Encroachment clearance: ದೆಹಲಿಯಲ್ಲಿ ಮತ್ತೇ ಬುಲ್ಡೋಜಾರ್ ರೌದ್ರ ಅವತಾರ! ಎರಡು ಧಾರ್ಮಿಕ ಸ್ಥಳಗಳ ಸಂಪೂರ್ಣ ನಾಶ
Latest national news encroachment clearance A Hanuman temple and a mosque were demolished in Delhi to for widen the road
Encroachment clearance: ರಾಷ್ಟ್ರ ರಾಜಧಾನಿ ದೆಹಲಿಯ ಭಜನ್ ಪುರದಲ್ಲಿ ಇಂದು ಮುಂಜಾನೆ 6ಗಂಟೆಗೆ ಲೋಕೋಪಯೋಗಿ ಇಲಾಖೆ (PWD)ವತಿಯಿಂದ, ಕಾನೂನು ಬಾಹಿರವಾಗಿ ಕಟ್ಟಿಕೊಳ್ಳಲಾಗಿದ್ದ ಒಂದು ದೇವಸ್ಥಾನ ಮತ್ತು ಇನ್ನೊಂದು ದರ್ಗಾ ವನ್ನು ಒತ್ತುವರಿ ತೆರವು ಕಾರ್ಯಾಚರಣೆ (Encroachment clearance)ನಡೆಸಲಾಯಿತು.
ಪೊಲೀಸರು, ಸಿಆರ್‌ಪಿಎಫ್ ಯೋಧರ ಬಿಗಿ ಭದ್ರತೆಯಲ್ಲಿ ಕೆಡವಲಾಗಿದ್ದು, ಯಾವುದೇ ಗಲಾಟೆ-ಗಲಭೆ ಆಗದಂತೆ ಎಚ್ಚರವಹಿಸಿ, ಒತ್ತುವರಿಗಳನ್ನು ತೆರವು ಮಾಡಲಾಗಿದೆ.
ಈಗಾಗಲೇ ದೆಹಲಿಯಾದ್ಯಂತ ಎಲ್ಲ ಕಡೆಗಳಲ್ಲಿ ಸರ್ಕಾರಿ ಸ್ಥಳಗಳನ್ನು ಒತ್ತುವರಿ ಮಾಡಿಕೊಂಡು, ಅಕ್ರಮವಾಗಿ ಕಟ್ಟಲಾದ ಧಾರ್ಮಿಕ ಕಟ್ಟಡಗಳು, ಸಂಸ್ಥೆಗಳನ್ನು ತೆರವುಗೊಳಿಸಬೇಕು ಎಂದು ಅಲ್ಲಿನ ಪಿಡಬ್ಲ್ಯೂಡಿ ಇಲಾಖೆಗೆ ಲೆಫ್ಟಿನೆಂಟ್ ಗವರ್ನರ್ ಸೂಚನೆ ನೀಡಿದ್ದಾರೆ. ಅದರ ಅನ್ವಯ ಕಾರ್ಯಾಚರಣೆಯೂ ಪ್ರಾರಂಭವಾಗಿದೆ.
ದೆಹಲಿಯಲ್ಲಿ ಕೆಲವು ರಸ್ತೆ ಅಗಲೀಕರಣ ಮಾಡಬೇಕಿರುವ ಹಿನ್ನೆಲೆಯಲ್ಲಿ ಇಂಥ ಒತ್ತುವರಿ ತೆರವುಗೊಳಿಸಲಾಗುತ್ತಿದೆ. ಇದೀಗ ಶಹರಾನ್‌ಪುರ ಹೆದ್ದಾರಿ ಅಗಲೀಕರಣ ಸಲುವಾಗಿ ಆಂಜನೇಯನ ಗುಡಿ ಮತ್ತು ದರ್ಗಾವನ್ನು ಧ್ವಂಸಗೊಳಿಸಲಾಗಿದೆ.
ಈ ಒತ್ತುವರಿ ತೆರವು ಕಾರ್ಯಾಚರಣೆ ಬಗ್ಗೆ ಮಾತನಾಡಿದ ಈಶಾನ್ಯ ದೆಹಲಿ ಡಿಸಿಪಿ ಜಾಯ್ ಎನ್ ಟಿರ್ಕಿ ‘ಭಜನ್ ಪುರ್ ಚೌಕ್‌ನಲ್ಲಿ ಶಾಂತಿಯುತವಾಗಿ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ. ದರ್ಗಾ ಮತ್ತು ದೇಗುಲಗಳನ್ನು ಕೆಡವುದಕ್ಕೂ ಪೂರ್ವ ಎರಡೂ ಧಾರ್ಮಿಕ ಸ್ಥಳಗಳ ಸಮಿತಿ ಸಿಬ್ಬಂದಿಯೊಂದಿಗೆ ಚರ್ಚೆ ನಡೆಸಲಾಗಿತ್ತು. ಇಂದು ಏನೂ ಸಮಸ್ಯೆಯಾಗದಂತೆ ಧಾರ್ಮಿಕ ಕಟ್ಟಡಗಳೆರಡನ್ನೂ ಕೆಡವಲಾಗಿದೆ’ ಎಂದಿದ್ದಾರೆ.
ಆದರೆ ಪಿಡಬ್ಲ್ಯೂಡಿ ಇಲಾಖೆಯ
ಸಚಿವೆ, ಆಪ್ ನಾಯಕಿ ಅತಿಶಿ ಅವರಿಗೇ ಇದು ಇಷ್ಟವಾಗಿಲ್ಲ. ಹೀಗೆ ದೇವಾಲಯ-ದರ್ಗಾಗಳನ್ನು ಕೆಡವಬೇಡಿ ಎಂದು ನಾನು ಲೆಫ್ಟಿನೆಂಟ್ ಅವರಿಗೆ ಈಗಾಗಲೇ ಪತ್ರ ಬರೆದಿದ್ದೆ. ಆದರೆ ಆ ಮಾತನ್ನು ನಿರ್ಲಕ್ಷ ಮಾಡಿದ್ದು ಅಲ್ಲದೇ, ಇಂದು ಮತ್ತೆ ಭಜನ್ ಪುರದಲ್ಲಿ ಒತ್ತುವರಿ ತೆರವು ಮಾಡಿದ್ದಾರೆ ಎಂದು ಅತಿಶಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
#WATCH | Anti-encroachment drive underway by PWD in Delhi's Bhajanpura area. pic.twitter.com/qITpHa1ehY
— ANI (@ANI) July 2, 2023