Madhya Pradesh urination case: ಮೂತ್ರ ವಿಸರ್ಜನೆ ಸಂತ್ರಸ್ತನ ಪಾದ ತೊಳೆದು ಸನ್ಮಾನ ಮಾಡಿದ ಸಿಎಂ ಶಿವರಾಜ್ ಚವ್ಹಾಣ್

latest news Madhya Pradesh urination case CM Shivraj Singh Chouhan washes the feet of tribal Dashmat Rawat

Madhya Pradesh urination case: ಮಧ್ಯಪ್ರದೇಶದಲ್ಲಿ ನಡೆದ ಘಟನೆಯೊಂದು ಇದೀಗ ಬಾರಿ ಸದ್ದು ಮಾಡುತ್ತಿದೆ. ಹೌದು, ಬಿಜೆಪಿ ಜೊತೆ ಸಂಪರ್ಕವನ್ನು ಹೊಂದಿರುವ ಆರೋಪಿ ಪ್ರವೇಶ್ ಶುಕ್ಲಾ ಸಿಗರೇಟ್‌ ಸೇದುತ್ತಾ, ಸಿಧಿ ಜಿಲ್ಲೆಯ ಕುಬರಿ ಮಾರುಕಟ್ಟೆಯಲ್ಲಿ ಕುಳಿತಿದ್ದ ಆದಿವಾಸಿ ವ್ಯಕ್ತಿಯನ್ನು ನಿಂದಿಸಿ, ಆತನ ಮೇಲೆ ಮೂತ್ರ ವಿಸರ್ಜನೆ (Madhya Pradesh urination case) ಮಾಡಿದ್ದ ವಿಡಿಯೋ ವೈರಲ್​ ಆಗಿ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದರು.

ಈ ವಿಚಾರ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ತಿಳಿಯುತ್ತಿದ್ದಂತೆಯೇ ಕೃತ್ಯ ಎಸಗಿದ ಆರೋಪಿಯನ್ನು ಬಂಧಿಸಲು ಆದೇಶಿಸಿದ್ದು, ಮಂಗಳವಾರ (ಜುಲೈ 4) ಮಧ್ಯರಾತ್ರಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.

ಈಗಾಗಲೇ ಆರೋಪಿ ವಿರುದ್ಧ ಶಿಸ್ತುಕ್ರಮ ಕೈಗೊಂಡಿರುವ ಸರ್ಕಾರ, ಬುಧವಾರ (ಜುಲೈ 5) ಆತನ ಮನೆಯನ್ನು ಬುಲ್ಡೋಜರ್ ಬಳಸಿ ಧ್ವಂಸ ಮಾಡಿದೆ. ಶುಕ್ಲಾ ವಿರುದ್ಧ ಸೆಕ್ಷನ್ 294, 504 ಅಡಿಯಲ್ಲಿ ಎಫ್‌ಐಆರ್ ಕೂಡ ದಾಖಲಿಸಲಾಗಿದೆ. ಅಲ್ಲದೇ ರಾಷ್ಟ್ರೀಯ ಭದ್ರತಾ ಕಾಯಿದೆ ಮತ್ತು ಎಸ್​ಸಿ-ಎಸ್​ಟಿ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಲಾಗಿದೆ ಎಂದು ಸಿದ್ದಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರವೀಂದ್ರ ವರ್ಮಾ ತಿಳಿಸಿದ್ದಾರೆ.

ಇದೀಗ ಈ ಹಿನ್ನೆಲೆ ಸಂತ್ರಸ್ತ, ಆದಿವಾಸಿ ಜನಾಂಗ್ ದಶ್ಮತ್​ ರಾವತ್ ಅವರ ಪಾದವನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತೊಳೆದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಹೌದು, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮ ನಿವಾಸಕ್ಕೆ ಮೂತ್ರ ವಿಸರ್ಜನೆ ಪ್ರಕರಣದ ಸಂತ್ರಸ್ತ ದಶ್ಮತ್ ರಾವತ್​​ರನ್ನು ಕರೆಯಿಸಿಕೊಂಡು ದಶರಥ್ ರಾವತ್​​ರ ಪಾದ ತೊಳೆದಿದ್ದಾರೆ.

ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಸಂತ್ರಸ್ತನನ್ನು ಖುರ್ಚಿ ಮೇಲೆ ಕೂರಿಸಿ, ತಾವು ಕೆಳಗೆ ಕುಳಿತು ಪಾದ ತೊಳೆಯುತ್ತಾರೆ. ನಂತರ ಹೂವಿನ ಹಾರ ಹಾಕಿ, ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ.

 

 

 

ಇದನ್ನು ಓದಿ: PM Kisan Update: ಈ 3 ಕೆಲಸ ನೀವು ಮಾಡಿಲ್ಲ ಅಂದ್ರೆ ನಿಮ್ಗೆ 14 ನೆ ಕಂತಿನ ಹಣ ಬರಲ್ಲ, ಈಗ ತಾನೇ ಬಂದ ಮೆಗಾ ಅಪ್ಡೇಟ್ ! 

Leave A Reply

Your email address will not be published.