M P Renukacharya: ಪಂಚೆ ಸಂತೋಷ, ಪಿಟೀಲ್ ಕಟೀಲ ಯಾರ್ಗೂ ಹೆದರೋಲ್ಲ, ಯಾವ ಬಿಜೆಪಿ ನೋಟಿಸ್‌ಗೂ ಉತ್ತರಿಸಲ್ಲ !! ಮತ್ತೆ ಅಬ್ಬರಿಸಿದ ಹೊನ್ನಳ್ಳಿ ಹುಲಿ !!

latest news EX MLA Renukacharya expressed outrage against party leaders

M P Renukacharya: ರೇಣುಕಾಚಾರ್ಯನ (M P Renukacharya) ಬಾಯಿ ಮುಚ್ಚಿಸಲು ಯಾರಿಂದಲು ಸಾಧ್ಯವಿಲ್ಲ. ನಾನು ಬಿಜೆಪಿ (BJP) ಶಿಸ್ತು ಸಮಿತಿಯಿಂದ ಕೊಟ್ಟಿರುವ ನೋಟಿಸ್ ಗೆ (Notice) ಯಾವುದೇ ಉತ್ತರ ಕೊಡೋಲ್ಲ ಎಂದು ಮತ್ತೊಮ್ಮೆ ಪಕ್ಷದ ನಾಯಕರ ವಿರುದ್ಧ ಮಾಜಿ ಶಾಸಕ ರೇಣುಕಾಚಾರ್ಯ ಗುಡುಗಿದ್ದಾರೆ.

 

ಹೌದು, ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ(MP Renukacharya) ಅವರು ಸ್ವಪಕ್ಷೀಯರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌(Nalin Kumar kateel), ಮಾಜಿ ಸಿಎಂ ಬಸವರಾಜ ಬೊಮ್ಮಾಯಿ(Basavaraj bommai) ಸೇರಿ ಹಲವರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದರು. ಈ ಕಾರಣಕ್ಕಾಗಿ ರೇಣುಕಾಚಾರ್ಯ ಅವರಿಗೆ ಬಿಜೆಪಿ ಶಿಸ್ತುಪಾಲನಾ ಸಮಿತಿಯಿಂದ ಕಾರಣಕೇಳಿ ನೋಟಿಸ್‌ ಜಾರಿಗೊಳಿಸಲಾಗಿತ್ತು. ಆದರೆ ಇದಕ್ಕೂ ಜಗ್ಗದ ಹೊನ್ನಳ್ಳಿ ಹುಲಿ ಇದೀಗ ಮತ್ತೆ ರೆಬೆಲ್ ಆಗಿದ್ದಾರೆ.

ದಾವಣಗೆರೆಯಲ್ಲಿ (Davanagere) ಮಾಧ್ಯಮಗಳೊಂದಿಗೆ ಮಾತನಾಡಿದ ರೇಣುಕಾಚಾರ್ಯ, ನೋಟಿಸ್ ಗೆ ನಾನೇಕೆ ಉತ್ತರ ಕೊಡಬೇಕು. ನಾನೇನು ಬಿಜೆಪಿ ಪಕ್ಷ ಮೋದಿಯವರ ವಿರುದ್ಧ ಮಾತನಾಡಿದ್ದೇನಾ? ಬಿಜೆಪಿ ಕಚೇರಿಯಲ್ಲಿ 11 ಜನರಿಗೆ ನೋಟಿಸ್ ನೀಡಿದ್ದೇವೆ ಎಂದು ಹೇಳುತ್ತಾರೆ. ಹೊರಗೆ ಬಂದು ನನ್ನೊಬ್ಬನಿಗೆ ನೋಟಿಸ್ ಎಂದು ಹೇಳುತ್ತಾರೆ. ಬಿಜೆಪಿಯಲ್ಲಿ ಶಿಸ್ತು ಸಮಿತಿ (Disciplinary Committee ) ಇದೆ ಎಂಬುದು ನನಗೆ ಗೊತ್ತಿಲ್ಲ. ಶಿಸ್ತು ಸಮಿತಿ ನನ್ನೊಬ್ಬನಿಗೆ ನೋಟಿಸ್ ನೀಡಿ ಬೇರೆಯವರಿಗೆ ಏಕೆ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ಇಷ್ಟೇ ಅಲ್ಲದೆ ‘ಬಿಜೆಪಿಯಲ್ಲಿ ಶಿಸ್ತು ಸಮಿತಿ ಇದೆ ಎಂಬುದೇ ನನಗೆ ಗೊತ್ತಿಲ್ಲ. ಶಿಸ್ತು ಸಮಿತಿ ನನ್ನೊಬ್ಬನಿಗೆ ನೋಟಿಸ್ ನೀಡಿ ಬೇರೆಯವರಿಗೆ ಏಕೆ ನೀಡಿಲ್ಲ? ನಾನು ಕಾಂಗ್ರೆಸ್​ಗೆ ಹೋಗಲ್ಲ. ನಾನು ಬಿಜೆಪಿಯಲ್ಲೇ ಇರುತ್ತೇನೆ, ನನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಪಕ್ಷವನ್ನು ಸದೃಢವಾಗಿ ಕಟ್ಟಲು ಸಮರ್ಥನಿದ್ದೇನೆ‌‌ ಎಂದಿರುವ ರೇಣುಕಾಚಾರ್ಯ, ನನ್ನ ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದಿದ್ದಾರೆ.

ಅಲ್ಲದೆ ‘ಕಾಂಗ್ರೆಸ್(Congress) ಮುಖಂಡರ ಜೊತೆ ರಾಜಕೀಯ ಹೊರತಾದ ಉತ್ತಮ ಸ್ನೇಹ ಸಂಬಂಧ ಇದೆ. ಶಾಮನೂರು ಶಿವಶಂಕರಪ್ಪ(Shamnur shivshankarappa) ಅವರ ಜೊತೆಯಲ್ಲಿ ಮೈಸೂರಿಗೆ ಫ್ಲೈಟ್​ನಲ್ಲಿ ಒಂದು ಬಾರಿ ಹೋಗಿದ್ದೆ. ಶಾಮನೂರು ಪ್ರೀತಿಯಿಂದ ನನಗೆ ನನ್ನ ಫ್ಲೈಟ್​ನಲ್ಲಿ ಬರುವಂತೆ ಆಹ್ವಾನ ನೀಡಿದ್ದರು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್(D K Shivkumar) ಅವರಿಗೆ ನಾನು ಪೋನ್ ಮಾಡಿ ಸಮಯ ತೆಗೆದುಕೊಂಡು ಹೋಗಿ ಮಾತನಾಡಿದ್ದೆ. ಇದರಿಂದ ಏನಾದರೂ ಸಮಸ್ಯೆಯಾ? ಮಾತನಾಡಿದ ಕೂಡಲೇ ಪಕ್ಷ ಬದಲಿಸುತ್ತಾರೆ ಎಂದು ಅರ್ಥವಾ? ಎಂದು ಅಬ್ಬರಿಸಿದ್ಧಾರೆ.

ರೇಣುಕಾಚಾರ್ಯ ಅವರು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಂತೆಯೇ ಬಿ.ಎಸ್‌. ಯಡಿಯೂರಪ್ಪ(B S Yadiyurappa) ಅವರು ಕರೆಸಿಕೊಂಡು ಮಾತನಾಡಿದ್ದರು. ಆದರೆ, ಬಿಎಸ್‌ವೈ ಅವರನ್ನು ಭೇಟಿ ಮಾಡಿದ ನಂತರವೂ ರೇಣುಕಾಚಾರ್ಯ ತಮ್ಮ ದಾಳಿ ಮುಂದುವರಿಸಿದ್ದಾರೆ. ಈ ನಡುವೆ, ಬಿಜೆಪಿ ಮೇಲೆ ತೀವ್ರ ವಾಗ್ದಾಳಿ ನಡೆಸುತ್ತಿರುವ ರೇಣುಕಾಚಾರ್ಯ ಅವರು ಕಾಂಗ್ರೆಸ್‌ ಸೇರಿ ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗುತ್ತಾರೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಆದರೆ, ತಾನು ಕಾಂಗ್ರೆಸ್‌ ಸೇರುವ ಯೋಚನೆಯಲ್ಲಿಲ್ಲ ಎಂದಿದ್ದಾರೆ ರೇಣುಕಾಚಾರ್ಯ.

 

ಇದನ್ನು ಓದಿ: UGC: ಸಹಾಯಕ ಪ್ರಾಧ್ಯಾಪಕರಾಗಲು ಇನ್ಮುಂದೆ PHD ಬೇಕಿಲ್ಲ !! NET-SET-SLET ಇದ್ದರೆ ಸಾಕು !! 

Leave A Reply

Your email address will not be published.