Transport department: ಆಟೋ ಚಾಲಕರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ !! ಸಾರಿಗೆ ಸಚಿವರಿಂದ ಮಹತ್ವದ ಘೋಷಣೆ!!

latest news Transport department news Good news for auto drivers from state government transport minister

Transport department: ರಾಜ್ಯದಲ್ಲಿ ‘ಶಕ್ತಿ ಯೋಜನೆಗೆ'(Shakti yojane) ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಉಚಿತ ಬಸ್ ಪ್ರಯಾಣ(Free bus travel) ಇರೋದ್ರಿಂದ ಮಹಿಳೆಯರೆಲ್ಲರೂ ಬಸ್ ನಲ್ಲಿಯೇ ಪ್ರಯಾಣ ಬೆಳೆಸುತ್ತಿದ್ದಾರೆ. ಇದರಿಂದ ಆಟೋ ಚಾಲಕರು(Auto driver’s) ಕಂಗಾಲಾಗಿದ್ದಾರೆ. ಕೆಲವು ದಿನಗಳಿಂದ ಈ ಬಗ್ಗೆ ಆಕ್ರೋಶವನ್ನೂ ಹೊರಹಾಕುತ್ತಿದ್ದಾರೆ. ಆದರೆ ಈ ಬೆನ್ನಲ್ಲೇ ಆಟೋ ಚಾಲಕರಿಗೆ ಸಾರಿಗೆ ಸಚಿವರು ಗುಡ್ ನ್ಯೂಸ್ ಕೊಟ್ಟಿದ್ದಾರೆ.

 

ಹೌದು, ಮಹಿಳೆಯರಿಗೆ ನೀಡಿರೋ ಉಚಿತ ಪ್ರಯಾಣದಿಂದ ಮಹಿಳೆಯರು ಬಸ್ ನಲ್ಲೇ ಹೆಚ್ಚು ಪ್ರಯಾಣ ಮಾಡುತ್ತಿದ್ದಾರೆ. ಹೀಗಾಗಿ ಆಟೋ ಚಾಲಕರು ತುಂಬಾ ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಶಕ್ತಿ ಯೋಜನೆಯಿಂದ (Shakti Scheme) ಆಟೋ ಚಾಲಕರಿಗೆ (Auto Drivers) ಸಮಸ್ಯೆಯಾದರೆ, ಸರ್ಕಾರ (Transport department) ಅವರ ನೆರವಿಗೆ ಧಾವಿಸೋ ಬಗ್ಗೆ ಸರ್ಕಾರ ನಿರ್ಧಾರ ಮಾಡಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ತಿಳಿಸಿದ್ದಾರೆ.

ರಾಜ್ಯದಲ್ಲಿ ಸದ್ಯ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದು, ವಿಧಾನ ಪರಿಷತ್(Vidhana parishat) ಅಂಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್(JDS) ಸದಸ್ಯ ಭೋಜೇಗೌಡರು(Bhojegowda) ಈ ಕುರಿತು ಪ್ರಶ್ನೆ ಕೇಳಿ ‘ಶಕ್ತಿ ಯೋಜನೆ ಪರಿಣಾಮ ಆಟೋ ರಿಕ್ಷಾಗಳ ಮೇಲೆ ಬಿದ್ದಿದೆ. ಉಚಿತ ಬಸ್ ಪ್ರಯಾಣದಿಂದ ಆಟೋದವರು ಜೀವನ ಮಾಡಲು ಆಗುತ್ತಿಲ್ಲ. ರಾಜ್ಯದಲ್ಲಿ ಸುಮಾರು 5 ಲಕ್ಷ ಆಟೋ ಚಾಲಕರು ಇದ್ದಾರೆ. ಅವರಿಗೆ ಜೀವನ ಮಾಡಲು ಆಗುತ್ತಿಲ್ಲ. ಇವರ ನೆರವಿಗೆ ಸರ್ಕಾರ ಬರಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ(Ramalinga reddy), ಜೂನ್ 11ಕ್ಕೆ ಶಕ್ತಿ ಯೋಜನೆ ಪ್ರಾರಂಭ ಆಯ್ತು. ಉತ್ತಮವಾಗಿ ಯೋಜನೆ ನಡೆಯುತ್ತಿದೆ. ಯೋಜನೆ ಜಾರಿ ಆಗಿ ಒಂದು ತಿಂಗಳು ಆಗಲಿ. ಆಟೋದವರಿಗೆ ಏನ್ ಸಮಸ್ಯೆ ಆಗಿದೆ ಅಂತ ನೋಡೋಣ. ಈವರೆಗೂ ಯಾವ ಆಟೋ ಚಾಲಕರ ಸಂಘದವರು ನನ್ನ ಬಳಿ ಬಂದು ಕಷ್ಟ ಅಂತ ಹೇಳಿಲ್ಲ. ಯಾವುದೇ ಆಟೋ ಚಾಲಕರು ನನಗೆ ಮನವಿ ಮಾಡಿಲ್ಲ. ಒಂದು ತಿಂಗಳು ಆಗಲಿ, ಬಳಿಕ ಪರಿಶೀಲನೆ ಮಾಡಿ ಆಟೋದವರಿಗೆ ಸಮಸ್ಯೆಯಾದರೆ ಸರ್ಕಾರ ಪರಿಹಾರ ಕೊಡಲಿದೆ ಎಂದು ಭರವಸೆ ನೀಡಿದರು.

 

ಇದನ್ನು ಓದಿ: Free bus Scheme: ವೀಕೆಂಡಲ್ಲಿ ಫ್ರೀ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ !! ಹೊಸ ಯೋಜನೆಯ ಜಾರಿಗೆ ಮುಂದಾದ KSRTC !! 

Leave A Reply

Your email address will not be published.