SSC Recruitment 2023: ಎಸ್​ಎಸ್​ಸಿಯಲ್ಲಿ ಭರ್ಜರಿ ಉದ್ಯೋಗವಕಾಶ! ಭರ್ತಿ 1558 ಹುದ್ದೆಗಳಿಗೆ ಅರ್ಜಿ ಆಹ್ವಾನ, ಈ ಕೂಡಲೇ ಅರ್ಜಿ ಸಲ್ಲಿಸಿ

Latest Central Government jobs recruitment staff selection commission recruitment SSC recruitment 2023 notification

SSC Recruitment 2023: ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌(SSC) ಭರ್ಜರಿ ಉದ್ಯೋಗದ ಆಫರ್‌ (SSC Recruitment 2023) ನೀಡಿದೆ. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಮಲ್ಟಿ ಟಾಸ್ಕಿಂಗ್‌ (ತಾಂತ್ರಿಕ) ಸಿಬ್ಬಂದಿ, ಮತ್ತು ಕಾನ್ಸ್‌ಟೇಬಲ್‌ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 1558 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 21/07/2023 (ರಾತ್ರಿ 11 ಗಂಟೆ). ವರೆಗೆ ಮಾತ್ರ ಎಂದು ನಿಗದಿಯಾಗಿದೆ. ಹಾಗಾಗಿ ತಡಮಾಡದೆ ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಿ.

 

ಹುದ್ದೆಯ ವಿವರಗಳು:
MTS- 1198 ಹುದ್ದೆಗಳು
ಹವಾಲ್ದಾರ್ (CBIC – CBN)- 360 ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ- 1558

ವಯೋಮಿತಿ: ಎಂಟಿಎಸ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 ರಿಂದ 25 ವರ್ಷಗಳ ಒಳಗಿರಬೇಕು.
ಹವಾಲ್ದಾರ್ (CBIC) ಹುದ್ದೆಗಳಿಗೆ 18 ರಿಂದ 27 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ: ಈ ಹುದ್ದೆಗಳಿಗೆ 100ರೂ. ಅರ್ಜಿ ಶುಲ್ಕವಾಗಿ ನಿಗದಿ ಮಾಡಲಾಗಿದೆ. ಉಳಿದಂತೆ ಮೀಸಲಾತಿ ವರ್ಗದವರಿಗೆ ಶುಲ್ಕ ಪಾವತಿಯಲ್ಲಿ ವಿನಾಯಿತಿ ನೀಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ https://ssc.nic.in/SSCFileServer/PortalManagement/UploadedFiles/Final_Notice_MTS2023_30062023.pdf

ಇದನ್ನೂ ಓದಿ: ಧರ್ಮಸ್ಥಳ ಸೌಜನ್ಯ ಕೊಲೆ ಕೇಸ್: ತನಿಖೆ ಸರಿಯಾಗಿಲ್ಲ, ಪೋಲೀಸ್, ವೈದ್ಯರಿಂದಲೇ ಮೋಸ- ಮಕ್ಕಳ ನ್ಯಾಯಾಲಯ ಅಭಿಪ್ರಾಯ – ಸೌಜನ್ಯಾ ಗೌಡ ಹೋರಾಟಕ್ಕೆ ಮತ್ತಷ್ಟು ಬಲ !

Leave A Reply

Your email address will not be published.