Praveen Nettaru Murder: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಆರೋಪಿಗಳ ಶರಣಾಗತಿಗೆ ಕೊಟ್ಟ ಗಡುವು ಅಂತ್ಯ, ತನಿಖಾ ಸಂಸ್ಥೆಯ ಮುಂದಿನ ನಡೆ ಏನು?
latest Dakshina Kannada news NIA court dead line for surrender of Praveen Nettaru murder accused is over
Praveen Nettaru Murder: ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಕಾರ್ಯಕರ್ತ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ(Praveen Nettaru Murder) ಪ್ರಕರಣ ದೇಶದಾದ್ಯಂತ ಬಹಳ ಸುದ್ದಿ ಮಾಡಿದ ಹತ್ಯಾ ಪ್ರಕರಣ. ಈ ಪ್ರಕರಣದ ಆರೋಪಿಗಳು ಇಂದಿಗೂ ತಲೆಮರೆಸಿಕೊಂಡಿದ್ದಾರೆ
ಈ ಪ್ರಕರಣದ ಕುರಿತು ಇತ್ತೀಚೆಗೆ ತನಿಖಾ ಸಂಸ್ಥೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳು ಜೂ.30ರೊಳಗೆ ಶರಣಾಗಬೇಕು, ಇಲ್ಲದಿದ್ದರೆ ಅವರ ಆಸ್ತಿ, ಮನೆ ಮುಟ್ಟುಗೋಲು ಹಾಕುವುದಾಗಿ ಸೂಚನೆ ನೀಡಿತ್ತು. ಭಿತ್ತಿಪತ್ರ ಹಚ್ಚಿ, ಧ್ವನಿವರ್ಧಕದ ಮೂಲಕ ಉದ್ಘೋಷಣೆ ಮಾಡಿದರೂ ಆರೋಪಿಗಳು ಶರಣಾಗಿಲ್ಲ.
ಈ ಶಂಕಿತ ಆರೋಪಿಗಳಲ್ಲಿ ಕೊಡಗಿನ ಅಬ್ದುಲ್ ನಾಸಿರ್, ಅಬ್ದುಲ್ ರೆಹಮಾನ್ ಮತ್ತು ಬೆಳ್ತಂಗಡಿಯ ನೌಷಾದ್ ಹಾಗೂ ಮತ್ತೆ ಐವರು ಸೇರಿ ಒಂಟ್ಟು ಎಂಟು ಮಂದಿ ಇದ್ದಾರೆ. ಇವರೆಲ್ಲ ತಲೆಮರೆಸಿಕೊಂಡಿರುವ ಆರೋಪಿಗಳು. ಹಾಗೂ 5 ಲಕ್ಷ ಹಣ ಘೋಷಣೆ ಮಾಡಿದವರಲ್ಲಿ ತುಫೈಲ್, ಮೊಹಮ್ಮದ್ ಮುಸ್ತಾಫ ಇದ್ದಾರೆ. ಉಮ್ಮರ್ ಫಾರೂಕ್, ಅಬೂಬಕ್ಕರ್ ಸಿದ್ದಿಕ್ ಸುಳಿವು ನೀಡಿದವರಿಗೆ ತಲಾ ಎರಡು ಲಕ್ಷ ಘೋಷಣೆಯನ್ನು ಈಗಾಗಲೆ ಎನ್‌ಐಎ ಮಾಡಿದೆ.
ಹಾಗಾದರೆ ಮುಂದೆ ತನಿಖಾ ಸಂಸ್ಥೆಯ ನಡೆ ಏನು?
ಈಗ ತಲೆಮರೆಸಿಕೊಂಡಿರುವ ಆರೋಪಿಗಳ ಹೆಸರಿನಲ್ಲಿರುವ ಆಸ್ತಿ, ಚರಾಸ್ತಿ, ಸ್ಥಿರಾಸ್ತಿಗಳ ಬಗ್ಗೆ ಎನ್‌ಐಎ ಮಾಹಿತಿ ಸಂಗ್ರಹಿಸಿ, ಇವುಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಅಲ್ಲಿ ಅದು ಆರೋಪಿಯದ್ದೇ ಆಸ್ತಿ ಎಂದು ದೃಢೀಕರಣಗೊಂಡರೆ ಮುಟ್ಟುಗೋಲು ಹಾಕಿ ಸರಕಾರ ವಶಕ್ಕೆ ಪಡೆಯಬಹುದು ಎಂಬ ಮಾಹಿತಿ ಇದೆ.
ಈಗಾಗಲೇ ಆರೋಪಿಗಳ ಆಸ್ತಿ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಆರೋಪಿಗಳಲ್ಲಿ ಹೆಚ್ಚಿನವರು ಯುವಕರಾಗಿದ್ದು, ಅವರ ಸ್ಥಿರಾಸ್ತಿಗಳು ಪಿತ್ರಾರ್ಜಿತವಾಗಿ ಬಂದಿರುವ ಆಸ್ತಿಗಳು ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗೆ ಕುಟುಂಬದ ಹೆಸರಿನಲ್ಲಿರುವ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಾನೂನು ಅಡೆತಡೆಗಳು ಕೂಡಾ ಉಂಟಾಗುವ ಸಂಭವವಿದೆ. ಆದುದರಿಂದ ಆಸ್ತಿ ಮುಟ್ಟುಗೋಲು ಬೆದರಿಕೆ ಕೇವಲ ತೋರಾಣಿಕೆಯದ್ದೇ ಎನ್ನುವ ಕೂಡ ಕೇಳಿ ಬರುತ್ತಿದೆ.
ದಕ್ಷಿಣ ಕನ್ನಡ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರ್ ಅವರನ್ನು 2022 ರ ಜುಲೈ 26 ರಂದು ಬಳ್ಳಾರಿ ಸಮೀಪ ಕೊಚ್ಚಿ ಕೊಲ್ಲಲಾಗಿತ್ತು. ವೈಯಕ್ತಿಕವಾಗಿ ಯಾರೊಂದಿಗೂ ವೈಮನಸ್ಯ ಕಟ್ಟಿಕೊಳ್ಳದ ಪ್ರವೀಣ್ ಕೊಲೆ ರಾಜ್ಯದೆಲ್ಲೆಡೆ ದೊಡ್ಡ ಸಂಚಲನಕ್ಕೆ ಭಾರಿ ಪ್ರತಿಭಟನೆಗೆ ಕಾರಣವಾಗಿತ್ತು. ಆನಂತರ ಘಟನೆಯ ಮಹತ್ವ ಅರಿತ ರಾಜ್ಯ ಸರ್ಕಾರವು ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ NIA ಗೆ ವಹಿಸಿತ್ತು. 2022 ರ ಆಗಸ್ಟ್ 4 ರಂದು NIA ಕೇಸನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ಮೊದಲ ಕೆಲವು ತಿಂಗಳುಗಳಲ್ಲಿ ರಾಜ್ಯ ದೇಶದೆಲ್ಲೆಡೆ ಹಲವು ಕಡೆ ದಾಳಿಗಳನ್ನು ನಡೆಸಿ ಕೆಲವು ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಇನ್ನೂ ಹಲವು ಆರೋಪಿಗಳು ಇನ್ನು ತಲೆಮರೆಸಿಕೊಂಡು ಇದ್ದು, ರಾಷ್ಟ್ರದ ಬಲಿಷ್ಠ ತನಿಖಾ ಸಂಸ್ಥೆಗೆ ತಲೆ ನೋವಾಗಿ ಪರಿಣಮಿಸಿದ್ದಾರೆ. ಸ್ಥಳೀಯ ಮಟ್ಟದ ಅಪರಾಧಿಗಳನ್ನು ಕೂಡ ಕಳೆದೊಂದು ವರ್ಷಗಳಿಂದ ಬಂಧಿಸಲು ಆಗದೆ ಪರದಾಡುತ್ತಿರುವ ಕಾರ್ಯವೈಖರಿಗೆ ಟೀಕೆಗಳ ಸುರಿಮಳೆ ಬರುತ್ತಿದೆ. ತಿರ ಇತ್ತೀಚಿನವರೆಗೆ ರಾಜ್ಯದಲ್ಲಿ ಮತ್ತು ದೇಶದಲ್ಲಿ ಬಿಜೆಪಿ ಸರಕಾರ ಇದ್ದರು ಬಲಿಷ್ಠ ಇಚ್ಛಾಸಕ್ತಿಯ ಕೊರತೆಯಿಂದ ಈ ಕೇಸಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ.
ಇದನ್ನೂ ಓದಿ: Free current Scheme: ಫ್ರೀ ಕರೆಂಟ್ ಜಾರಿ ಬೆನ್ನಲ್ಲೇ ರಾಜ್ಯದ ಜನರಿಗೆ ಮತ್ತೊಂದು ಗುಡ್ ನ್ಯೂಸ್ !! ಸಚಿವ ಜಾರ್ಜ್ ಘೋಷಣೆ !!