Viral Video: ಕಾರೊಳಗೆ ನಾಯಿಯನ್ನು ಬಿಟ್ಟು ತಾಜ್‌ಮಹಲ್ ವೀಕ್ಷಣೆ, ಉಸಿರುಕಟ್ಟಿ ಪ್ರಾಣ ಬಿಡ್ತು ಶ್ವಾನ

latest news viral video Dog died of suffocation inside the car

Viral video: ವಿಶ್ವಪ್ರಸಿದ್ಧ ಪ್ರವಾಸಿ ತಾಣ, ಜಗತ್ತಿನ ಪ್ರೇಮಸೌಧ, ಆಗ್ರಾದ(Agra) ನೆಲದಲ್ಲಿ ನೆಲೆಯೂರಿ ನಿಂತ ತಾಜಮಹಲ್ (Taj Mahal) ನೋಡಲು ಅದೆಷ್ಟೋ ಪ್ರವಾಸಿಗರು ಹೋಗುತ್ತಾರೆ. ಇದೀಗ ಈ ರೀತಿ ಹೋದ ಪ್ರವಾಸಿಗರೊಬ್ಬರು ನಾಯಿಯನ್ನು ಕರೆದುಕೊಂಡು ಹೋಗಿ ಅದರ ಪ್ರಾಣಕ್ಕೆ ಕುತ್ತು ತಂದಿರುವ ಮನಕಲಕುವ ಘಟನೆ ವರದಿಯಾಗಿದೆ.

 

ಹೌದು, ಕೆಲವೊಮ್ಮೆ ನಮ್ಮ ಅತಿಯಾದ ಪ್ರೀತಿಯೇ ಸಂಕಷ್ಟಕ್ಕೆ ತಳ್ಳಿ ಬಿಡುತ್ತದೆ. ಇದಕ್ಕೆ ಉದಾಹರಣೆ ಎನ್ನುವಂತೆ ಘಟನೆಯೊಂದು ಆಗ್ರಾದಲ್ಲಿ ನಡೆದಿದೆ. ಶ್ವಾನ ಪ್ರೇಮಿಗಳು ಎಲ್ಲೇ ಪ್ರಯಾಣ ಬೆಳಸಿದರು ತಮ್ಮ ಪ್ರೀತಿಯ ನಾಯಿಗಳನ್ನು ಜೊತೆಗೆ ಕರೆದುಕೊಂಡು ಹೋಗುತ್ತಾರೆ. ಹಾಗೇನೆ ಹುಡುಗರು ಹಾಗೂ ಹುಡುಗಿಯರಿದ್ದ ಪ್ರವಾಸಿಗರು ತಾಜ್‌ಮಹಲ್ ನೋಡಲು ಬಂದಿದ್ದರು. ಈ ವೇಳೆ ತಮ್ಮ ಕಾರನ್ನು ತಾಜ್‌ಮಹಲ್ (Tajmahal) ಪಶ್ಚಿಮಗೇಟ್‌ನ ಪಾರ್ಕಿಂಗ್ ಪ್ರದೇಶದಲ್ಲಿ ಪಾರ್ಕ್ ಮಾಡಿದ್ದಾರೆ. ಅಲ್ಲದೇ ಶ್ವಾನವನ್ನು ಕಾರೊಳಗೆಯೇ ಲಾಕ್ ಮಾಡಿದ್ದಾರೆ. ನಂತರ ತಾಜ್ ಮಹಲ್ ವೀಕ್ಷಣೆ ಮಾಡಿ ಎರಡು ಗಂಟೆ ಸುತ್ತಾಡಿ ಬರುವ ವೇಳೆ ಶ್ವಾನ ಶವವಾಗಿದೆ.

ವರದಿ ಪ್ರಕಾರ, ಈ ಪ್ರವಾಸಿಗರು ಹರ್ಯಾಣದವರಾಗಿದ್ದು (Hariyana) , ಇವರು ನಾಯಿಗೆ (dog) ಉಸಿರಾಡುವುದಕ್ಕೆ ಗಾಳಿ ಪೂರೈಕೆಯಾಗಲಿ ಎಂದು ಕಾರಿನ ಹಿಂಬದಿಯ ಕಿಟಕಿಯನ್ನು(window) ಸ್ವಲ್ಪ ತೆರೆದಿಟ್ಟು ಹೋಗಿದ್ದರು. ಕಾರಿನಲ್ಲೇ ಲಾಕ್ ಮಾಡಿ ಹೋಗಿದ್ದರಿಂದ, ಸೆಕೆ ತಡೆಯಲಾಗದೇ ಅದು ಕಾರಿನಿಂದ ಹೊರಗೆ ಹಾರಲು ಯತ್ನಿಸಿದೆ. ಆದರೆ ಅದೇ ವೇಳೆ ವಿಪರ್ಯಾಸವೆಂಬಂತೆ ಅದರ ಕತ್ತಿನಲ್ಲಿದ್ದ ಬೆಲ್ಟ್ ಹ್ಯಾಂಡ್‌ಬ್ರೇಕ್‌ಗೆ ಸಿಲುಕಿಕೊಂಡು ಬಿಗಿಗೊಂಡಿದ್ದು, ಕಾರೊಳಗೆ ಉಸಿರುಕಟ್ಟಿ ಶ್ವಾನ ತನ್ನ ಪ್ರಾಣ ಬಿಟ್ಟಿದೆ.

ಕಾರನ್ನು ಕಸ್ಟಡಿಗೆ ಪಡೆದು ಸಾವಿನ ಕಾರಣ ತಿಳಿಯಲು ಶ್ವಾನದ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಾಜ್‌ಗಂಜ್ ಪೊಲೀಸ್ ಠಾಣೆಯ(police station) ಉಸ್ತುವಾರಿ ದೇವೇಂದ್ರ ಶಂಕರ್ ಪಾಂಡೆ ಹೇಳಿದ್ದಾರೆ. ಈ ಮಧ್ಯೆ ಈ ಘಟನೆಯನ್ನು ಪ್ರವಾಸಿಗರು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ (Social media) ಪೋಸ್ಟ್ ಮಾಡಿದ್ದು ವೈರಲ್(Viral video) ಆಗಿದೆ. ಯಾರೂ ಕೂಡ ತಮ್ಮ ಶ್ವಾನಗಳನ್ನು ಕಾರಿನ ಒಳಗೆ ಲಾಕ್ ಮಾಡಿ ಹೋಗದಂತೆ ನೆಟ್ಟಿಗರು ಮನವಿ ಮಾಡಿದ್ದಾರೆ.

ಈ ಘಟನೆಗೆ ಸಂಬಂಧಿಸಿ, ನೆಟ್ಟಿಗರಿಂದ ಶ್ವಾನದ ಮಾಲೀಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಂತಹವರ ವಿರುದ್ಧ ಪ್ರಕರಣ ದಾಖಲಿಸಬೇಕು. ಶ್ವಾನವನ್ನು ಕಾಳಜಿ ಮಾಡಲಾಗದಿದ್ದರೆ ಏಕೆ ಸಾಕುತ್ತೀರಿ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಶ್ವಾನವನ್ನು ಕಾಳಜಿ ಮಾಡಲಾಗದಿದ್ದರೆ ಶೋಕಿಗೋಸ್ಕರ ಸಾಕದಿರಿ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

 

 

ಇದನ್ನು ಓದಿ: Soujanya case: ಧರ್ಮಸ್ಥಳ ಸೌಜನ್ಯ ಗೌಡ ಹೋರಾಟ: ಮತ್ತಷ್ಟು ಬಿರುಸು ಪಡೆದುಕೊಂಡ ಹತ್ಯಾ ಪ್ರಕರಣ, ಹೋರಾಟಕ್ಕೆ ದೊಡ್ಡದಾಗಿ ಎಂಟ್ರಿ ಕೊಟ್ಟ ಒಡನಾಡಿ ಸೇವಾ ಸಂಸ್ಥೆ ! 

Leave A Reply

Your email address will not be published.