Tamil Industry: ನಟ ಧನುಶ್‌ ಸೇರಿದಂತೆ ಈ ಖ್ಯಾತ ನಟ ನಟಿಯರಿಗೆ ತಮಿಳು ಚಿತ್ರರಂಗದಿಂದ ಬ್ಯಾನ್‌ ಎಚ್ಚರಿಕೆ ಸಂದೇಶ!

Latest tamil cinema news Kollywood news Tamil cinema producer union accusation against actor Dhanush

Tamil Industry : ದಕ್ಷಿಣ ಭಾರತದ ಪ್ರತಿಭಾವಂತ ನಟ ಧನುಶ್‌ ಅವರಿಗೆ ತಮಿಳು ಚಿತ್ರರಂಗದ ನಿರ್ಮಾಪಕರ ಸಂಘ ನೋಟಿಸ್‌ ಜಾರಿ ಮಾಡಿದೆ. ಇಷ್ಟು ಮಾತ್ರವಲ್ಲದೇ ತಮಿಳು ಚಿತ್ರರಂಗದಿಂದ( Tamil Industry ) ಬ್ಯಾನ್‌ ಮಾಡುವುದಾಗಿಯೂ ಹೇಳಿದೆ. ನಿರ್ಮಾಪಕರ ಸಂಘ ನಟ ಧನುಶ್‌ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

ತನ್ನ ನಟನೆಯ ಮೂಲಕ ದೇಶದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ನಟ ಧನುಶ್‌. ಧನುಶ್‌ ಮಾತ್ರವಲ್ಲದೇ, ಇತರ ಕೆಲವು ಜನಪ್ರಿಯ ತಮಿಳು ನಟರಿಗೂ ನೋಟಿಸ್‌ ನೀಡಿದೆ ಎನ್ನಲಾಗಿದೆ. ಈ ರೀತಿ ಖಡಕ್‌ ಆಗಿ ತಮಿಳು ಚಿತ್ರರಂಗದ ನಿರ್ಮಾಪಕ ಸಂಘವು ವರ್ತಿಸಲು ಕಾರಣವೇನೆಂದರೆ, ನಟ ಧನುಶ್‌ ನಿರ್ಮಾಪಕರೊಬ್ಬರಿಗೆ ಮುಂಗಡ ಹಣ ಪಡೆದು ಈಗ ಸಿನಿಮಾದಲ್ಲಿ ನಟಿಸಲು ಸಬೂಬು ಹೇಳುತ್ತಾ ಮುಂದೂಡ್ತ ಇದ್ದಾನೆಂಬ ದೂರು ಬಂದ ಕಾರಣ ಈ ನೋಟಿಸ್‌ ಜಾರಿ ಮಾಡಲಾಗಿದೆ.

ತಮಿಳಿನ ಶ್ರೀ ತೆನಂದಾಲ್‌ ನಿರ್ಮಾಣ ಸಂಸ್ಥೆಯಿಂದ ನಟ ಧನುಶ್‌ ಸಿನಿಮಾ ಮಾಡಲು ಹಣ ಪಡೆದುಕೊಂಡಿದ್ದು, ಇಲ್ಲಿವರೆಗೆ ನಟಿಸಿಲ್ಲ. ಹಾಗಾಗಿ ಈ ನಿರ್ಮಾಣ ಸಂಸ್ಥೆ ತಮಿಳು ಫಿಲಂ ಪ್ರೊಡ್ಯೂಸರ್ಸ್‌ ಕೌನ್ಸಿಲ್‌ಗೆ ದೂರು ನೀಡಿತ್ತು. ಹೀಗಾಗಿ ಈಗ ನೋಟಿಸ್‌ ಜಾರಿ ಮಾಡಿ, ಎಚ್ಚರಿಕೆ ನೀಡಿದೆ.

ಸಿಲಂಬರಸನ್‌ ಅಲಿಯಾಸ್‌ ಸಿಂಭು, ಎಸ್‌ಜೆ ಸೂರ್ಯ, ವಿಶಾಲ್‌, ವಿಜಯ್‌ ಸೇತುಪತಿ, ಹಾಸ್ಯನಟ ಯೋಗಿಬಾಬು, ಅಮಲಾ ಪೌಲ್‌, ಲಕ್ಷ್ಮೀ ರೈ ಅವರಿಗೂ ಈ ರೀತಿಯದ್ದೇ ನೋಟಿಸ್‌ ನೀಡಲಾಗಿದೆ. ಸಿನಿಮಾ ಮಾಡಲು ಆಗದಿದ್ದರೆ, ಮುಂಗಡ ಪಡೆದ ಹಣ ನೀಡಲು, ಷರತ್ತು ಬದ್ಧ ಸೂಚನೆ ನೀಡಲಾಗಿದೆ.

ನಟಿಯರಾದ ಅಮಲಾ ಪೌಲ್ ಮತ್ತು ಲಕ್ಷ್ಮಿ ರೈ 10 ಮಂದಿ ಬಾಡಿ ಗಾರ್ಡ್ ಗಳನ್ನು ನೇಮಿಸಿಕೊಂಡು ತಮ್ಮ ಖರ್ಚಿಗೆಂದು ನಿರ್ಮಾಪಕರಿಂದ ಹೆಚ್ಚಿನ ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಈ ನಟರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಮತ್ತು ಮುಂದಿನ ವಾರ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರಬೀಳಲಿದೆ ಎಂದು ನಿರ್ಮಾಪಕರ ಆಪ್ತ ಮೂಲಗಳು ತಿಳಿಸಿವೆ.

ಇದನ್ನೂ ಓದಿ: SSC Recruitment 2023: ಎಸ್​ಎಸ್​ಸಿಯಲ್ಲಿ ಭರ್ಜರಿ ಉದ್ಯೋಗವಕಾಶ! ಭರ್ತಿ 1558 ಹುದ್ದೆಗಳಿಗೆ ಅರ್ಜಿ ಆಹ್ವಾನ, ಈ ಕೂಡಲೇ ಅರ್ಜಿ ಸಲ್ಲಿಸಿ

Leave A Reply

Your email address will not be published.