Home News Vivo Y56 5G Smartphone: Vivo Y56 5G ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರೀ ಇಳಿಕೆ ;...

Vivo Y56 5G Smartphone: Vivo Y56 5G ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರೀ ಇಳಿಕೆ ; ಬಂಪರ್ ಆಫರ್ ಮಿಸ್’ಮಾಡ್ಕೋಬೇಡಿ, ಕೂಡಲೇ ಖರೀದಿಸಿ !

Vivo Y56 5G Smartphone
image source: Times of india

Hindu neighbor gifts plot of land

Hindu neighbour gifts land to Muslim journalist

Vivo Y56 5G Smartphone: ಮೊಬೈಲ್ ಎಂಬ ಮಾಯಾವಿಯ ಬಳಕೆಯಿಂದ ದಿನಂಪ್ರತಿ ಒಂದಲ್ಲ ಒಂದು ಹೊಸ ಮಾದರಿಯು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್‌ಫೋನ್ ಖರೀದಿಸಲು ಯೋಜನೆ ಹಾಕುತ್ತಿದ್ದರೆ,ಇದು ನಿಮಗೆ ಸುವರ್ಣ ಅವಕಾಶ. ಸದ್ಯ ವಿವೋ ಹಲವು ಮೊಬೈಲ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ವಿವೋ ಕಂಪನಿಯು ಲಾಂಚ್ ಮಾಡಿ ಸೈ ಎನಿಸಿಕೊಂಡ ಫೋನ್ ಗಳಲ್ಲಿ ವಿವೋ Y56 5G ಸ್ಮಾರ್ಟ್‌ಫೋನ್ ಕೂಡ ಒಂದು.

ಇದೀಗ ಈ ವಿವೋ Y56 5G ಸ್ಮಾರ್ಟ್‌ಫೋನ್ (Vivo Y56 5G Smartphone) ಬೆಲೆಯಲ್ಲಿ ಸಖತ್ ಇಳಿಕೆ ಆಗಿದೆ. ವಿವೋ Y56 5G ( Vivo Y56 5G ) ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಈಗ 20% ರಷ್ಟು ಕಡಿತವಾಗಿದೆ. ಈ ಫೋನಿನ 8GB RAM + 128GB ವೇರಿಯಂಟ್ 24,999 ರೂ. ಆಗಿದೆ. ಕೊಡುಗೆಯಲ್ಲಿ 19,999ರೂ. ಗಳಿಗೆ ಗ್ರಾಹಕರು ಖರೀದಿಸಬಹುದಾಗಿದೆ. ಈ ಫೋನ್ ಬ್ಲ್ಯಾಕ್ ಎಂಜಿನ್ ಮತ್ತು ಆರೆಂಜ್ ಶಿಮ್ಮರ್ ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದ್ದು, ಗ್ರಾಹಕರು ಫಿಪ್‌ಕಾರ್ಟ್‌ ತಾಣದ ಮೂಲಕ ಖರೀದಿಸಬಹುದಾಗಿದೆ.

ವಿವೋ Y56 5G ಮೀಡಿಯಾಟಿಕ್ ಡೈಮೆನ್ಸಿಟಿ 700 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಆಂಡ್ರಾಯ್ಡ್ 13 ಆಧಾರಿತ ಫನ್‌ಟಚ್ ಓಎಸ್ ಸಪೋರ್ಟ್ ಪಡೆದಿದೆ. 8GB RAM ಮತ್ತು 128 GB ಆಂತರೀಕ ಸ್ಟೋರೇಜ್ ಜೊತೆಗೆ ಹೆಚ್ಚುವರಿ ಸಂಗ್ರಹಕ್ಕಾಗಿ ಎಸ್‌ಡಿ ಕಾರ್ಡ್ ಸ್ಟಾಟ್ ಆಯ್ಕೆ ಸಹ ಒದಗಿಸಲಾಗಿದೆ.

ವಿವೋ Y56 5G ಸ್ಮಾರ್ಟ್‌ ಫೋನ್ 6.58 ಇಂಚಿನ FHD+ ಡಿಸ್‌ಪ್ಲೇ ಹೊಂದಿದ್ದು, 2408 x 1080 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಇದರೊಂದಿಗೆ 50Hz ರಿಫ್ರೆಶ್ ರೇಟ್ ಹೊಂದಿದ್ದು, ವಾಟ‌ಡ್ರಾಪ್‌ ನಾಚ್ ಶೈಲಿಯ ಡಿಸ್‌ಪ್ಲೇ ಆಕರ್ಷಕವಾಗಿದೆ.

ಈ ಸ್ಮಾರ್ಟ್ ಫೋನ್ ರಿಯರ್‌ನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, ಇದರಲ್ಲಿ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಹಾಗೂ ಸಕೆಂಡರಿ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಸೆನ್ಸಾರ್ ಅನ್ನು ಹೊಂದಿದೆ. ಇದರ ಜೊತೆಗೆ ಸೆಲ್ಪಿ ಗಾಗಿ ಮುಂಭಾಗದಲ್ಲಿ 16 ಮೆಗಾ ಪಿಕ್ಸಲ್ ಕ್ಯಾಮೆರಾ ಒದಗಿಸಲಾಗಿದೆ.

ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ಡ್ಯುಯಲ್ ಬ್ಯಾಂಡ್ ವೈ-ಫೈ, ಬ್ಲೂಟೂತ್, ಜಿಪಿಎಸ್ ಮತ್ತು ಚಾರ್ಜಿಂಗ್‌ಗಾಗಿ ಯುಎಸ್‌ಬಿ ಟೈಪ್ ಸಿ ಪೋರ್ಟ್ ಆಯ್ಕೆ ಇವೆ. ಈ ಪೋನ್ 18W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಪಡೆದಿದೆ. 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ. ಜೊತೆಗೆ ಸೈಡ್ ಮೌಂಟೆಡ್ ಫಿಂಗ‌ಪ್ರಿಂಟ್ ಸೆನ್ಸರ್ ಆಯ್ಕೆ ಗಳನ್ನು ಪಡೆದಿದೆ.

 

ಇದನ್ನು ಓದಿ: MadhyaPradesh: ಮಾನಸಿಕ ಅಸ್ವಸ್ಥನ ಮುಖದ ಮೇಲೆ ಮೂತ್ರ ವಿಸರ್ಜಿಸಿದ ಬಿಜೆಪಿ ಕಾರ್ಯಕರ್ತ!