Free bus Scheme: ವೀಕೆಂಡಲ್ಲಿ ಫ್ರೀ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ !! ಹೊಸ ಯೋಜನೆಯ ಜಾರಿಗೆ ಮುಂದಾದ KSRTC !!
latest news political news Good news for women traveling on free bus on weekends
Free bus Scheme: ಕಾಂಗ್ರೆಸ್ ಸರ್ಕಾರ(Congress Government) ರಚನೆಯಾದ ಕೂಡಲೆ ಜಾರಿಗೆ ತಂದ ‘ಶಕ್ತಿ ಯೋಜನೆ’ (Free bus Scheme)ಯು ರಾಜ್ಯ ಸಾರಿಗೆ ನಿಗಮದ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಮಹಿಳೆಯರೊಂದಿಗೆ ಪುರುಷರೂ ಹೆಚ್ಚು ಪ್ರಯಾಣ ಮಾಡುತ್ತಿದ್ದು ಸಾರಿಗೆ ಇಲಾಖೆಗೆ ಬರುವ ಆದಾಯವೂ ಹೆಚ್ಚಾಗಿದೆ. ಅಲ್ಲದೆ ವೀಕೆಂಡ್ ಅಲ್ಲಂತೂ ನಾರಿಯರು ಹೆಚ್ಚು ಪ್ರಯಾಣ ಬೆಳೆಸೋದ್ರಿಂದ ಬಸ್ ಗಳು ತುಂಬಾನೇ ರಶ್ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೀಗ ಪ್ರಯಾಣ ಪ್ರಿಯಾ ನಾರಿಯರಿಗೆ ಗುಡ್ ನ್ಯೂಸ್(Good news) ಕೊಟ್ಟಿದೆ.
ಹೌದು, ಮಹಿಳೆಯರಿಗೆ ಸರ್ಕಾರ ಕಲ್ಪಿಸಿಕೊಟ್ಟ ಉಚಿತ ಬಸ್ ಪ್ರಯಾಣ(Free travel) ಯೋಜನೆಗೆ ಭರ್ಜರಿಯಾಗೇ ರೆಸ್ಪಾನ್ಸ್ ಸಿಗುತ್ತಿದೆ. ಮಹಿಳೆಯರೆಲ್ಲರೂ ಬಸ್ ಹತ್ತಿ ಧಾರ್ಮಿಕ ಕ್ಷೇತ್ರಗಳಿಗೆ, ಪ್ರವಾಸಿ ತಾಣಗಳಿಗೆ ತಮ್ಮ ಗಂಡಂದಿರು ಹಾಗೂ ಸಂಬಂಧಿಕರ ಜೊತೆ ಪ್ರಯಾಣ ಬೆಳೆಸುತ್ತಿದ್ದಾರೆ. ಆದರೆ ಇದು ವೀಕೆಂಡಲ್ಲಿ(Weekend) ತುಸು ಹೆಚ್ಚು ಅನ್ನಬಹುದು. ಯಾಕೆಂದರೆ ರಜೆ ಇರುವ ಕಾರಣ ಹೆಚ್ಚನವರು ಈ ಸಮಯದಲ್ಲಿಯೇ ಸುತ್ತಾಟ ಶುರು ಮಾಡುತ್ತಾರೆ. ಹೀಗಾಗಿ ಬಸ್ ಗಳು ತುಂಬಾ ರಶ್ ಆಗುತ್ತಿವೆ. ಆದರೀಗ ಈ ಬೆನ್ನಲ್ಲೇ ರಾಜ್ಯ ಸಾರಿಗೆ ಇಲಾಖೆ ಮಹಿಳೆಯರಿಗೆ ಸಖತ್ ಗುಡ್ ನ್ಯೂಸ್ ಕೊಟ್ಟಿದೆ.
ಹೌದು, ವಾರಾಂತ್ಯದಲ್ಲಿ ಎಲ್ಲರಿಗೂ ರಜ ಇರುವ ಕಾರಣ, ಹೆಚ್ಚಿನವರು ಪ್ರೇಕ್ಷಣೀಯ ಸ್ಥಳಗಳನ್ನು ನೋಡುವ ಪ್ಲಾನಿಂಗ್ ಮಾಡುವುದು ಹೆಚ್ಚು. ಹೀಗಾಗಿ ಬಸ್ ಗಳು ತುಂಬಾ ರಶ್ ಆಗುತ್ತಿವೆ. ಇದೇ ಕಾರಣಕ್ಕಾಗಿ KSRTC ವಾರಾಂತ್ಯದಲ್ಲಿ ಹೊಸ ಯೋಜನೆಯನ್ನು ಜಾರಿಗೆ ತರುವಂತ ಕೆಲಸವನ್ನು ಈಗ ಮಾಡಲು ಹೊರಟಿದೆ.
ಏನದು ಹೊಸ ಯೋಜನೆ?
ವೀಕೆಂಡ್ ನಲ್ಲಿ ಜನರು ಹೆಚ್ಚು ಸುತ್ತಾಟ ಮಾಡುವುದರಿಂದ ವಾರಾಂತ್ಯದಲ್ಲಿ ಪ್ರೇಕ್ಷಣೀಯ ಸ್ಥಳಗಳಿಗೆ (Tourist Places) ಹೆಚ್ಚಿನ ಬಸ್ಸುಗಳನ್ನು ಬಿಡುವ ನಿರ್ಧಾರವನ್ನು ಮಾಡಿದೆ. ಇದರಿಂದಾಗಿ ಬಸ್ ಹೆಚ್ಚಾಗುತ್ತವೆ, ಆರಾಮ ದಾಯಕ ಪ್ರಯಾಣ ಮಾಡಬಹುದು ಎಂದು ಹೆಚ್ಚಿನ ಜನ ಅಂತಹ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗುವ ನಿರ್ಧಾರವನ್ನು ಮಾಡುತ್ತಾರೆ. ಅಲ್ಲದೆ ಇದರಿಂದ ಪ್ರತಿನಿತ್ಯದ ಆದಾಯ ಕೂಡ ವಾರಾಂತ್ಯದಲ್ಲಿ ಹೆಚ್ಚಳವಾಗಲಿದೆ ಎಂಬುದಾಗಿ ರಾಜ್ಯ ಸರ್ಕಾರಿ ಸಾರಿಗೆ ನಿಗಮದ ಲೆಕ್ಕಾಚಾರ. ಇದು ಮುಂದಿನ ದಿನಗಳಲ್ಲಿ ಸರ್ಕಾರಿ ಬಸ್ಸುಗಳ ಆದಾಯ ಹೆಚ್ಚಾಗುವುದಕ್ಕೆ ಮತ್ತೊಂದು ಕಾರಣವಾಗಬಹುದು.