AI Technology: ಅಡುಗೆ ಮಾಡಿ ಹಾಕಲು ಬಂದಿದೆ ಅಡ್ವಾನ್ಸ್ಡ್ ಮಶೀನ್, ಹೆಂಡ್ತಿರೇ ನಿಮಗೆ ಇನ್ನು ಕಷ್ಟ ಉಂಟು !!!
Latest intresting and Technology news AI Technology news artificial intelligence in kitchen
AI Technology : ಸಿದ್ದರಾಮಯ್ಯನವರ ಸರ್ಕಾರ ಬಂದ ನಂತರ ಮಹಿಳೆಯರಿಗೆ ದಿನನಿತ್ಯ ಒಂದಲ್ಲ ಒಂದು ಸಿಹಿ ಸುದ್ದಿಗಳು ಸಿಗುತ್ತಲೇ ಬಂದಿವೆ. ಆದ್ರೆ ಮಹಿಳೆಯರೇ, ನಿಮಗಿದೋ ಒಂದು ಕೆಟ್ಟ ಸುದ್ದಿ ಇದೆ.
ಮಾನವನ ಯಾವುದೇ ಹಸ್ತಕ್ಷೇಪವಿಲ್ಲದೆ ಯಂತ್ರವೊಂದು ಚಕಾಚಕವಾಗಿ ಅಡುಗೆ ತಯಾರಿಸುವ ಮಶೀನ್ ಒಂದು ಬಂದಿದೆ. ಭವಿಷ್ಯದಲ್ಲಿ ಅಡುಗೆಮನೆಯಲ್ಲಿ ಗೃಹಿಣಿಯರು ಮತ್ತು ವೃತ್ತಿಪರ ಬಾಣಸಿಗರು ಕೆಲಸವನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಈಗ ಅದರ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮಾನವನ ಕೆಲಸಕಾರ್ಯವನ್ನು ಸುಲಭಗೊಳಿಸಲು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ( ಎ.ಐ) ಯಂತ್ರಗಳನ್ನು(AI Technology ) ರೂಪಿಸಲಾಗಿದೆ. ಅತ್ಯಾಧುನಿಕ ಅಂತರಿಕ್ಷ ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ ಬಳಕೆಯಾಗಬೇಕಾದ ಕೃತಕ ಬುದ್ಧಿಮತ್ತೆಯು ಇದೀಗ ಅಡುಗೆ ಮನೆಯನ್ನು ಕೂಡ ಪ್ರವೇಶಿಸಿದೆ. ಈಗ ಇವುಗಳು ಮಾನವನ ಎಲ್ಲಾ ಕೆಲಸಗಳಲ್ಲೂ ತನ್ನನ್ನು ಆವರಿಸಿಕೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಕೃತಕ ಬುದ್ಧಿಮತ್ತೆಯ ಹೊಸಹೊಸ ಆವಿಷ್ಕಾರಗಳು ಹೆಚ್ಚಾಗಿ ಕಂಡುಬರುತ್ತಿವೆ. ಇದು ಮಾನವರ ಕೆಲಸವನ್ನು ಸುಲಭಗೊಳಿಸುತ್ತದೆ ನಿಜ, ಆದರೆ ಇವುಗಳನ್ನು ನಮ್ಮನ್ನು ಸೋಮಾರಿಗಳನ್ನಾಗಿಸುವುದು ಒಂದು ಕಡೆಯಾದರೆ, ಇನ್ನೊಂದು ಕಡೆಯಲ್ಲಿ ಅದು ಭವಿಷ್ಯದಲ್ಲಿ ಮಾನವರ ಕೆಲಸ ಕಳೆಯಬಹುದು ಎಂದು ಹಲವರು ಅಭಿಪ್ರಾಯ ಪಡುತ್ತಾರೆ.
ಹೀಗಿರುವಾಗ ಅಡುಗೆ ಉದ್ಯಮಕ್ಕೂ ಎ.ಐ ತಂತ್ರಜ್ಞಾನದ ಯಂತ್ರಗಳು ಕಾಲಿಟ್ಟಿವೆ. ಹೌದು ಇತ್ತೀಚಿಗೆ ವೃತ್ತಿಪರ ಬಾಣಸಿಗರಂತೆ ಯಂತ್ರವೊಂದು ತಕರಕಾರಿಯನ್ನು ವೇಗವಾಗಿ ಹುರಿಯುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬೀದಿ ಬದಿಯಲ್ಲಿ ಚೈನಿಸ್ ಫುಡ್ ತಯಾರಿಸುವವರು ಆಹಾರಗಳನ್ನು ಕಲಾತ್ಮಕವಾಗಿ ಹಾರಿಸಿ ಗಾಳಿಯಲ್ಲಿ ಎಗರಿಸಿ ಹುರಿಯುವುದನ್ನು ನಾವು ನೋಡಿರುತ್ತೇವೆ. ಅವರ ಕೈ ಚಳಕವನ್ನು ಕಂಡು ನಾವು ನಿಬ್ಬೆರಗಾಗಿದ್ದೀವಿ. ಈಗ ಇಂತಹ ಕೆಲಸವನ್ನು ಮಷೀನುಗಳು ಮನುಷ್ಯ ಮಾಡಿದ್ದಕ್ಕಿಂತಲೂ ವೇಗವಾಗಿ ಮತ್ತು ಅದಕ್ಕಿಂತಲೂ ಪರಿಪೂರ್ಣವಾಗಿ ಮಾಡಿ ತೋರಿಸಿವೆ. ಪಳಗಿದ ಸ್ಟ್ರೀಟ್ ಫುಡ್ ಈಗ ಬಾಣಸಿಗರಿಗೆ ಸಾವಾಲು ಹಾಕುವಂತೆ ಯಂತ್ರವೊಂದು ಗಾಳಿಯ ವೇಗದಲ್ಲಿ ತರಕಾರಿಗಳನ್ನು ಹುರಿಯುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕೃತಕ ಬುದ್ಧಿಮತ್ತೆ ಅಡುಗೆ ಉದ್ಯಮಕ್ಕೂ ಕಾಲಿಟ್ಟಿತ್ತೇ ಎಂದು ನೋಡುಗರು ಆಶ್ಬರ್ಯಚಕಿತರಾಗಿದ್ದಾರೆ.
ತಮ್ಮ ಟ್ವಿಟರ್ ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದು, ‘ಕ್ರೇಜಿ ಮೆಷಿನ್ ಚೆಫ್’ ಎಂಬ ಶೀರ್ಷಿಕೆನ್ನು ನೀಡಿದ್ದಾರೆ. ಈ ವೀಡಿಯೋದಲ್ಲಿ ಯಂತ್ರಕ್ಕೆ ಬಾಣಲೆಯನ್ನು ಜೋಡಿಸಲಾಗಿದ್ದು, ಆ ಯಂತ್ರವು ವೃತ್ತಿಪರ ಬಾಣಸಿಗರಂತೆ ತರಕಾರಿಗಳನ್ನು ಹುರಿಯುತ್ತಿರುವುದನ್ನು, ಈ ಯಂತ್ರ ಗಾಳಿಯ ವೇಗದಲ್ಲಿ ತರಕಾರಿಗಳನ್ನು ಹುರಿಯುತ್ತಿರುವ ದೃಶ್ಯ ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದೆ.
ಟ್ವಿಟರ್ ನಲ್ಲಿ ಹರಿ ಬಿಡಲಾದ ಈ ವೀಡಿಯೋ 5.9 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 23 ಸಾವಿರ ಲೈಕ್ಸ್ ಗಳನ್ನು ಪಡೆದುಕೊಂಡಿದ್ದು, ಹಲವಾರು ಕಮೆಂಟ್ಸ್ ಬಂದಿವೆ. ಈ ತಂತ್ರಜ್ಞಾನದಿಂದ ಮಹಿಳೆಯರು, ಅರೆ ನನ್ನ ಕೆಲ್ಸ ಸುಲಭ ಆಯ್ತಲ್ಲ ಅಂದುಕೊಳ್ಳಬಹುದು; ಆದ್ರೆ ಅಡುಗೆ ಮನೆಯ ಹೆಣ್ಣಿನ ಕೆಲಸ ಕಳೆದು ಕೊಂಡೀರಾ ಹುಷಾರ್ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು ‘ಕ್ಷಮಿಸಿ ಬಾಣಸಿಗರೆ, ಇನ್ನು ಮುಂದೆ ನಿಮಗೆ ಕೆಲಸ ಇರೋದಿಲ್ಲ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ಇದೇನು ಭವಿಷ್ಯದ ಅಡುಗೆ ಉದ್ಯಮವೇ ? ಎಂದು ಪ್ರಶ್ನಿಸಿದ್ದಾರೆ. ಇನ್ನು ಹಲವರು ಭವಿಷ್ಯದಲ್ಲಿ ವೃತ್ತಿಪರ ಬಾಣಸಿಗರು ಕೆಲಸವನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು ಎಂದಿದ್ದಾರೆ.
ಇದನ್ನೂ ಓದಿ: UP bus conductor: ಬಸ್ಸಿನ ಹಿಂದಿನ ಸೀಟಿನಲ್ಲಿ ಕರಿಕಂಬಳಿ ಹೊದ್ದು ಹುಡುಗಿಯ ಜತೆ ಲೈಂಗಿಕ ಕ್ರಿಯೆ ನಡೆಸಿದ ಬಸ್ ಕಂಡಕ್ಟರ್