Soujanya case: ಧರ್ಮಸ್ಥಳ ಸೌಜನ್ಯ ಗೌಡ ಹೋರಾಟ: ಮತ್ತಷ್ಟು ಬಿರುಸು ಪಡೆದುಕೊಂಡ ಹತ್ಯಾ ಪ್ರಕರಣ, ಹೋರಾಟಕ್ಕೆ ದೊಡ್ಡದಾಗಿ ಎಂಟ್ರಿ ಕೊಟ್ಟ ಒಡನಾಡಿ ಸೇವಾ ಸಂಸ್ಥೆ !

Dharmasthala soujanya Gowda case odanadi seva samstha involved for justice

Soujanya case: ಮೈಸೂರಿನ ಒಡನಾಡಿ ಸಂಸ್ಥೆ ಇದೀಗ ಸೌಜನ್ಯ ಹೋರಾಟಕ್ಕೆ ಎಂಟ್ರಿ ಕೊಟ್ಟಿದೆ. ಸೌಜನ್ಯ ಪರವಾದ ನ್ಯಾಯದ ಹೋರಾಟಕ್ಕೆ “ಒಡನಾಡಿ” ಬೆಂಬಲ ನೀಡಿದ್ದು, ರಾಜ್ಯದ್ಯಂತ ಸೌಜನ್ಯ ಪರವಾಗಿ ಹೋರಾಟ ನಡೆಸಲು ಒಡನಾಡಿ ಸಂಸ್ಥೆ ಸಿದ್ದವಾಗಿದೆ.

ನಿನ್ನೆ ಸೌಜನ್ಯ ಪರ ಹೋರಾಟಗಾರರನ್ನ ಭೇಟಿಯಾದ ಒಡನಾಡಿಯ ಮುಖಂಡರಾದ ಒಡನಾಡಿಯ ಸ್ಥಾಪಕ ಕಾರ್ಯದರ್ಶಿ ಸ್ಟಾಲಿನ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಮುರುಘಾ ಶ್ರೀ ಪ್ರಕರಣದಲ್ಲಿ ಹೋರಾಟಕ್ಕಿಳಿದು ಅಮಾಯಕ ಮಕ್ಕಳ ಮೇಲೆ ನಡೆದ ಅಕ್ಷಮ್ಯ ಅಪರಾಧವನ್ನು ಬಯಲಿಗೆ ಎಳೆದಿದ್ದ ಒಡನಾಡಿ ಸೇವಾ ಸಂಸ್ಥೆ ಈಗ ಸೌಜನ್ಯ ಗೌಡ ಹೋರಾಟಕ್ಕೆ ಇಳಿದಿದೆ. ಇತ್ತೀಚಿಗೆ ಸೌಜನ್ಯ ಅತ್ಯ ಪ್ರಕರಣದಲ್ಲಿ ಆರೋಪಿ ಎಂದು ಬಿಂಬಿತವಾಗಿ ಕಳೆದ 11 ವರ್ಷಗಳಿಂದ ಜೈಲಿನಲ್ಲಿ ಕೊಳೆಯುತ್ತಾ ಬಿದ್ದಿದ್ದ ಸಂತೋಷ್ ರಾವ್ ಎಂಬ ಅಮಾಯಕನನ್ನು ಕೋರ್ಟ್ ನಿರಪರಾಧಿ ಎಂದು ಘೋಷಿಸಿ ಬಿಡುಗಡೆ ಮಾಡಿತ್ತು. ಅವತ್ತಿನ ನಂತರ ಹಾಗಾದರೆ ಅಪರಾಧಿಗಳು ಯಾರು ಎನ್ನುವ ಪ್ರಶ್ನೆ ಜನಸಾಮಾನ್ಯರಲ್ಲಿ ಉದ್ಭವವಾಗಿತ್ತು. ಅಂದಿನಿಂದ ಮುದಲ್ ಗಂಡು ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ಹೋರಾಟಕ್ಕೆ ವೇದಿಕೆಗಳು ಸಜ್ಜುಗೊಳ್ಳುತ್ತಿವೆ. ರಾಜ್ಯದಲ್ಲಿ ಹಲವಾರು ಸಂಘಟನೆಗಳು ತಮ್ಮ ಕೂಗು ಎಬ್ಬಿಸಿವೆ.

“ಧರ್ಮಸ್ಥಳ ಕ್ಷೇತ್ರದಲ್ಲಿ ನಡೆದ ಸೌಜನ್ಯ ಪ್ರಕರಣ ತಲೆ ತಗ್ಗಿಸುವಂತಹ ಘಟನೆ, ಅತ್ಯಾಚಾರ ಮಾಡಿದ ಪಾಪಿಗಳನ್ನು ಇವತ್ತಿಗೂ ನ್ಯಾಯದ ಕಟಕಟೆಗೆ ತರಲಾಗಿಲ್ಲ, ದೇಶದ ಕಾನೂನಿಗೆ ಇದು ಸಾಧ್ಯವಾಗಿಲ್ಲ ಎಂಬುವುದು ತೀವ್ರ ನಗೆ ಪಾಟಲಿನ ವಿಷಯ. ಇದರ ಬಗ್ಗೆ ತನಿಖೆ ನಡೆಸಿದ ಸಿಬಿಐ ಕೂಡಾ ತನ್ನ ಘನತೆಯನ್ನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತೆ ಮರು ತನಿಖೆಯಾಗಬೇಕು. ನಾವು ಈ ಹೋರಾಟದಲ್ಲಿ ನಾವು ಕೈ ಜೋಡಿಸುತ್ತಿದ್ದೇವೆ.” ಎಂದಿದೆ ಒಡನಾಡಿ.

” ಯಾರು ಈ ಸೌಜನ್ಯಳನ್ನ ಅತ್ಯಾಚಾರ ಮಾಡಿದ್ರು ಎಂಬುವುದೇ ನಮ್ಮ ಹುಡುಕಾಟ. ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಇದರ ಬಗ್ಗೆ ಹೆಚ್ಚು ಮಾತನಾಡಬೇಕು. ಅವರು ಸಾಮಾಜಿಕ ಜವಬ್ದಾರಿ ಅನುಶಾಸನ ಬದ್ಧವಾದ ಹೊಣೆಗಾರಿಕೆ ಹೊತ್ತವರು. ಅದು ತಮ್ಮ ಮನೆ ಬಾಗಿಲಲ್ಲಿರುವಂತಹ ತಮ್ಮದೇ ಮನೆಯ ಮಗುವಿನ ಮೇಲಾಗಿರುವಂತಹಾ ಅತ್ಯಾಚಾರ. ಆ ಮಗುವಿಗೆ ಸಂಬಂಧ ಪಟ್ಟವರಿಗೆ ಸಾಂತ್ವನ ಹೇಳುವುದು ಅವರ ಕರ್ತವ್ಯವಾಗಿದೆ. ಆ ಮಗುವಿಗೋಸ್ಕರ ನಾನು ಇದ್ದೇನೆ ಎನ್ನೋದು ಹೆಗ್ಗಡೆ ಅವರ ಬಾಯಿಂದ ಬರಲಿ. ಆ ಮಾತು ಅವರ ಬಾಯಿಯಿಂದ ಬಂದರೆ ನಾವು ಅವರಿಗೆ ಋಣಿಗಳಾಗುತ್ತೀವಿ. ಸೌಜನ್ಯ ಹೋರಾಟ ಧರ್ಮದ ಕಾರ್ಯ. ಈ ಮಗುವಿಗೆ ನ್ಯಾಯವನ್ನು ದೊರಕಿಸುವ ನಿಟ್ಟಿನಲ್ಲಿ ಇಡೀ ರಾಜ್ಯದಲ್ಲಿ ಕೆಲಸ ಮಾಡುತ್ತೇವೆ” ಎಂದು ಸೌಜನ್ಯಾ ಹೋರಾಟದಲ್ಲಿ ಭಾಗಿ ಆಗುವುದಾಗಿ ಘೋಷಿಸಿದೆ.

ಸೌಜನ್ಯ ಎಂಬ ಮಗುವಿನ ಮರಣ ವಿರುದ್ಧ ಎಲ್ಲರೂ ದನಿಯೆತ್ತಬೇಕು. ಇದು ಒಂದು ಜಾತಿ, ಒಂದು ಮತ, ಒಂದು ಧರ್ಮದ ಅಥವಾ ಒಂದು ಮತದ ಕೆಲಸವಲ್ಲ, ಇದು ಎಲ್ಲರ ಸಾಮಾಜಿಕ ಜವಾಬ್ದಾರಿ. ಎಲ್ಲರೂ ಇದರಲ್ಲಿ ಕೈ ಜೋಡಿಸಬೇಕು. ಆ ನಿಟ್ಟಿನಲ್ಲಿ ಕರ್ನಾಟಕದ ಮನೆ ಮನೆಗೆ ಇದರ ವಿಷ್ಯವನ್ನು ಸಾರಲಾಗುವುದು ಎಂದಿದ್ದಾರೆ ಒಡನಾಡಿ ಸಂಸ್ಥೆಯ ಕಾರ್ಯದರ್ಶಿ ಸ್ಟಾನ್ಲಿ.

ಸಂತೋಷ್ ರಾವ್ ಆರೋಪಿಯಲ್ಲ ಎಂದು ಸಾಬೀತಾದ ಹಿನ್ನಲೆ, ಮತ್ತೆ ತೀವ್ರ ಸ್ವರೂಪ ಪಡೆದುಕೊಂಡ ಸೌಜನ್ಯ ರೇಪ್ ಅಂಡ್ ಮರ್ಡರ್ ಕೇಸ್ ಮತ್ತೆ ರಾಜ್ಯಾದ್ಯಂತ ಸಂಚಲನ ಸೃಷ್ಠಿಸುತ್ತಿದೆ. ಜನಾಭಿಪ್ರಾಯ ರೂಢಿಗೊಳ್ಳುತ್ತಿದೆ. ಮುಂದೆ ಈ ಹೋರಾಟ ಇದು ಯಾವ ರೀತಿ ತಿರುವು ಪಡೆದುಕೊಳ್ಳಬಹುದು ಎಂದು ಕಾದು ನೋಡಬೇಕಾಗಿದೆ.

 

ಇದನ್ನು ಓದಿ: Vande Sadharan Train: ವಂದೇ ಭಾರತ್ ಆಯ್ತು, ಈಗ ವಂದೇ ಸಾಧಾರಣ್​ ರೈಲಿಗೆ ಚಾಲನೆ ! ಅಬ್ಬಾ ಯಾಕಿಷ್ಟು ಅಗ್ಗ ಈ ಪ್ರಯಾಣ ? 

Comments are closed.