LPG Cylinder: ಗ್ಯಾಸ್ ಸಿಲಿಂಡರ್ ಕಸ್ಟಮ್ ಸುಂಕ 200 % ಏರಿಕೆ; ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ !

latest news Gas cylinder custom duty hiked by 200%

Gas Cylinder: ಭಾರತದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಸಾಕಷ್ಟು ತೈಲ ಮತ್ತು ಅನಿಲ ಉತ್ಪಾದನೆ ಇಲ್ಲದಿರುವುದು ಈಗಾಗಲೇ ಸಮೀಕ್ಷೆ ಮೂಲಕ ತಿಳಿದು ಬಂದಿದೆ. ಅದಕ್ಕಾಗಿಯೇ ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಮತ್ತು ಇತರ ಖಾಸಗಿ ಕಂಪನಿಗಳು ಎಲ್‌ಪಿಜಿಯನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿವೆ. ಅದರಲ್ಲೂ ಸೌದಿ ಅರೇಬಿಯಾದಿಂದ ಆಮದು ಹೆಚ್ಚಾಗಿರುತ್ತದೆ ಎಂದು ಹೇಳಬಹುದು.
ಇಂತಹ ಪರಿಸ್ಥಿತಿಯಲ್ಲಿ ಪೂರೈಕೆಗಾಗಿ ಹೊರ ದೇಶಗಳನ್ನು ಅವಲಂಬಿಸಬೇಕಾಗಿರುವ ಕಾರಣ, ಭಾರತದಲ್ಲಿ ತೈಲ ಮತ್ತು ಅನಿಲದ ಬೆಲೆಗಳು ಏರುತ್ತದೆ ಮತ್ತು ಇಳಿಯುತ್ತವೆ.

ಇದೀಗ ಮುಖ್ಯವಾಗಿ ಕೇಂದ್ರ ಸರ್ಕಾರ ಮಹತ್ವದ ಸರ್ಕಾರ ಕೈಗೊಂಡಿದ್ದು, ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ಗಳ ಕುರಿತು ಮಹತ್ವದ ಘೋಷಣೆ ಮಾಡಲಾಗಿದೆ. ಹೌದು, LPG ಸಿಲಿಂಡರ್‌ಗಳ ಮೇಲಿನ ತೆರಿಗೆಯನ್ನು ಹೆಚ್ಚಿಸುವುದಾಗಿ ಭಾರತ ಸರ್ಕಾರ ಘೋಷಿಸಿದೆ.

ಇತ್ತೀಚೆಗೆ ಮೋದಿ ಸರ್ಕಾರ ದೇಶೀಯ ಎಲ್‌ಪಿಜಿ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಹೆಚ್ಚಿಸಲು ನಿರ್ಧರಿಸಿದೆ. ಇದುವರೆಗೆ ಶೇ.5ರಷ್ಟಿತ್ತು. ಆದರೆ ಇನ್ನು ಮುಂದೆ ಕಸ್ಟಮ್ಸ್ ಸುಂಕವು 15 ಪ್ರತಿಶತದಷ್ಟು ಇರುತ್ತದೆ. ಇದರರ್ಥ ಮೂಲ ಕಸ್ಟಮ್ಸ್ ಸುಂಕವು ಶೇಕಡಾ 10 ರಷ್ಟು ಹೆಚ್ಚಾಗಿದೆ. ಇದಲ್ಲದೇ ಕೇಂದ್ರ ಸರ್ಕಾರ ಮತ್ತೊಂದು ನಿರ್ಧಾರ ಕೈಗೊಂಡಿದೆ. ಎಲ್‌ಪಿಜಿ ಸಿಲಿಂಡರ್‌ಗಳ ಆಮದಿನ ಮೇಲೆ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ (ಎಐಡಿಸಿ) ಕೂಡ ಶೇ.15ರಷ್ಟು ವಿಧಿಸಲಾಗುತ್ತದೆ.

ಆದರೆ ಕಸ್ಟಮ್ಸ್ ಸುಂಕದ ಹೆಚ್ಚಳವು ದ್ರವೀಕೃತ ಪ್ರೋಪೇನ್, ದ್ರವೀಕೃತ ಬ್ಯುಟೇನ್, ದ್ರವೀಕೃತ ಪ್ರೋಪೇನ್ ಮತ್ತು ದ್ರವೀಕೃತ ಬ್ಯುಟೇನ್ ಮಿಶ್ರಣಕ್ಕೆ ಅನ್ವಯಿಸುವುದಿಲ್ಲ ಎನ್ನಲಾಗಿದೆ. ಜೊತೆಗೆ ಸಾರ್ವಜನಿಕ ವಲಯದ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್‌ಗಳು ಮನೆಗಳಿಗೆ ಪೂರೈಸುವ ಸಿಲಿಂಡರ್‌ಗಳಿಗೆ ಸಂಬಂಧಿಸಿದಂತೆ ಕಸ್ಟಮ್ಸ್ ಸುಂಕ ಹೆಚ್ಚಳವು ಅನ್ವಯಿಸುವುದಿಲ್ಲ ಎಂದು ಪರೋಕ್ಷ ತೆರಿಗೆಗಳ ಕೇಂದ್ರೀಯ ಮಂಡಳಿ ಸ್ಪಷ್ಟಪಡಿಸಿದೆ.

ಮುಖ್ಯವಾಗಿ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ಆಮದು ಮಾಡಿಕೊಳ್ಳುವ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕ ಶೂನ್ಯವಾಗಿದೆ ಎಂದು ತಿಳಿಸಿದ್ದು, ಇತರ ಕಂಪನಿಗಳು ಆಮದು ಮಾಡಿಕೊಳ್ಳುವ ದೇಶೀಯ ಎಲ್‌ಪಿಜಿಯ ಮೇಲೆ ಕಸ್ಟಮ್ಸ್ ಸುಂಕವು ಶೇಕಡಾ 15 ಆಗಿದೆ ಎನ್ನಲಾಗಿದೆ.

ಸದ್ಯ ಹೊಸ ಮೂಲ ಕಸ್ಟಮ್ಸ್ ಸುಂಕ ದರಗಳು ಜುಲೈ 1 ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಕೇಂದ್ರದ ಇತ್ತೀಚಿನ ನಿರ್ಧಾರದಿಂದ ಜನ ಸಾಮಾನ್ಯರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನುವುದೇ ಖುಷಿಯ ಸಂಗತಿ ಆಗಿದೆ.

 

ಇದನ್ನು ಓದಿ: HSRP ಪ್ರಕರಣ : ‘ಅಕ್ರಮಕ್ಕೆ ಯಾವುದೇ ಅವಕಾಶ ನೀಡಲ್ಲ’ ಎಂದು ಭರವಸೆ ನೀಡಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ! ಈ ಹಿನ್ನೆಲೆ ಸಚಿವರಿಗೆ ಸಂಘಟನೆಗಳ ಅಭಿನಂದನೆ !

Leave A Reply

Your email address will not be published.