Actors Viral Photo: ಅಂದು ಸುದೀಪ್ – ಪುನೀತ್ ಬ್ಲಾಕ್ ಅಂಡ್ ಬ್ಯೂಟಿ: ಇಂದು ಕಲರ್ಸ್ ನಲ್ಲಿ ಸಾನ್ವಿ – ಧೃತಿ ಸ್ವೀಟಿ !! ಫೋಟೋ ವೈರಲ್

latest news intresting news Actors childhood Viral Photo

Actors Viral Photo: ಚಿತ್ರರಂಗದವರಿಗೆ ಅಭಿಮಾನಿ ಬಳಗ ಬಹಳ ದೊಡ್ಡದಾಗಿಯೇ ಇರುತ್ತೆ. ಇನ್ನು ನೆಚ್ಚಿನ ನಟ ನಟಿಯರ ಬಾಲ್ಯದ ಫೋಟೋ ನೋಡಲು ಅಭಿಮಾನಿಗಳಿಗೆ ಅದೊಂದು ಖುಷಿಯ ಕ್ಷಣವು ಹೌದು.

 

ಕನ್ನಡ ಚಿತ್ರರಂಗದ ಬಹು ದೊಡ್ಡ ಆಸ್ತಿಯಾದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಬ್ಬರು ಬಾಲ್ಯ ಸ್ನೇಹಿತರಾಗಿದ್ದು, ಬಾಲ್ಯದಲ್ಲಿ ಜೊತೆಗೆ ಕಳೆದ ಕ್ಷಣಗಳನ್ನು ನೋಡುವಾಗ ಖುಷಿ ಅನಿಸುತ್ತೆ. ಅಂತೆಯೇ ಇಬ್ಬರು ಮನೆಯಲ್ಲಿ ಭೇಟಿ ಮಾಡಿ ಸುದೀಪ್ ಮತ್ತು ಪುನೀತ್‌ ರಾಜ್‌ಕುಮಾರ್ ಜೊತೆಯಾಗಿ ನಿಂತುಕೊಂಡು ಕ್ಲಿಕ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ (Actors Viral Photo) ಆಗುತ್ತಿದೆ.

ಇದೀಗ ಸುದೀಪ್ ಮತ್ತು ಪುನೀತ್‌ ರಾಜ್‌ಕುಮಾರ್ ಅವರ ಫೋಟೋ ಗೆ ಮೆರುಗು ನೀಡುವಂತೆ ಅವರಿಬ್ಬರ ಮಕ್ಕಳು ಸಾಕ್ಷಿಯಾಗಿದ್ದರೆ. ಹೌದು! ಕಿಚ್ಚ ಸುದೀಪ್ ಮಗಳು ಸಾನ್ವಿ ಹಾಗೂ ಪವರ್ ಸ್ಟಾರ್ ಪುತ್ರಿ ಧ್ರುತಿ ಭೇಟಿ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಫೋಟೋದಲ್ಲಿ ಒಬ್ಬರ ಹೆಗಲಿಗೆ ಮತ್ತೊಬ್ಬರು ಕೈ ಹಾಕಿರುವುದು ಅವರ ಆತ್ಮೀಯತೆ ತೋರಿಸುತ್ತದೆ.

ಧ್ರುತಿ ಪುನೀತ್ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಆಗಾಗ ಬೆಂಗಳೂರಿಗೆ ಬಂದು ಹೋಗುತ್ತಾರೆ. ತಂದೆ ಅಗಲಿದ ನಂತರ ಧ್ರುತಿ ಹೆಚ್ಚಾಗಿ ಬೆಂಗಳೂರಿನಲ್ಲಿ ಸಮಯ ಕಳೆಯುತ್ತಾರೆ. ಇನ್ನು ಧ್ರುತಿ ವಿದ್ಯಾಭ್ಯಾಸ ಮತ್ತು ಸಮಾಜ ಸೇವೆಯಲ್ಲಿ ಬ್ಯುಸಿಯಾಗಿದ್ದಾರೆ. ಸಾನ್ವಿ ವಿದ್ಯಾಭ್ಯಾಸದ ಜೊತೆ ಸಂಗೀತ ಮತ್ತು ಪೇಂಟಿಂಗ್ ಮಾಡುತ್ತಾರೆ.

ಮುಖ್ಯವಾಗಿ ಸ್ಟಾರ್ ಮಕ್ಕಳು ಸ್ನೇಹ ಮಾಡಿಕೊಳ್ಳುವುದು ತುಂಬಾ ಕಡಿಮೆ ಅದರಲ್ಲಿ ಇವರಿಬ್ಬರು ಒಟ್ಟಿಗೆ ಇರುವುದು ನೋಡಿ ಖುಷಿಯಾಗುತ್ತಿದೆ ಎಂದು ನೆಟ್ಟಗರು ಕಾಮೆಂಟ್ ಮಾಡಿದ್ದಾರೆ.

Leave A Reply

Your email address will not be published.