Vande Sadharan Train: ವಂದೇ ಭಾರತ್ ಆಯ್ತು, ಈಗ ವಂದೇ ಸಾಧಾರಣ್​ ರೈಲಿಗೆ ಚಾಲನೆ ! ಅಬ್ಬಾ ಯಾಕಿಷ್ಟು ಅಗ್ಗ ಈ ಪ್ರಯಾಣ ?

latest news intresting news Now Vande Sadharan driving instruction for train

Vande Sadharan Train : ಈ ಹಿಂದೆ ಬೆಂಗಳೂರು-ಧಾರವಾಡ (Bengaluru-Dharwad) ಮಧ್ಯೆ ಸಂಚರಿಸುವ ವಂದೇ ಭಾರತ್ ಎಕ್ಸ್​​ಪ್ರೆಸ್ ರೈಲಿಗೆ ಚಾಲನೆ ನೀಡಿದ್ದಾರೆ. ವಂದೇ ಭಾರತ್ ಆಯ್ತು, ಈಗ ವಂದೇ ಸಾಧಾರಣ್​ ರೈಲಿಗೆ (Vande Sadharan Train) ಚಾಲನೆ ಸಿಗಲಿದೆ. ಹೌದು, ಶೀಘ್ರದಲ್ಲೇ ವಂದೇ ಭಾರತ್ ಮಾದರಿಯಲ್ಲಿ ನೂರು ವಂದೇ ಸಾಧಾರಣ ರೈಲನ್ನು ಪ್ರಾರಂಭಿಸಲು ಚಿಂತನೆ ನಡೆದಿದೆ.

 

ವಂದೇ ಸಾಧಾರಣ ನಾನ್ ಎಸಿ ರೈಲುಗಳು. ಇದು ಸ್ಲೀಪರ್ ಬೋಗಿಗಳನ್ನು ಒಳಗೊಂಡಿರುತ್ತದೆ. ನಾನ್-ಎಸಿ ವಂದೇ ಸಾಧಾರಣ ರೈಲುಗಳು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ತಯಾರಾಗಲಿವೆ. ಇವುಗಳ ತಯಾರಿಕಾ ವೆಚ್ಚ ಕೇವಲ 65 ಕೋಟಿ ರೂಪಾಯಿ ಆಗಿದೆ.

ರೈಲಿನ ಟಿಕೆಟ್ ದರ ಸಾಮಾನ್ಯ ಪ್ರಯಾಣಿಕರಿಗೆ ಕೈಗೆಟಕುವಂತಿರುತ್ತವೆ. ಭಾರತೀಯ ರೈಲ್ವೆಯು ಕಡಿಮೆ ದರದಲ್ಲಿ ದೂರದ ಸ್ಥಳಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗಾಗಿ ಈ ರೈಲುಗಳನ್ನು ವಿನ್ಯಾಸಗೊಳಿಸಲಿದೆ. ವಂದೇ ಸಾಧಾರಣ ರೈಲು ಅಸ್ತಿತ್ವದಲ್ಲಿರುವ ಸಾಮಾನ್ಯ ರೈಲುಗಳಿಗಿಂತ ಹೆಚ್ಚಿನ ಸೌಲಭ್ಯಗಳನ್ನು ಹೊಂದಿರುತ್ತದೆ ಎನ್ನಲಾಗಿದೆ.

ವಂದೇ ಭಾರತ್ ಸ್ಲೀಪರ್ ಆವೃತ್ತಿಯ ರೈಲುಗಳು ಶೀಘ್ರದಲ್ಲೇ ಬರಲಿವೆ. ವಂದೇ ಮೆಟ್ರೋ ರೈಲುಗಳನ್ನೂ ತಯಾರಿಸಲಾಗುತ್ತಿದೆ.
ಮುಂಬರುವ ವಂದೇ ಭಾರತ್ ಸ್ಲೀಪರ್ ರೈಲುಗಳು 550 ಕಿ.ಮೀ.ಗೂ ಹೆಚ್ಚು ದೂರ ಕ್ರಮಿಸಲಿವೆ. ಇದು ಸ್ಲೀಪರ್ ಬೋಗಿಗಳನ್ನು ಒಳಗೊಂಡಿರುತ್ತದೆ.

ವಂದೇ ಸಿಮ್ ರೈಲು ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಪ್ರತಿ ಸೀಟಿನ ಬಳಿ ಚಾರ್ಜಿಂಗ್ ಪಾಯಿಂಟ್‌ಗಳು, ಬಯೋ ವ್ಯಾಕ್ಯೂಮ್ ಶೌಚಾಲಯಗಳು, ಪ್ರತಿ ಕೋಚ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ವಂದೇ ಬಾರಾತ್ ಎಕ್ಸ್‌ಪ್ರೆಸ್‌ನಂತಹ ಪ್ರಯಾಣಿಕರ ಸುರಕ್ಷತೆಗಾಗಿ ಸ್ವಯಂಚಾಲಿತ ಬಾಗಿಲು ವ್ಯವಸ್ಥೆಯನ್ನು ಹೊಂದಿರುತ್ತದೆ ಎನ್ನಲಾಗಿದೆ.

 

ಇದನ್ನು ಓದಿ: Monitor lizard: ಸರ್ಕಾರಿ ಕಚೇರಿಯಲ್ಲಿ ಕಾಡಿಂದ ಉಡ ತಂದು ಬಿಟ್ಟ ಭೂಪ, ಯಾಕೆ ತಂದು ಬಿಟ್ಟ ಅನ್ನೋದೇ ವಿಶೇಷ ! 

Leave A Reply

Your email address will not be published.