Home News HSRP ಪ್ರಕರಣ: ‘ಅಕ್ರಮಕ್ಕೆ ಯಾವುದೇ ಅವಕಾಶ ನೀಡಲ್ಲ’ ಎಂದು ಭರವಸೆ ನೀಡಿದ ಸಾರಿಗೆ ಸಚಿವ ರಾಮಲಿಂಗ...

HSRP ಪ್ರಕರಣ: ‘ಅಕ್ರಮಕ್ಕೆ ಯಾವುದೇ ಅವಕಾಶ ನೀಡಲ್ಲ’ ಎಂದು ಭರವಸೆ ನೀಡಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ! ಈ ಹಿನ್ನೆಲೆ ಸಚಿವರಿಗೆ ಸಂಘಟನೆಗಳ ಅಭಿನಂದನೆ !

HSRP

Hindu neighbor gifts plot of land

Hindu neighbour gifts land to Muslim journalist

HSRP: ಅತೀ ಸುರಕ್ಷಾ ನೋಂದಣಿ ಫಲಕ (HSRP) ಯೋಜನೆಯು ಜಾರಿಗೆ ಮುನ್ನವೇ ಅವ್ಯವಹಾರ ನಡೆದಿರುವ ಬಗ್ಗೆ ದೂರು ಸಲ್ಲಿಕೆಯಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಅವ್ಯವಹಾರದ ಬಗ್ಗೆ ದೂರು ನೀಡಿದೆ. ಒಕ್ಕೂಟದ ಹೋರಾಟಕ್ಕೆ ವಿವಿಧ ಸಂಘಟನೆಗಳು ಬೆಂಬಲ ಘೋಷಿಸಿವೆ. ರಾಜ್ಯದ ಭ್ರಷ್ಟಾಚಾರ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಡಾ.V.S.ವೆಂಕಟಾಚಲ ಹಾಗೂ ಸಮತಾ ಸೈನಿಕ ದಳ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಜಿ.ಗೋಪಾಲ್ ಅವರು ಈ ಹೋರಾಟವನ್ನು ಬೆಂಬಲಿಸಿದ್ದಾರೆ.

ಜೊತೆಗೆ ಹಿಂದಿನ ಸರ್ಕಾರದ ಅವಧಿಯಲ್ಲಿ ತಪ್ಪುಗಳಾಗಿದ್ದರೆ ಅದನ್ನು ಸರಿಪಡಿಸುವುದಾಗಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಭರವಸೆ ನೀಡಿದ್ದಾರೆ. ಹಾಗಾಗಿ ರಾಮಲಿಂಗ ರೆಡ್ಡಿ ಅವರನ್ನು ರಾಜ್ಯದ ಭ್ರಷ್ಟಾಚಾರ ವಿರೋಧಿ ಹೋರಾಟ ಸಮಿತಿ ಹಾಗೂ ಸಮತಾ ಸೈನಿಕ ದಳ ವಿದ್ಯಾರ್ಥಿ ಒಕ್ಕೂಟ ಅಭಿನಂದಿಸಿದೆ.

ವಾಹನ ಕಳ್ಳತನ, ಕದ್ದ ವಾಹನಗಳನ್ನು ದುರುದ್ದೇಶಗಳಿಂದ ಬಳಸಿಕೊಂಡು ಹೀನ ಕೃತ್ಯಗಳನ್ನು ನಡೆಸುವುದನ್ನು ತಡೆಯಲು ಹಾಗೂ ಕಾನೂನು ಉಲ್ಲಂಘನೆಯಂತಹಾ ಪ್ರಕರಣಗಳನ್ನು ಬೇಧಿಸಲು ಅನುಕೂಲವಾಗುವಂತೆ ಆಧುನಿಕ ವ್ಯವಸ್ಥೆಯಾಗಿ ವಾಹನಗಳಿಗೆ ಅತೀ ಸುರಕ್ಷಾ ನೋಂದಣಿ ಫಲಕ (HSRP) ಅಳವಡಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಸಜ್ಜಾಗಿದೆ.

ಈ ಯೋಜನೆ ಜಾರಿ ಹಿನ್ನೆಲೆ ದೇಶದಲ್ಲಿ ಹಲವಾರು ಕಂಪನಿಗಳು ನಂಬರ್ ಪ್ಲೇಟ್’ಗಳನ್ನು ತಯಾರಿಸುತ್ತಿವೆ. ಇದರಲ್ಲಿ ಸುಮಾರು 20 ಕಂಪನಿಗಳಿಗೆ ಕೇಂದ್ರ ಹೆದ್ದಾರಿ ಸಚಿವಾಲಯ ಅನುಮೋದನೆ ನೀಡಿದೆ. ಆದರೆ ಕರ್ನಾಟಕದಲ್ಲಿ ಕೇವಲ ನಾಲ್ಕು ಸಂಸ್ಥೆಗಳಿಗೆ ಮಾತ್ರ HSRP ಫಲಕ ಪೂರೈಕೆಗೆ ಅನುಮತಿ ನೀಡಲು ರಹಸ್ಯ ಸಿದ್ಧತೆ ನಡೆದಿದೆ ಎಂದು ಆರೋಪಿಸಲಾಗಿದೆ. ಭ್ರಷ್ಟಾಚಾರದ ಉದ್ದೇಶದಿಂದ ಈ ರೀತಿಯ ಅಕ್ರಮಕ್ಕೆ ಹುನ್ನಾರ ನಡೆದಿದೆ ಎಂದು ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್ ರಾಮ್ ಅವರು ನೀಡಿರುವ ದೂರು ನೀಡಿದ್ದಾರೆ. ಜೊತೆಗೆ ಈ ವಿಚಾರವಾಗಿ ಸಿಎಂ ಹಾಗೂ ಸಾರಿಗೆ ಸಚಿವರು ಕೂಡಲೇ ಮಧ್ಯಪ್ರವೇಶಿಸಿ ಜನಸ್ನೇಹಿ ಕ್ರಮಕ್ಕೆ ಕ್ರಮಕೈಗೊಳ್ಳಬೇಕೆಂದು ಎಂದು ಲೋಕೇಶ್ ರಾಮ್ ಆಗ್ರಹಿಸಿದ್ದರು.

ಸದ್ಯ ಈ ವಿಚಾರದಲ್ಲಿ ಜನಪರ ಕ್ರಮ ಅನುಸರಿಸುವ ಭರವಸೆಯನ್ನು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ನೀಡಿದ್ದಾರೆ. HSRP ಬಗೆಗಿನ ಕಡತ ಇನ್ನೂ ಸರ್ಕಾರದ ಬಳಿ ಬಂದಿಲ್ಲ, ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಗೈಡ್‌ಲೈನ್ಸ್ ಪ್ರಕಾರ ಎಷ್ಟು ಕಂಪನಿಗಳಿವೆಯೋ ಅಷ್ಟಕ್ಕೂ ಅನುಮತಿ ಕೊಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಹೇಳಿದ್ದಾರೆ. ಈ ಮೂಲಕ ಈ ವಿಚಾರದಲ್ಲಿ ಸರ್ಕಾರ ಯಾವುದೇ ಅಕ್ರಮಕ್ಕೆ ಅವಕಾಶ ನೀಡುವುದಿಲ್ಲ. ಸರ್ಕಾರ ಜನಸಾಮಾನ್ಯರಿಗೆ ಅನುಕೂಲವಾಗುವ ರೀತಿಯಲ್ಲೇ ಕ್ರಮಕೈಗೊಳ್ಳುತ್ತದೆ ಎಂಬ ಭರವಸೆಯನ್ನು ನೀಡಿದ್ದಾರೆ. ಅವರ ಈ ಹೇಳಿಕೆಗೆ ರಾಜ್ಯದ ಭ್ರಷ್ಟಾಚಾರ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಡಾ.V.S.ವೆಂಕಟಾಚಲ ಹಾಗೂ ಸಮತಾ ಸೈನಿಕ ದಳ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಜಿ.ಗೋಪಾಲ್ ಅವರು ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಕೇಂದ್ರ ಸರ್ಕಾರದ ಪಟ್ಟಿಯಲ್ಲಿರುವ 20 HSRP ತಯಾರಿಕಾ ಸಂಸ್ಥೆಗಳಲ್ಲಿ ಒಬ್ಬರ ನಿಯಂತ್ರಣದಲ್ಲೇ ಇರುವ ಕೇವಲ 4-5 ಕಂಪನಿಗಳ ಉತ್ಪನ್ನಗಳಿಗಷ್ಟೇ ಸಾರಿಗೆ ಇಲಾಖೆ ಅನುಮತಿ ನೀಡಲು ರಹಸ್ಯ ತಯಾರಿ ನಡೆದಿದೆ. ಹಳೆಯ ವಾಹನಗಳಿಗಷ್ಟೇ HSRP ಬೇಕಿದೆ. ದೇಶದಲ್ಲಿ ಸುಮಾರು 30 ಕೋಟಿ ಹಳೆಯ ವಾಹನಗಳಿದ್ದು, ಅದರಲ್ಲಿ ಕರ್ನಾಟಕದಲ್ಲೇ 2 ಕೋಟಿಗಳಷ್ಟು ವಾಹನಗಳಿವೆ. ಈ ವಾಹನಗಳಿಗೆ HSRP ಅಳವಡಿಸಬೇಕಿದೆ. ಇದರ ಬೆಲೆ 400ರಿಂದ 950 ರೂಪಾಯಿವರೆಗೆ ಇದೆ ಎನ್ನಲಾಗಿದೆ. ಪ್ರತೀ HSRPಯಲ್ಲಿ ಶೇಕಡಾ 50ರಷ್ಟು ಲಾಭ ಇದೆ. ಹಾಗಾಗಿ ಕೆಲವು ಕಂಪನಿಗಳು ಸುಮಾರು 500 ಕೋಟಿ ರೂಪಾಯಿ ಲಾಭವನ್ನು ಕಬಳಿಸಲು ಸಂಚು ಹೂಡಿವೆ. ಲಂಚದ ಆಸೆಗೆ ಬಿದ್ದು ಕೆಲವು ಅಧಿಕಾರಿಗಳು ಹಾಗೂ ಪ್ರಭಾವಿಗಳು ಭಾರೀ ಅಕ್ರಮಕ್ಕೆ ಮುಂದಾಗಿದ್ದಾರೆ. ಇದರಿಂದ ಇಡೀ ಯೋಜನೆಯೇ ಹಾದಿ ತಪ್ಪುವ ಸಾಧ್ಯತೆಗಳಿವೆ ಎಂದು ಲೋಕೇಶ್ ರಾಮ್ ಹೇಳಿದ್ದಾರೆ.

ರಾಜ್ಯದಲ್ಲಿ 20 ಸಾವಿರ ಜನರು ವಾಹನಗಳ ನಂಬರ್ ಪ್ಲೇಟ್ ನಿರ್ವಹಣೆಯಲ್ಲಿ ತೊಡಗಿದ್ದಾರೆ. ಇದೀಗ ವಾಹನ ತಯಾರಕರು ಹಾಗೂ ಡೀಲರುಗಳೇ HSRP ನಂಬರ್ ಪ್ಲೇಟ್ ವಿತರಿಸಬೇಕು ಎಂಬ ನಿಯಮ ಜಾರಿಯಾದರೆ ಈ 20 ಸಾವಿರ ಕುಟುಂಬಗಳೂ ಬೀದಿಗೆ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೆ, ವಾಹನ ತಯಾರಕರು-ವಿತರಕರಷ್ಟೇ HSRP ಪೂರೈಸುವ ನಿಯಮ ಜಾರಿಯಾದರೆ ವಾಹನ ಮಾಲೀಕರು ಬದಲಿ HSRPಗಾಗಿ ತಾವು ಹಿಂದೆ ಖರೀದಿಸಿದ ಸ್ಥಳಕ್ಕೆ ಹೋಗಬೇಕಾಗುತ್ತದೆ. ಇದರಿಂದ 500 ರೂಪಾಯಿಯ HSRP ಖರೀದಿಸಲು ಸಾವಿರಾರು ರೂಪಾಯಿ ಖರ್ಚುಮಾಡಬೇಕಾಗುವ ಪರಿಸ್ಥಿತಿ ಎದುರಾಗುತ್ತದೆ ಎನ್ನಲಾಗಿದೆ.

 

 

ಇದನ್ನು ಓದಿ: ಪುತ್ತೂರು: ತಂದೆ ನಾಪತ್ತೆ ಪುತ್ರನ ಮೆಹಂದಿ ರದ್ದು ,ರಾತ್ರಿ ವೇಳೆ ಪತ್ತೆ