Important information: ಶಾಲಾ ಮಕ್ಕಳ ಬ್ಯಾಗ್ ಹೊರೆ ಇನ್ನಿಲ್ಲ: ಸಂಭ್ರಮ ಶನಿವಾರದ ಆಚರಣೆ ಬಗ್ಗೆ ಮಹತ್ವದ ಸುತ್ತೋಲೆ ಪ್ರಕಟ !

latest news education Important information about ``Bag Free'' day was given to school children on Saturday

Important information: ಇಂದಿನ ಕಾಲದಲ್ಲಿ ಶಿಕ್ಷಣ(education) ಅತ್ಯಗತ್ಯವಾಗಿದ್ದು,ಮಕ್ಕಳ ಭವಿಷ್ಯ ರೂಪಿಸಿಕೊಳ್ಳಲು ಭವಿಷ್ಯದ ಏಳಿಗೆಗೆ ಪೂರಕವಾಗಿ ವಿದ್ಯಾರ್ಹತೆ ಮಕ್ಕಳ ಏಳಿಗೆಗೆ ಮಹತ್ತರ ಪಾತ್ರ ವಹಿಸುತ್ತದೆ. ಶಾಲೆಗೆ ಹೋಗುವ ವಿದ್ಯಾರ್ಥಿಗಳ ಪಾಡು ಹೇಳತೀರದು. ಓದು,ಪಠ್ಯ, ಆಟದ ಜೊತೆ ಜೊತೆಗೆ ಮಣಭಾರದ ಬ್ಯಾಗ್ ಹೊತ್ತುಕೊಂಡು ಶಾಲೆಗೆ ಹೋಗುವ ಮಕ್ಕಳಿಗೆ ಬ್ಯಾಗ್ ಹೊರೆಯಾಗಿ ಬಿಟ್ಟಿದೆ. ಇದೀಗ, ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ಒಂದು ಹೊರಬಿದ್ದಿದೆ.

ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಸಂಭ್ರಮ ಶನಿವಾರ ಎಂಬ ಹೆಸರಿನಲ್ಲಿ ಶಾಲಾ ಮಕ್ಕಳಿಗೆ `ಬ್ಯಾಗ್ ರಹಿತ’ ದಿನದ ಆಚರಣೆಯ ಕುರಿತಂತೆ ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ.

2023-24 ನೇ ಸಾಲಿನ ಅನುಸಾರ ಪ್ರತಿ ತಿಂಗಳು 3 ನೇ ಶನಿವಾರ ಶಾಲಾ ಹಂತದಲ್ಲಿ ಸದರಿ ಚಟುವಟಿಕೆಗಳನ್ನು ಆಯೋಜಿಸಲು ತಿಳಿಸಲಾಗಿದೆ. ಮಕ್ಕಳನ್ನು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ನಾಗರಿಕ ಪ್ರಜ್ಞೆಯನ್ನು ಬೆಳೆಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. 10 ಸ್ವಯಂ ವಿವರಣಾತ್ಮಕ ಮಾಡ್ಯೂಲ್ ಗಳನ್ನು ಹಾಗೂ ಶಿಕ್ಷಕರಿಗೆ ಮಾರ್ಗದರ್ಶಿ ಕೈಪಿಡಿಗಳನ್ನು ವಿವಿಧ ವಿಷಯಗಳ ಮೂಲಕ ವಿದ್ಯಾರ್ಥಿಗಳಿಗಾಗಿ ಸಿದ್ದ ಪಡಿಸಲಾಗಿದೆ.

ರಾಜ್ಯದ ಶಾಲಾ ಮಕ್ಕಳಿಗೆ ಓದಿನ ಜೊತೆಗೆ ಖುಷಿಯಾಗಿ ಕಲಿಕೆಯನ್ನು ಮುಂದುವರಿಸುವ ಸಲುವಾಗಿ ಮಕ್ಕಳಿಗೆ ಪಠ್ಯವನ್ನು ಹೊರೆಯಾಗಿಸದೇ ಉಲ್ಲಾಸದಿಂದ ಕಲಿಯುವಂತೆ ಮಾಡುವ ನಿಟ್ಟಿನಲ್ಲಿ ಪ್ರತಿ ತಿಂಗಳು ಒಂದು ಶನಿವಾರದಂದು ಬ್ಯಾಗ್ ರಹಿತ ದಿನವೆಂದು ಆಚರಿಸುವಂತೆ ಶಿಕ್ಷಣ ಇಲಾಖೆ ಆದೇಶಿಸಲಾಗಿದೆ.

ಸಂಭ್ರಮ ಶನಿವಾರದ ದಿನ ಜಿಲ್ಲಾ ಹಂತದ ಜೊತೆಗೆ ಬ್ಲಾಕ್ ಹಂತದ ಎಲ್ಲಾ ಅಧಿಕಾರಿಗಳು ಹಾಗೂ ಸಿಆರ್ ಪಿಗಳು ಕಡ್ಡಾಯವಾಗಿ ಶಾಲೆಗಳಿಗೆ ಭೇಟಿ ನೀಡಿ ಕಾರ್ಯಕ್ರಮದ ಬಗ್ಗೆ ಗಮನ ಹರಿಸಲು ಸೂಚಿಸಲಾಗಿದೆ.ಕಾರ್ಯಕ್ರಮದ ಯಶಸ್ಸಿಗೆ ಅವಶ್ಯಕ ಮಾರ್ಗದರ್ಶನ ನೀಡುವುದನ್ನು ಪಾಲಿಸಲು ಸೂಚಿಸಲಾಗಿದೆ.

 

ಇದನ್ನು ಓದಿ: Actresses Childhood photo viral: ಸ್ಟಾರ್ ನಟಿಯರಿಬ್ಬರ ಬಾಲ್ಯದ ಫೋಟೋ ವೈರಲ್ ; ಕ್ಯೂಟ್ ಆಗಿ ಕಾಣಿಸೋ ಈಗಿನ ಖ್ಯಾತ ನಟಿಯರನ್ನು ಗುರುತಿಸುತ್ತೀರಾ?

Leave A Reply

Your email address will not be published.