PM Kisan Update: ಈ 3 ಕೆಲಸ ನೀವು ಮಾಡಿಲ್ಲ ಅಂದ್ರೆ ನಿಮ್ಗೆ 14 ನೆ ಕಂತಿನ ಹಣ ಬರಲ್ಲ, ಈಗ ತಾನೇ ಬಂದ ಮೆಗಾ ಅಪ್ಡೇಟ್ !

latest news new update about PM Kisan Yojana 14th-Installment amount

PM Kisan Yojana 14th-Installment: ಪ್ರಧಾನಿ ಮೋದಿ ಸರ್ಕಾರ ಆರಂಭಿಸಿದ ಮಹತ್ವದ ಯೋಜನೆಗಳಲ್ಲಿ ಪಿಎಂ ಕಿಸಾನ್ ಯೋಜನೆಯೂ ಒಂದು.ಈಗಾಗಲೇ ಫೆಬ್ರುವರಿ ಕೊನೆಯ ವಾರದಲ್ಲಿ 13ನೇ ಕಂತು ಬಿಡುಗಡೆ ಆಗಿತ್ತು. ಈಗ ಐದನೇ ತಿಂಗಳು ನಡೆಯುತ್ತಿದೆ. ಜುಲೈ ಅಂತ್ಯದೊಳಗೆ 14ನೇ ಕಂತಿನ (PM Kisan Yojana 14th-Installment) 2,000 ರೂ ಹಣ ಬಿಡುಗಡೆ ಆಗುವ ನಿರೀಕ್ಷೆ ಇದೆ.

ಆದರೆ 13ನೇ ಕಂತಿನ ಹಣ ಹಲವು ಮಂದಿಗೆ ಸಿಕ್ಕಿರಲಿಲ್ಲ. ಅದಕ್ಕೆ ಬಹುತೇಕ ಕಾರಣ ಕೆವೈಸಿ ಅಪ್​ಡೇಟ್ ಮಾಡದೇ ಇದ್ದುದು. ಅದರ ಜೊತೆಗೆ ಇನ್ನೂ ಕೆಲವಿಷ್ಟು ಕಾರಣಕ್ಕೆ ಕಿಸಾನ್ ಯೋಜನೆಯ ಕಂತಿನ ಹಣ ಬಿಡುಗಡೆ ಆಗಿರುವುದಿಲ್ಲ.

ಆದ್ದರಿಂದ ಪಿಎಂ ಕಿಸಾನ್ ಯೋಜನೆಯ ಹಣ ಸುಲಭವಾಗಿ ಖಾತೆಗೆ ವರ್ಗವಾಗುವಂತಾಗಲು ಕೆಲವೊಂದಿಷ್ಟು ದಾಖಲೆಗಳು ಸರಿಯಾಗಿ ಸಲ್ಲಿಕೆಯಾಗಿವೆಯಾ, ಜೋಡಣೆ ಆಗಿವೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಿ.

ನೀವು ಪಿಎಂ ಕಿಸಾನ್ ಯೋಜನೆಯ ಫಲಾನುಭವಿ ಆಗಿದ್ದು ಇಕೆವೈಸಿ ಮಾಡಿಲ್ಲದಿದ್ದರೆ ಮೊದಲು ಅದನ್ನು ಮುಗಿಸಿ.

ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಜೋಡಿತವಾಗಿದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಿ
ಆಧಾರ್​ಗೆ ಜೋಡಿತವಾದ ಬ್ಯಾಂಕ್ ಖಾತೆಯಲ್ಲಿ ಡಿಬಿಟಿ ಅವಕಾಶ ಎನೇಬಲ್ ಮಾಡಿದ್ದೀರಾ ವಿಚಾರಿಸಿ.
ಆಧಾರ್ ಸೀಡಿಂಗ್ ಆಗಿರುವುದನ್ನು ಆನ್​ಲೈನ್​ನಲ್ಲೇ ಪರಿಶೀಲಿಸಿ.

ಬ್ಯಾಂಕ್ ಖಾತೆಗೆ ಆಧಾರ್ ನಂಬರ್ ಸೀಡಿಂಗ್ ಅಥವಾ ಜೋಡಣೆ ಆಗಿದೆಯಾ ಎಂಬುದನ್ನು ಆನ್​ಲೈನ್​ನಲ್ಲೆ ಪರಿಶೀಲಿಸಬಹುದು. ನೀವು ಯುಐಡಿಎಐನ ವೆಬ್​ಸೈಟ್​ಗೆ ಹೋಗಿ ಅಲ್ಲಿ ಬ್ಯಾಂಕ್ ಮ್ಯಾಪರ್ ಮೂಲಕ ನೀವು ಕೆಲಸ ಮಾಡಬಹುದು. ಅದರ ನೇರ ಲಿಂಕ್ ಇಲ್ಲಿದೆ: resident.uidai.gov.in/bank-mapper

ನೀವು ಈ ಪುಟದಲ್ಲಿ ನಿಮ್ಮ ಆಧಾರ್ ನಂಬರ್ ಅನ್ನು ನಮೂದಿಸಿ ಪರೀಕ್ಷಿಸಬಹುದು. ಈ ನಂಬರ್ ಯಾವುದಾದರೂ ಬ್ಯಾಂಕ್ ಖಾತೆಗೆ ಸೀಡಿಂಗ್ ಆಗಿದೆಯಾ, ಇಲ್ಲವಾ ಎಂಬುದನ್ನು ತೋರಿಸುತ್ತದೆ.

ಇಕೆವೈಸಿ ಮಾಡುವ ವಿಧಾನ:
ಪಿಎಂ ಕಿಸಾನ್ ವೆಬ್​ಸೈಟ್​ಗೆ ಹೋಗಿ pmkisan.gov.in
ಅಲ್ಲಿ ಫಾರ್ಮರ್ಸ್ ಸೆಕ್ಷನ್ ಅಡಿಯಲ್ಲಿ ಇಕೆವೈಸಿ ಆಪ್ಷನ್ ಮೇಲೆ ಕ್ಲಿಕ್ ಮಾಡಿ
ಆಧಾರ್ ನಂಬರ್ ಹಾಕಿ ಸರ್ಚ್ ಕ್ಲಿಕ್ ಮಾಡಿ. ನಂತರ ಆಧಾರ್​ಗೆ ಜೋಡಿತವಾದ ನಿಮ್ಮ ಮೊಬೈಲ್ ನಂಬರ್ ಹಾಕಿರಿ. ಅಲ್ಲಿ ಒಟಿಪಿ ಪಡೆದು ಅದನ್ನು ನಮೂದಿಸಿ. ಆಗ ಇಕೆವೈಸಿ ಮುಗಿಯುತ್ತದೆ.

ಆಫ್​ಲೈನ್​ನಲ್ಲಿ ಇಕೆವೈಸಿ ಮಾಡುವ ಕ್ರಮ:
ಸಮೀಪದ ಸಿಎಸ್​ಸಿ ಸೆಂಟರ್​ಗೆ ಹೋಗಿ, ಅಲ್ಲಿ ನಿಮ್ಮ ಬಯೋಮೆಟ್ರಿಕ್ ಮೂಲಕ ಲಾಗಿನ್ ಮಾಡಲಾಗುತ್ತದೆ. ನಂತರ ಆಧಾರ್ ನಂಬರ್ ಅಪ್​ಡೇಟ್ ಮಾಡಿ, ಫಾರ್ಮ್ ಸಬ್ಮಿಟ್ ಮಾಡಿ.

ಇನ್ನು ಆಧಾರ್ ನಂಬರ್​ಗೆ ಮೊಬೈಲ್ ನಂಬರ್ ಜೋಡಿತವಾಗದ ಫಲಾನುಭವಿಗಳಿಗೆ ಬೇರೆ ಒಂದು ಅವಕಾಶವನ್ನು ಸರ್ಕಾರ ಕೊಟ್ಟಿದೆ. ಪಿಎಂ ಕಿಸಾನ್​ನ ಆ್ಯಪ್​ನಲ್ಲಿ ಫೇಸ್ ಅಥೆಂಟಿಕೇಟರ್ ಫೀಚರ್ ಬಳಸಬಹುದು. ಇದರಲ್ಲಿ ನಿಮ್ಮ ಮುಖದ ಸ್ಕ್ಯಾನ್ ಮಾಡಬೇಕು. ಕಣ್ಣಿನ ಪೊರೆಯ ಬಯೋಮೆಟ್ರಿಕ್ ಮಾಹಿತಿಯನ್ನು ಆಧಾರ್ ಜೊತೆ ದೃಢೀಕರಿಸಿ, ಅದನ್ನು ದಾಖಲೆಯಾಗಿ ಸ್ವೀಕರಿಸಲಾಗುತ್ತದೆ. ಆ ಮೂಲಕ ಇಕೆವೈಸಿ ಪೂರ್ಣಗೊಳ್ಳುತ್ತದೆ.

 

ಇದನ್ನು ಓದಿ: M P Renukacharya: ಪಂಚೆ ಸಂತೋಷ, ಪಿಟೀಲ್ ಕಟೀಲ ಯಾರ್ಗೂ ಹೆದರೋಲ್ಲ, ಯಾವ ಬಿಜೆಪಿ ನೋಟಿಸ್‌ಗೂ ಉತ್ತರಿಸಲ್ಲ !! ಮತ್ತೆ ಅಬ್ಬರಿಸಿದ ಹೊನ್ನಳ್ಳಿ ಹುಲಿ !! 

Leave A Reply

Your email address will not be published.