Begging by PhonePe: ಫೋನ್ ಪೇ ಹಿಡಿದುಕೊಂಡು ಭಿಕ್ಷೆ ಬೇಡುತ್ತಿರುವ ಭಿಕ್ಷುಕ, ವೈರಲ್ ವೀಡಿಯೋ !

latest news intresting news beggar holding a phone pay and begging

Begging by phonePe: ತಂತ್ರಜ್ಞಾನ ಮುಂದುವರಿಯುತ್ತಿದ್ದು ಜನರ ಮೇಲೆ ಅಗಾಧ ಪರಿಣಾಮವನ್ನು ಬೀರಿದೆ ಎಂದು ಹೇಳಿರುವುದನ್ನು ನಾವು ಕೇಳಿರುತ್ತೇವೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜವಾಗಿದೆ ಎಂದರೆ ಈ ವಿಡಿಯೋ ನೋಡಿದರೆ ನಿಮಗೇ ತಿಳಿಯುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಚಿತ್ರ ವಿಚಿತ್ರವಾದ ಸಾಕಷ್ಟು ವಿಡಿಯೋಗಳು ಹರಿದಾಡುತ್ತಲೇ ಇರುತ್ತದೆ ಇದೀಗ ಅಂತದ್ದೇ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಈ ವಿಡಿಯೋ ನೋಡಿದ ಕ್ಷಣ ನಿಮ್ಮ ಕಣ್ಣನ್ನು ನೀವೇ ನಂಬಲು ಅಸಾಧ್ಯ ಎಂಬ ಭಾವನೆ ಬರುವುದಂತೂ ಗ್ಯಾರಂಟಿ. ಅಂತದೇನಪ್ಪಾ ಇದೆ ಈ ವಿಡಿಯೋದಲ್ಲಿ ಅಂತೀರಾ? ನೀವೇ ನೋಡಿ.

ಸಾಮಾನ್ಯವಾಗಿ ಭಿಕ್ಷುಕ ಎಂದ ಕ್ಷಣ ನಿಮಗೆ ನೆನಪಾಗೋದು ಹರಿದ ಬಟ್ಟೆ ಸಿಕ್ಕಿಸಿಕೊಂಡು, ಕೈಯಲ್ಲೊಂದು ಮುರಿದ ತಟ್ಟೆ ಹಿಡ್ಕೊಂಡು, ಒಂದು ಜೋಳಿಗೆ ನೇತು ಹಾಕೊಂಡು, “ಅಮ್ಮಾ… ತಾಯಿ… ಭಿಕ್ಷೆ ಹಾಕಮ್ಮ” ಎಂದು ಮನೆ ಮನೆಗೆ ಹೋಗಿ ಭಿಕ್ಷೆ ಬೇಡುತ್ತಾನೆ. ರಸ್ತೆಯ ಬದಿಯಲ್ಲಿ, ಟ್ರಾಫಿಕ್ ನಲ್ಲಿ ರೈಲುಗಳಲ್ಲಿ , ಬಸ್ಗಳಲ್ಲಿ ಒಟ್ಟಿನಲ್ಲಿ ಜನಜಂಗುಳಿ ಇರುವಂತಹ ಸ್ಥಳಗಳಲ್ಲಿ ಇಂತಹ ಭಿಕ್ಷುಕರು ನೆಲೆಸಿರುತ್ತಾರೆ ಎಂದು. ಆದರೆ ನಿಮಗೆ ಗೊತ್ತಾ? ಈಗ ಭಿಕ್ಷುಕರು ಕೂಡ ಮಾಡರ್ನ್ ಆಗಿ ಬಿಟ್ಟಿದ್ದಾರೆ. ಇಲ್ಲೊಬ್ಬ ಭಿಕ್ಷುಕನ ಡಿಫ್ರೆಂಟ್ ಸ್ಟೈಲೇ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರನ್ನು ನಿಬ್ಬೆರಗಾಗುವಂತೆ ಮಾಡಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ.

ಸಿಕ್ಕಾಪಟ್ಟೆ ಜನಜಂಗುಳಿ ತುಂಬಿರುವ ರೈಲಿನಲ್ಲಿ ಒಬ್ಬ ಭಿಕ್ಷುಕ (beggar) ಭಿಕ್ಷೆ ಬೇಡುತ್ತಿದ್ದಾನೆ ಭಿಕ್ಷೆ ಬೇಡುತ್ತಿರುವ ಈ ಭಿಕ್ಷುಕನನ್ನು ನೋಡಿದರೆ ನಿಮಗೆ ಒಮ್ಮೆ ಈತ ಭಿಕ್ಷುಕ ನಾ…? ಎಂದು ಪ್ರಶ್ನೆ ಉದ್ಭವವಾಗಬಹುದು. ಆದರೆ ಹೌದು, ಈತನೇ ಡಿಜಿಟಲ್ ಭಿಕ್ಷುಕ(Digital Beggar). ಈತ ಆನ್ಲೈನ್ ಮೂಲಕವೇ ಭಿಕ್ಷೆ (Begging by phonePe) ಬೇಡುತ್ತಾನೆ. ಇದಕ್ಕಾಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬಹುದಾದ ಫಲಕವನ್ನು ಕುತ್ತಿಗೆಗೆ ನೇತು ಹಾಕಿಕೊಂಡಿದ್ದಾನೆ. ಫೋನ್ ಪೇ (Phone Pe) ಮೂಲಕ ನೀವು ಆ ವ್ಯಕ್ತಿಗೆ ಹಣ ನೀಡಬಹುದು. ಈ ವಿಡಿಯೋ ನೋಡಿ ಎಲ್ಲರಿಗೂ ಗೊಂದಲ ಆಗೋದಂತೂ ಖಂಡಿತ. ಆದರೆ ಅಷ್ಟೇ ತಮಾಷೆಯಾಗಿಯೂ ಇದೆ. ಮುಂಬೈನ ಲೋಕಲ್ ಟ್ರೈನ್ ಒಂದರಲ್ಲಿ ಈ ಘಟನೆ ನಡೆದಿದ್ದು, ಸದ್ಯ ಯಾರೋ ಪ್ರಯಾಣಿಕರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈಗಂತೂ ದೇಶದಾದ್ಯಂತ ಡಿಜಿಟಲ್ ಪೇ (Digital pay) ಸಿಸ್ಟಮ್ ಬಂದಿದ್ದು, ಹೆಚ್ಚಾಗಿ ಜನರು ಮೊಬೈಲ್ ನಲ್ಲಿ ಪಾವತಿಸುತ್ತಾರೆ. ಯಾರ ಬಳಿಯೂ ಚಿಲ್ಲರೆ ಕಾಸು ಇರುವುದಿಲ್ಲ ಎಂಬುದನ್ನರಿತ ಈ ಚಾಲಾಕಿ ಭಿಕ್ಷುಕನು ಇಂತಹ ಖತರ್ನಾಕ್ ಐಡಿಯಾ ಗೆ ಕೈ ಹಾಕಿದ್ದಾನೆ. ಈತ ಒಬ್ಬ ಪಕ್ಕ ಹೈಟೆಕ್ ಭಿಕ್ಷುಕ ಎಂದರೆ ತಪ್ಪಾಗಲಾರದು. ಈ ವಿಶಿಷ್ಟ ಭಿಕ್ಷಾಟನೆಯ ವಿಧಾನವನ್ನು ನೋಡಿದ ಜನರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಡಿಜಿಟಲ್ ಭಿಕ್ಷುಕನ ವಿಡಿಯೋ ಲಕ್ಷಾಂತರ ವೀಕ್ಷಣೆಯನ್ನು ಗಿಟ್ಟಿಸಿಕೊಂಡಿದೆ.

 

ಇದನ್ನು ಓದಿ: Corona: ಕೊರೋನಾ ಎಫೆಕ್ಟ್ ಈಗ ಮಕ್ಕಳಲ್ಲಿ ಪ್ರತ್ಯಕ್ಷ ! ಶಾಕಿಂಗ್ ಶಾಕಿಂಗ್ ! 

Leave A Reply

Your email address will not be published.