KRS Dam: ಕೆಆರ್ ಎಸ್’ನಲ್ಲಿಯೇ ಮೀಟಿಂಗ್ ಮಾಡಲು ಹೊರಟ್ರಾ ಡಿಸಿಎಂ ಡಿಕೆ ಶಿವಕುಮಾರ್ ?
latest news DCM DK Sivakumar has decided to hold a meeting at KRS
KRS Dam: ಡಿಸಿಎಂ ಡಿ.ಕೆ ಶಿವಕುಮಾರ್, (DK Shivakumar) ನೀರು ನಿರ್ವಹಣೆ ವಿಚಾರವಾಗಿ ಕೆಆರ್ ಎಸ್’ನಲ್ಲಿ ಮೀಟಿಂಗ್ ಮಾಡಲು ಹೊರಟಿದ್ದಾರೆ. ಹೌದು, ನೀರು ನಿರ್ವಹಣೆ ಬಗ್ಗೆ ಕೆಆರ್’ಎಸ್ ನಲ್ಲಿ (KRS Dam) ಮೀಟಿಂಗ್ ಮಾಡಿ ಕೇಂದ್ರ, ತಮಿಳುನಾಡು ತಂಡವನ್ನು ಕರೆದು ವಸ್ತುಸ್ಥಿತಿ ಮನವರಿಕೆ ಮಾಡ್ತೀವಿ ಎಂದು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, (DK Shivakumar) ಅವರು, ಮೇಕೆದಾಟು (Mekedatu) ಪ್ರಕರಣ ಕೋರ್ಟ್‌ನಲ್ಲಿದೆ. ಅಲ್ಲದೆ, ಕಳೆದ ವರ್ಷ ತಮಿಳುನಾಡಿಗೆ (Tami Nadu) 700 ಟಿಎಂಸಿ ನೀರು ಬಿಡಲಾಗಿತ್ತು. ಬೆಂಗಳೂರಿಗರಿಗೆ ಕುಡಿಯುವುದಕ್ಕೆ ನೀರಿಲ್ಲ, ನೀರು ನಿರ್ವಹಣೆ ಬಗ್ಗೆ ಕೆಆರ್’ಎಸ್ ನಲ್ಲೇ (KRS Dam) ಮೀಟಿಂಗ್ ಮಾಡಿ ಕೇಂದ್ರ, ತಮಿಳುನಾಡು ತಂಡವನ್ನು ಕರೆದು ವಸ್ತುಸ್ಥಿತಿ ಮನವರಿಕೆ ಮಾಡ್ತೀವಿ. ಬೆಂಗಳೂರು ಕುಡಿಯುವ ನೀರಿಗೆ (Cauvery Water) ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದರು.
ಪೆನ್ನಾರ್ ನದಿ ನ್ಯಾಯಾಧಿಕರಣ ಮಾಡುವುದಕ್ಕೆ ತಮಿಳುನಾಡು ತಕರಾರು ತೆಗೆದಿದೆ. 5ನೇ ತಾರೀಖು ಒಳಗಡೆ ಟ್ರಿಬ್ಯುನಲ್ ರಚನೆಗೆ ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಬೆಂಗಳೂರು ವೇಸ್ಟ್ ವಾಟರ್ ಟ್ರೀಟ್ ಮಾಡಿ ಕೋಲಾರಕ್ಕೆ ಕಳುಹಿಸುತ್ತಿದ್ದೇವೆ. ಕೇಂದ್ರ ಸರಕಾರವೇ ಪ್ರಶಂಸೆ ವ್ಯಕ್ತಪಡಿಸಿತ್ತು. ಆದರೆ ತಮಿಳುನಾಡು ತಕರಾರು ತೆಗೆದಿದೆ ಎಂದು ಹೇಳಿದರು.
ಕೃಷ್ಣ ಮೇಲ್ದಂಡೆ ಯೋಜನೆ ವಿಚಾರ ಮಾತನಾಡಿದ ಡಿಕೆಶಿ, ಕೇಂದ್ರದಿಂದ ಬಿಡುಗಡೆಯಾಗಿರುವ ಐದು ಸಾವಿರ ಕೋಟಿ ಅನುದಾನವನ್ನು ಎಐಬಿಪಿಯಿಂದ ಪಡೆಯಲು ಕೇಂದ್ರ ಸರ್ಕಾರ ಹೇಳಿದೆ. ಆದರೆ, ಇದು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಮನವಿ ಮಾಡಿದೆ. ಎಐಬಿಪಿಯಲ್ಲಿ 60:40 ಹಣ ನೀಡಲಾಗುವುದರಿಂದ ಹಣಕಾಸು ಇಲಾಖೆ ಜೊತೆಗೆ ಚರ್ಚಿಸಲು ನಿರ್ಧರಿಸಿದೆ. ಉಳಿದ ಕೆಲವು ಯೋಜನೆಗಳಿಗೆ ಹೆಚ್ಚಿನ ಹಣಕ್ಕೆ ಮನವಿ ಮಾಡಿದೆ ಎಂದು ತಿಳಿಸಿದರು
ಇದನ್ನು ಓದಿ: Congress: ತುರ್ತಾಗಿ ಬೇಕಾಗಿದ್ದಾರೆ: ವಿಪಕ್ಷ ನಾಯಕರೊಬ್ಬರು ಬೇಕಾಗಿದ್ದಾರೆ, ಆಸಕ್ತಿಮಯ ಜಾಹೀರಾತು ಕೊಟ್ಟ ಕಾಂಗ್ರೆಸ್ !