

UP bus conductor: ಚಲಿಸುತ್ತಿರುವ ಬಸ್ಸಿನಲ್ಲೇ ಕಂಡಕ್ಟರ್ (UP bus conductor) ಒಬ್ಬಾತ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿರುವುದು ವರದಿಯಾಗಿದೆ.
ರಾತ್ರಿ.ಬಸ್ಸು ಚಲಿಸುತ್ತಿದ್ದಂತೆ ಬಸ್ಸಿನ ಹಿಂಬದಿಯ ಒಂದು ಸೀಟಿನಲ್ಲಿ ಕುಳಿತಿದ್ದ ಕಂಡಕ್ಟರ್ ವರ್ತನೆ ವಿಚಿತ್ರವಾಗಿ ಅಲ್ಲಾಡುತ್ತಿದ್ದ. ಏನೋ ಅನುಮಾನ ಬಂದ ಪ್ರಯಾಣಿಕರೊಬ್ಬರು ಕಂಡಕ್ಟರ್ ನ ಕರ್ಮವನ್ನು ತನ್ನ ಮೊಬೈಲ್ ನಲ್ಲಿ ಇದನ್ನು ಚಿತ್ರೀಕರಣ ಮಾಡುತ್ತಾ ಹೋಗಿದ್ದಾರೆ. ಕೊನೆಗೆ ಹತ್ತಿರ ಹೋಗಿ ನೋಡಿದಾಗ ಕಂಬಳಿಯೊಳಗೆ ಎಳೆಯ ಮಹಿಳೆಯೊಬ್ಬರೊಂದಿಗೆ ಕಂಡಕ್ಟರ್ ಲೈಂಗಿಕ ಕ್ರಿಯೆಯನ್ನು ನಡೆಸುತ್ತಿರುವುದು ಗೊತ್ತಾಗಿದೆ.
ಕಂಡಕ್ಟರ್ ಸೀಟ್ ನಲ್ಲಿ ಕೂತಿದ್ದು ಆತನ ಮೇಲೆ ಮಹಿಳೆ ಆವರಿಸಿ ಕೂತಿದ್ದು, ರತಿ ನಡೆಸಿದ್ದರು. ಯಾವಾಗ ಪ್ರಯಾಣಿಕ ವಿಡಿಯೋ ಮಾಡುತ್ತಿದ್ದಾನೆ ಎಂದು ಕಂಡಕ್ಟರ್ ಗೆ ತಿಳಿಯಿತೋ, ಆಗ ಆತ ಎಚ್ಚೆತ್ತುಕೊಂಡು ಮಹಿಳೆಯನ್ನು ಕೆಳಕ್ಕೆ ಇಳಿಸಿ ಕಂಬಳಿಯಿಂದ ಮಾನ ಮುಚ್ಚಿಕೊಳ್ಳಲು ಪರದಾಡಿದ್ದಾನೆ. ಘಟನೆ ಅರಿವಿಗೆ ಬಂದ ಇತರ ಪ್ರಯಾಣಿಕರು ದುರ್ವರ್ತನೆ ಬಗ್ಗೆ ಕಂಡಕ್ಟರ್ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಈ ಘಟನೆಯು ಸುಮಾರು 10 ದಿನಗಳ ಹಿಂದೆ ನಡೆದಿದೆ ಎಂದು ಅಲ್ಲಿನ ಕೆಲ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಇದೀಗ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ವೈರಲ್ ಆದ ಬಳಿಕ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಅಧಿಕಾರಿಗಳು ಚಾಲಕ ಮತ್ತು ಕಂಡಕ್ಟರ್ ಇಬ್ಬರು ಶಾಮೀಲು ಕೂಡಾ ಆಗಿದ್ದನ್ನು ಪತ್ತೆ ಹಚ್ಚಿದ್ದು, ಚಾಲಕ ಮತ್ತು ಕಂಡಕ್ಟರ್ ಇಬ್ಬರನ್ನೂ ಕೆಲಸದಿಂದ ವಜಾಗೊಳಿಸಿದೆ. ಘಟನೆಯು ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಸಮೀಪದ ಆಲಂ ಭಾಗ್ ನಲ್ಲಿ ನಡೆದಿದೆ ಎನ್ನಲಾಗಿದೆ.
https://twitter.com/i/status/1674770187873288192
ಇದನ್ನೂ ಓದಿ: ಭಾರಿ ದುರಂತದ ನಂತರ ಮತ್ತೊಮ್ಮೆ ಟೈಟಾನಿಕ್ ಯಾತ್ರೆಗೆ ಜಾಹೀರಾತು ನೀಡಿದ ಸಂಸ್ಥೆ, ಧಮ್ ಇದ್ದವರು ಅಪ್ಲೈ ಮಾಡ್ಬೋದು!













