Kadaba: ವಾಹನ ಸವಾರರಿಗೆ ತೊಂದರೆಯಾದ ಕುದುರೆ ಸವಾರಿ : ಪೊಲೀಸರಿಂದ ವಾರಸುದಾರರಿಗೆ ಮುಚ್ಚಳಿಕೆ
Latest Dakshina Kannada news Kadaba horse causing trouble to vehicles complainted to the police station on horse owner
Kadaba:ಮುಖ್ಯ ರಸ್ತೆಯುದ್ದಕ್ಕೂ ಅಲೆದಾಡುತ್ತಾ ವಾಹನ ಸವಾರರಿಗೆ ತೊಂದರೆ ಕೊಡುತ್ತಿದ್ದ ಕುದುರೆಯೊಂದನ್ನು ಯುವಕನೊರ್ವ ಕಟ್ಟಿ ಹಾಕಿ ಠಾಣೆಗೆ ದೂರು ನೀಡಿದ ಘಟನೆ ಜುಲೈ ೨ ರಂದು ಕಡಬದಿಂದ (kadaba) ವರದಿಯಾಗಿದೆ.
ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಅಲೆಕ್ಕಾಡಿಯ ವ್ಯಕ್ತಿ ಯೊಬ್ಬರಿಗೆ ಸೇರಿದ ಕುದುರೆ ಹಲವು ದಿನಗಳಿಂದ ಪ್ರಮುಖ ರಸ್ತೆಯಲ್ಲೇ ತಿರುಗಾಡುತ್ತಿತ್ತು.
ರಸ್ತೆ ಬದಿ ತೊಂದರೆ ಕೊಡುತ್ತಿದ್ದ ಕುದುರೆಯನ್ನು ವಾಹನ ಸವಾರರೊಬ್ಬರು ಓಡಿಸಿದ್ದು ಈ ವೇಳೆ ಸಾಮಾಜಿಕ ಕಾರ್ಯಕರ್ತ ರಾಘವ ಕಳಾರ ಎಂಬವರಿಗೆ ಸೇರಿದ ಕೃಷಿ ತೋಟಕ್ಕೆ ಬಂದು ನೆಟ್ಟ ಹಸಿರು ಹುಲ್ಲು ನಾಶಪಡಿಸಿದಲ್ಲದೆ ಪೈಪ್ ಗೆ ಹಾನಿ ಮಾಡಿತ್ತು.
ಇನ್ನಷ್ಟು ಸಾರ್ವಜನಿಕರಿಗೆ ಉಪಟಳ ಕೊಡಬಹುದೆಂದು ಗದ್ದೆಯಲ್ಲಿ ತೆಂಗಿನ ಮರಕ್ಕೆ ಕಟ್ಟಿಹಾಕಿ ಬಳಿಕ ಠಾಣೆಗೆ ದೂರು ನೀಡಿದ್ದಾರೆ.ಪೊಲೀಸರು ವಾರಿಸುದಾರನ್ನು ಕರೆದು ರಸ್ತೆಗೆ ಬಿಡದಂತೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕಡಬ ಪಟ್ಟಣ ವ್ಯಾಪ್ತಿಯ ಮುಖ್ಯ ರಸ್ತೆ ಗಳಲ್ಲಿ ಸಾಕು ಪ್ರಾಣಿಗಳಾದ ಆಡು, ದನ ನಿತ್ಯ ಅಲೆದಾಡಿ ವಾಹನಗಳಿಗೆ ತೊಂದರೆ ಕೊಡುತ್ತಿದ್ದು ಇದಕ್ಕೆ ಈಗ ಕುದುರೆಯು ಸೇರ್ಪಡೆಯಾಗಿದೆ.ಸಾಕು ಪ್ರಾಣಿಗಳನ್ನು ಬೇಕಾಬಿಟ್ಟಿ ಬಿಟ್ಟು ಸಾರ್ವಜನಿಕರಿಗೆ ಪರೋಕ್ಷ ತೊಂದರೆ ಕೊಡುತ್ತಿರುವ ಮಾಲಕರ ವಿರುದ್ದವೇ ಕ್ರಮ ಕೈಗೊಳ್ಳುವಂತೆ ರಾಘವ ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಇನ್ನೂ ನಿರ್ಧಾರವಾಗದ ವಿಪಕ್ಷ ನಾಯಕ : ಇಂದು ಕೇಂದ್ರ ಬಿಜೆಪಿಯ ವೀಕ್ಷಕರು ಬೆಂಗಳೂರಿಗೆ