BPL card holders: BPL ಕಾರ್ಡ್ ದಾರರಿಗೆ ಶಾಕ್ ನೀಡಿದ ಗೌರ್ಮೆಂಟ್.. !! ಇದನ್ನು ಮಾಡಲಿಲ್ಲಂದ್ರೆ ಯಾವುದೇ ಕಾರಣಕ್ಕೂ ನಿಮಗೆ ಅನ್ನಭಾಗ್ಯದ ದುಡ್ಡು ಸಿಗೋಲ್ಲ !!
latest news intresting news New Rules for BPL Card Holders by Gourmet
BPL Card holders: ಕಾಂಗ್ರೆಸ್ ಪಕ್ಷ 5ಗ್ಯಾರಂಟಿ ಯೋಜನೆಗಳಲ್ಲಿ ಒಂದೊಂದೇ ಯೋಜನೆಗಳ ಜಾರಿಗೆ ಕ್ರಮ ಕೈಗೊಳ್ಳುತ್ತಿದೆ. ಇದೀಗ ಕರ್ನಾಟಕ ಸರಕಾರವು ಅನ್ನಭಾಗ್ಯ ಯೋಜನೆ ಜಾರಿ ತರಲು ಅಕ್ಕಿ ಕೊರತೆ ಹಿನ್ನೆಲೆಯಲ್ಲಿ 5 ಕೆಜಿ ಹೆಚ್ಚುವರಿ ಅಕ್ಕಿಯ ಬದಲು ಹಣವನ್ನು ನೀಡಲು ಮುಂದಾಗಿದೆ. ಆದರೆ ಈ ತಿಂಗಳಿನಲ್ಲಿ ಪಡಿತರ ಪಡೆದವರಿಗೆ ಮಾತ್ರ ಹೆಚ್ಚುವರಿ ಅಕ್ಕಿಯ ಬದಲಾಗಿ ಹಣ ಸಿಗಲಿದೆ. ಇಲ್ಲದಿದ್ದರೆ “ಅನ್ನಭಾಗ್ಯ’ದ ಗ್ಯಾರಂಟಿ ಇಲ್ಲ ಎಂದು ಸರ್ಕಾರ ತಿಳಿಸಿದೆ.
ಹೌದು, ಅಕ್ಕಿಯ ಬದಲಾಗಿ ಹಣ ನೀಡುವ ತೀರ್ಮಾನ ಕೈಗೊಂಡ ಬೆನ್ನಲ್ಲೇ ಸರಕಾರ ಸದ್ದಿಲ್ಲದೆ ಸಂಬಂಧಪಟ್ಟ ಇಲಾಖೆಗೆ ಇಂತಹದ್ದೊಂದು ಅಲಿಖಿತ ಸಂದೇಶ ಹೊರಡಿಸಿದೆ. ಈ ಮೂಲಕ ಪಡಿತರ ಪಡೆಯದವರಿಗೆ ಉದ್ದೇಶಿತ “ಅನ್ನಭಾಗ್ಯ’ ಯೋಜನೆ ಅಡಿ ನೀಡುವ ಹಣಕ್ಕೂ ಫುಲ್ ಸ್ಟಾಪ್ ಹಾಕಲು ಮುಂದಾಗಿದೆ.
ಸದ್ಯ ರಾಜ್ಯದಲ್ಲಿ ಸುಮಾರು 10.89 ಲಕ್ಷ ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬಗಳಿದ್ದು, 44.76 ಲಕ್ಷ ಸದಸ್ಯ ರಿದ್ದಾರೆ. ಅದೇ ರೀತಿ 1.17 ಕೋಟಿ ಬಿಪಿಎಲ್ ಕಾರ್ಡ್ (BPL Card holders) ದಾರರಿದ್ದು, ಅಂದಾಜು 4 ಕೋಟಿ ಸದಸ್ಯರಿದ್ದಾರೆ. ನಿಯಮದ ಪ್ರಕಾರ ಇವರೆಲ್ಲರಿಗೂ ಪ್ರತೀ ತಿಂಗಳು ಕ್ರಮವಾಗಿ 35 ಕೆ.ಜಿ. ಹಾಗೂ ತಲಾ 5 ಕೆ.ಜಿ. ಅಕ್ಕಿ ಪೂರೈಕೆ ಆಗಬೇಕು. ಆದರೆ ಈ ಪೈಕಿ ಕೆಲವರು ಪಡಿತರ ಪಡೆಯಲು ಬರುವುದೇ ಇಲ್ಲ. ಆ ವರ್ಗ ಅಂದಾಜು ಶೇ. 10ಕ್ಕಿಂತ ಅಧಿಕ ಇದೆ. ಅಂತಹವರಿಗೆ ಅಕ್ಕಿಯ ಬದಲಿನ ಹಣವನ್ನೂ ವರ್ಗಾವಣೆ ಮಾಡದಿರಲು ಉನ್ನತ ಮಟ್ಟದಲ್ಲಿ ಚಿಂತನೆ ನಡೆದಿದೆ.
ಅಂಕಿಅಂಶಗಳ ಪ್ರಕಾರ ಮೇ ತಿಂಗಳಿನಲ್ಲಿ ಪಡಿತರ ಪಡೆದವರ ಸಂಖ್ಯೆ ಶೇ. 82ರಿಂದ 83ರಷ್ಟಿದೆ. ಅದರಲ್ಲೂ ಬೆಂಗಳೂರು ಸೇರಿದಂತೆ ಹಲವು ನಗರಗಳ ವ್ಯಾಪ್ತಿಯಲ್ಲಿ ಪ್ರತೀ ತಿಂಗಳು ಅಕ್ಕಿ ಪಡೆಯುವವರ ಸಂಖ್ಯೆ ಸರಾಸರಿ ಶೇ. 75-80ರಷ್ಟು ಮಾತ್ರ ಇದೆ. ಉಳಿದವರಿಗೆ ಪಡಿತರದ ಆವಶ್ಯಕತೆ ಇಲ್ಲ. ಹೀಗಿರುವಾಗ ಅಕ್ಕಿಯ ಬದಲಿಗೆ ನೀಡುವ ಹಣವನ್ನೂ ಅನಗತ್ಯವಾಗಿ ಏಕೆ ಹಾಕಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಪಡಿತರ ಪಡೆಯದ ವರ್ಗ ಶೇ. 10ರಷ್ಟು ಎಂದು ಲೆಕ್ಕಹಾಕಿದರೂ ಸುಮಾರು 10ರಿಂದ 12 ಲಕ್ಷ ಕುಟುಂಬಗಳಿಗೆ ಹೋಗಬಹುದಾದ “ಹೆಚ್ಚುವರಿ ಹಣ’ದ ಹರಿವಿಗೆ ಬ್ರೇಕ್ ಬೀಳಲಿದೆ.
ಇದನ್ನು ಓದಿ: BS Yeddyurappa: ಯಡಿಯೂರಪ್ಪರಿಂದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಸರು ಸೂಚನೆ!?