Mukesh Ambani: ಕೋಟಿಗಟ್ಟಲೆಯ ಗಗನ ಚುಂಬಿ ಮನೆಗೆ ಇನ್ನೂ AC ನೇ ಹಾಕ್ಸಿಲ್ಲಂತೆ ಈ ಅಂಬಾನಿ !! ಕಾರಣ ಕೇಳಿದ್ರೆ ನೀವೂ ಬೆರಗಾಗ್ತೀರಾ!!

latest news Mukesh Ambani has not yet installed AC for this house

Mukesh ambani: ಮುಂಬೈನ(Mumbai) ಆಂಟಿಲಿಯಾ ಬರೋಬ್ಬರಿ 27 ಅಂತಸ್ತಿನ ಐಷಾರಾಮಿ ಬಂಗಲೆ. ಅಂಬಾನಿ ಕುಟುಂಬವೂ ಇದರ 27ನೇ ಮಹಡಿಯಲ್ಲಿಯೇ ವಾಸಿಸುತ್ತಿದೆ. ಆದರೆ ಈ ಮನೆಗೆ ಅಂಬಾನಿ(Mukesh ambani) ಅವರು ಇನ್ನೂ AC ನೇ ಹಕ್ಸಿಲ್ಲಂತೆ!! ಯಾಕೆ ಗೊತ್ತಾ?

ಒಂದು ಮಧ್ಯಮ ವರ್ಗದ ಕುಟುಂಬವೇ ತಮ್ಮ ಮನೆ ಹಾಗಿರಬೇಕು, ಹೀಗಿರಬೇಕು ಎಂದೆಲ್ಲಾ ಯೋಜನೆ ರೂಪಿಸಿ AC ಯಿಂದ ಹಿಡಿದು ಪ್ರತಿಯೊಂದು ಸೌಲಭ್ಯಗಳನ್ನು ಕಲ್ಪಿಸಿಕೊಳ್ಳುತ್ತಾರೆ. ಆದರೆ ಅಚ್ಚರಿ ಏನಂದ್ರೆ ವಿಶ್ವದ ಶ್ರೀಮಂತರ ಸಾಲಿನಲ್ಲಿ ಇರೋ ಮುಖೇಶ್ ಅಂಬಾನಿ ತಮ್ಮ ಮನೆಗೆ ACನ್ನೇ ಹಾಕ್ಸಿಲ್ಲವಂತೆ!! ಹೌದು, ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿರುವ ಆಂಟಿಲಿಯಾ (Antilia) 27 ಅಂತಸ್ತಿನ ಐಷಾರಾಮಿ ಮನೆಯಲ್ಲಿ, ಮುಖೇಶ್ ಅಂಬಾನಿ ಅವರ ತಾಯಿ ಕೋಕಿಲಾ ಬೆನ್, ಪತ್ನಿ ನೀತಾ, ಇಬ್ಬರು ಪುತ್ರರಾದ ಆಕಾಶ್-ಅನಂತ್, ಸೊಸೆ ಶ್ಲೋಕಾ ಮತ್ತು ಮೊಮ್ಮಗ ಪೃಥ್ವಿ ಅಂಬಾನಿ ಅವರೊಂದಿಗೆ ವಾಸಿಸುತ್ತಿದ್ದಾರೆ. ಆದರೆ ಈ ಮನೆಗೆ AC ಇಲ್ಲ.

ಅಂದಹಾಗೆ 2012ರಲ್ಲಿ ಕಟ್ಟಿಸಿದ್ದ ಅಂಬಾನಿಯ ಈ ಮನೆಯನ್ನು ಆಂಟಿಲಿಯಾ (Antilea) ಎಂದು ಕರೆಯಲಾಗುತ್ತದೆ. ಇದನ್ನು ನಿರ್ಮಿಸಲು ಎರಡು ವರ್ಷವೇ ಬೇಕಾಗಿದ್ದು ಅಷ್ಟೋಂದು ಐಷರಾಮಿ ಅಳವಡಿಕೆ ಇದರಲ್ಲಿ ಇದೆ ಎನ್ನಬಹುದು. ಈ ಬಂಗಲೆಯೂ ಮುಂಬೈನ ದಕ್ಷಿಣ ಮಧ್ಯಭಾಗದಲ್ಲಿದೆ. ಅಲ್ಲದೆ ಇದು ಬರೋಬ್ಬರಿ 173 ಮೀಟರ್ ಎತ್ತರವನ್ನು ಹೊಂದಿದೆ.

ಇನ್ನು ಈ ಮನೆಯ ತಾಪಮಾನವನ್ನು ನಮಗೆ ಬೇಕಾದಂತೆ ಹೊಂದಿಸಬಹುದು. ಹೀಗಾಗಿ ಈ ಮನೆಗೆ ಎಸಿ ಹಾಕುವ ಅಗತ್ಯ ಇಲ್ಲ. ಇದರಲ್ಲಿ ಆಟೋ ಮ್ಯಾಟಿಲ್ ಟೆಂಪರೇಚರ್ (temperature) ಇದೆ. ಅದೇ ರೀತಿ 8.0ತೀವ್ರತೆಯ ಭೂಕಂಪವನ್ನು ಸಹ ತಡೆಯುವ ಅತ್ಯಾಧುನುಕ ಟೆಕ್ನಾಲಜಿ ಇಲ್ಲಿದೆ. ಇದರಲ್ಲಿ ಒಂದು ಐಸ್ಕ್ರೀಂ ಪಾರ್ಲರ್ ಕೂಡ ಇದ್ದು ಕೃತಕ ಸ್ನೊ ಸಹ ಗೊಡೆಯಿಂದ ಬರುವಂತೆ ವಿನ್ಯಾಸ ತಯಾರು ಮಾಡಲಾಗಿದೆ.

ಇನ್ನು ಬರೊಬ್ಬರಿ 8ಸಾವಿರ ಕೋಟಿ ಬೆಲೆ ಬಾಳುವ ಈ ಮಹಡಿಯಲ್ಲಿ ಈಜು ಕೊಳ, ಸಲೂನ್, 50ಆಸನಗಳ ಮಿನಿ ಥಿಯೇಟರ್ ಕೂಡ ಇದೆ. ಆಸ್ಟ್ರೇಲಿಯಾ ನಿರ್ಮಾಣ ಸಂಸ್ಥೆಯಾದ ಲೈಟ್ ಮತ್ತು ಹೋಲ್ಡಿಂಗ್ ನಿರ್ಮಾಣ ಸಂಸ್ಥೆ ನಿರ್ಮಿಸಿದೆ‌. ಇದನ್ನು ನಿರ್ಮಿಸಿದ್ದು ಚಿಕಾಗೋ ಮೂಲದ ಫೇಮಸ್ ವಾಸ್ತುಶಿಲ್ಪಿಗಳಾದ ಪರ್ಕಿನ್ಸ್ ಮತ್ತು ವಿಲ್ ವಿನ್ಯಾಸಗೊಳಿಸಿದ್ದಾರೆ.

ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಅಂಬಾನಿ ಕುಟುಂಬವು ಅದರ 27ನೇ ಮಹಡಿಯಲ್ಲಿಯೇ ವಾಸಿಸುತ್ತಿದೆ. ಇದರ ಹಿಂದಿನ ಕಾರಣವೇನು? ಎಂದು ಸ್ವತಃ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ(Neeta ambani) ಅವರೆ ಹೇಳಿದ್ದರು. ಯಾಕೆಂದರೆ ಬಿಸಿನೆಸ್ ಇನ್‌ಸೈಡರ್‌ ವರದಿಯ ಪ್ರಕಾರ, ನೀತಾ ಅಂಬಾನಿ ಎಲ್ಲಾ ಕೊಠಡಿಗಳಲ್ಲಿಯೂ ಸಾಕಷ್ಟು ಸೂರ್ಯನ ಬೆಳಕು ಧಾರಳವಾಗಿ ಬೀಳಬೇಕೆಂದು ಆಶಿಸಿದ್ದರು. ಆದ್ದರಿಂದ ಅವರು ಮೇಲಿನ ಭಾಗದಲ್ಲಿ ಉಳಿಯಲು ನಿರ್ಧರಿಸಿದ್ದಾರಂತೆ. ವಿಶೇಷ ವ್ಯಕ್ತಿಗಳಿಗೆ ಮಾತ್ರ ಈ ಮಹಡಿಗೆ ಹೋಗಲು ಅನುಮತಿ ಇದೆಯಂತೆ.

ಅಲ್ಲದೆ ವರದಿಗಳ ಪ್ರಕಾರ, 24 ಗಂಟೆಗಳ ಕಾಲ ಆಂಟಿಲಿಯಾದಲ್ಲಿ 600 ಜನರ ಸಿಬ್ಬಂದಿ ಇದ್ದಾರೆ. ಇದು ತೋಟಗಾರರು, ಎಲೆಕ್ಟ್ರಿಷಿಯನ್‌ಗಳು, ಸೆಕ್ಯುರಿಟಿ ಗಾರ್ಡ್‌ಗಳು, ಪ್ಲಂಬರ್‌ಗಳು, ಚಾಲಕರು ಮತ್ತು ಸೇವಕರಿಗೆ ಅಡುಗೆ ಮಾಡುವವರು ಒಳಗೊಂಡಿರುತ್ತದೆ. ನೀತಾ ಅಂಬಾನಿ ಪ್ರಕಾರ, ಅವರ ಮನೆಯಲ್ಲಿರುವ ಪ್ರತಿಯೊಬ್ಬ ಉದ್ಯೋಗಿಯೂ ಕುಟುಂಬದ ಸದಸ್ಯರಂತೆಯೇ ಇರುತ್ತಾರೆ.

 

ಇದನ್ನು ಓದಿ: Intresting news: ಬಲಿ ಕೊಟ್ಟ ಮೇಕೆಯ ಆಹಾರ ಸೇವನೆ! ಕೂಡಲೇ ಮೃತಪಟ್ಟ ವ್ಯಕ್ತಿ!!! 

Leave A Reply

Your email address will not be published.