಎ ಮ್ಯಾಡ್ ಬ್ಲ್ಯಾಕ್ ವುಮನ್ ಚಿತ್ರದ ಮೂಲಕ ಅವರು ನಟ, ನಿರ್ಮಾಪಕ ಮತ್ತು ನಾಟಕ ಬರಹಗಾರರಾಗಿ ಚಲನಚಿತ್ರೋದ್ಯಮವನ್ನು ಪ್ರವೇಶಿಸಿದರು. ಮಾಬೆಲ್ ಮೇಡಿಯಾ ಸಿಮನ್ಸ್ ಪಾತ್ರದ ಸೃಷ್ಟಿಕರ್ತ ಟೈಲರ್‌ ನಿರ್ದೇಶಕರಾಗಿ ಜನಪ್ರಿಯತೆಯನ್ನು ಗಳಿಸಿದರು. ಈ ಪಾತ್ರದ ಮೂಲಕ 12 ಸಿನಿಮಾಗಳಲ್ಲಿ ನಟಿಸಿದ್ದಲ್ಲದೆ ಎಲ್ಲರನ್ನೂ ಮೆಚ್ಚಿಸಿದ್ದಾರೆ.

ಟೈಲರ್ ಪೆರ್ರಿ ಸರಿಸುಮಾರು $1 ಬಿಲಿಯನಷ್ಟು ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಭಾರತೀಯ ಕರೆನ್ಸಿಯಲ್ಲಿ 8200 ಕೋಟಿ ರೂಪಾಯಿ. ಅವರು ನಟನೆಯಿಂದಾಗಿ ಹಣವನ್ನು ಗಳಿಸಿಲ್ಲ, Madea ಫ್ರಾಂಚೈಸ್ ಮತ್ತು ಸ್ಟುಡಿಯೋಗಳಿಂದ ಗಳಿಸಿದ್ದಾರೆ.

 

ಇದನ್ನು ಓದಿ: Daily Horoscope: ವ್ಯಾಪಾರದ ವಿಚಾರದಲ್ಲಿ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಯಶಸ್ವಿಯಾಗುತ್ತೀರಿ ಈ ರಾಶಿಯವರಿಗೆ ಇಂದು ಲಕ್! 

Leave A Reply

Your email address will not be published.