Home News Alcohol in Metro: ಮೆಟ್ರೋದಲ್ಲಿ ಆಲ್ಕೋಹಾಲ್ ಕೊಂಡೊಯ್ಯಲು ಅವಕಾಶ, ಕಂಡೀಷನ್ಸ್ ಅಪ್ಲೈ!

Alcohol in Metro: ಮೆಟ್ರೋದಲ್ಲಿ ಆಲ್ಕೋಹಾಲ್ ಕೊಂಡೊಯ್ಯಲು ಅವಕಾಶ, ಕಂಡೀಷನ್ಸ್ ಅಪ್ಲೈ!

Alcohol in Metro
image source: India today

Hindu neighbor gifts plot of land

Hindu neighbour gifts land to Muslim journalist

Delhi Metro: ಈ ಮೊದಲು ದೆಹಲಿ ಮೆಟ್ರೋದಲ್ಲಿ (Delhi Metro) ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಹೋಗಲು ಅನುಮತಿ ಇರಲಿಲ್ಲ. ಆದರೆ ಈಗ ದೆಹಲಿ ಮೆಟ್ರೋ ರೈಲು ನಿಗಮ ಪ್ರಕಾರ, ದೆಹಲಿ ಮೆಟ್ರೋದಲ್ಲಿ ಒಬ್ಬ ವ್ಯಕ್ತಿಗೆ ಎರಡು ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು ಸಾಗಿಸಲು ಈಗ ಅನುಮತಿಸಲಾಗಿದೆ ಎಂದು ದೆಹಲಿ ಮೆಟ್ರೋ ಹೇಳಿದೆ.

ಹೌದು, ದೆಹಲಿ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರು ಮದ್ಯವನ್ನು ಸಾಗಿಸುವುದನ್ನು ನಿಷೇಧಿಸಿರುವ ತನ್ನ ಹಿಂದಿನ ನಿಯಮವನ್ನು ದೆಹಲಿ ಮೆಟ್ರೋ ರೈಲು ನಿಗಮವು (ಡಿಎಂಆರ್‌ಸಿ) ಈಗ ಮರು ಪರಿಶೀಲಿಸಿದೆ.

ಡಿಎಂಆರ್‌ಸಿ ಅಧಿಕೃತ ಹೇಳಿಕೆಯ ಪ್ರಕಾರ, ಈಗ ಪ್ರಯಾಣಿಕರು ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಲೈನ್ ಗೆ ನಿಬಂಧನೆಗಳೊಂದಿಗೆ ಎರಡು ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು ಪ್ರಯಾಣಿಕರು ತಮ್ಮೊಡನೆ ಕೊಂಡೊಯ್ಯಬಹುದು ಎಂದು ತಿಳಿಸಿದೆ. ಆದರೆ ಮದ್ಯಪಾನ ಮಾಡಿ ಮೆಟ್ರೋದಲ್ಲಿ ಪ್ರಯಾಣಿಸುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.

ಇದೀಗ ಸಿಐಎಸ್ಎಫ್ ಮತ್ತು ಡಿಎಂಆರ್‌ಸಿಯ ಅಧಿಕಾರಿಗಳನ್ನು ಒಳಗೊಂಡ ಸಮಿತಿಯು ಮೆಟ್ರೋದಲ್ಲಿ ಕೊಂಡೊಯ್ಯುವಂತಹ ವಸ್ತುಗಳ ಪಟ್ಟಿಯನ್ನು ಮರು ಪರಿಶೀಲಿಸಿದ್ದು, ಮತ್ತು ಪರಿಷ್ಕೃತ ಪಟ್ಟಿಯ ಪ್ರಕಾರ, ವಿಮಾನ ನಿಲ್ದಾಣ ಎಕ್ಸ್‌ಪ್ರೆಸ್ ಲೈನ್ ನಲ್ಲಿನ ನಿಬಂಧನೆಗಳಿಗೆ ಸಮಾನವಾಗಿ ದೆಹಲಿ ಮೆಟ್ರೋದಲ್ಲಿ ಪ್ರತಿ ವ್ಯಕ್ತಿಗೆ ಎರಡು ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು ಕೊಂಡೊಯ್ಯುವಂತೆ ಅವಕಾಶವನ್ನು ನೀಡಿದೆ. ಮೆಟ್ರೋ ಪ್ರಯಾಣಿಕರು ಪ್ರಯಾಣಿಸುವಾಗ ಸರಿಯಾದ ನಿಯಮವನ್ನು ಕಾಪಾಡಿಕೊಳ್ಳಲು ಡಿಎಂಆರ್‌ಸಿ ಅಧಿಕಾರಿಗಳು ವಿನಂತಿಸಿಕೊಂಡಿದ್ದಾರೆ ಎಂದು ಡಿಎಂಆರ್‌ಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಅದಲ್ಲದೆ ಯಾವುದೇ ಪ್ರಯಾಣಿಕರು ಮದ್ಯದ ಅಮಲಿನಲ್ಲಿ ಅಸಭ್ಯವಾಗಿ ವರ್ತಿಸುವುದು ಕಂಡು ಬಂದರೆ, ಕಾನೂನಿನ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿ ಮೆಟ್ರೋ ರೈಲು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಅದರಂತೆ ನೀವು ದೇಶದ ರಾಜಧಾನಿ ನವದೆಹಲಿ (New Delhi) ನಿವಾಸಿಗಳಾಗಿದ್ದರೆ, ಮೆಟ್ರೋ ದಲ್ಲಿ (Metro) ಪ್ರಯಾಣಿಸುವಾಗ ಯಾವೆಲ್ಲಾ ವಸ್ತುಗಳನ್ನು ಜೊತೆಗೆ ತೆಗೆದುಕೊಂಡು ಹೋಗಬಹುದು ಮತ್ತು ಯಾವೆಲ್ಲಾ ವಸ್ತುಗಳನ್ನು ಜೊತೆಗೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂಬುದರ ಬಗ್ಗೆ ವಿವರವಾಗಿ ತಿಳಿದು ಕೊಂಡಿರಬೇಕಾಗುತ್ತದೆ.

ನಿಷೇಧಿತ ವರ್ಗಕ್ಕೆ ಸೇರದ ದೈನಂದಿನ ಬಳಕೆಯ ವಸ್ತುಗಳು:
ಕಂಪ್ಯೂಟರ್, ಲ್ಯಾಪ್‌ಟಾಪ್, ಟ್ಯಾಬ್, ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ಗ್ಯಾಜೆಟ್ ಗಳು
ಕ್ಯಾಮೆರಾ ಮತ್ತು ಟ್ರೈಪಾಡ್ ಗಳು
ಮಹಿಳೆಯರು ತಮ್ಮ ಸುರಕ್ಷತೆಗಾಗಿ 4 ಇಂಚು ಉದ್ದದ ಚಾಕುಗಳನ್ನು ಒಯ್ಯಬಹುದು
ಪ್ರತಿ ಪ್ರಯಾಣಿಕರಿಗೆ ಒಂದು ಪ್ಯಾಕೆಟ್ ಸಿಗರೇಟುಗಳು ಮತ್ತು ಒಂದು ಲೈಟರ್ ಅಥವಾ ಬೆಂಕಿಪೊಟ್ಟಣವನ್ನು ಒಯ್ಯಬಹುದು.

ನಿಷೇಧಿತ ವರ್ಗಕ್ಕೆ ಸೇರಿದ ವಸ್ತುಗಳು :
ನಿಷೇಧಿತ ಸ್ಪಿರಿಟ್ ಗಳು ಮತ್ತು ಎಲ್ಲಾ ರೂಪಗಳಲ್ಲಿ ಉರಿಯಬಲ್ಲ ದ್ರವಗಳು
ಅಪಾಯಕಾರಿ ಮತ್ತು ನಿಷೇಧಿತ ರಾಸಾಯನಿಕಗಳು, ಆಮ್ಲಗಳು, ನಾಶಕಾರಕಗಳು, ಪೆಟ್ರೋಲಿಯಂ ಉತ್ಪನ್ನಗಳು, ಆಕ್ಸಿಡೀಕರಣ ಮತ್ತು ವಿಕಿರಣಶೀಲ ವಸ್ತುಗಳು,
ಯಾವುದೇ ರೀತಿಯ ಆಯುಧ, ಬಂದೂಕುಗಳು ಮತ್ತು ಮದ್ದುಗುಂಡುಗಳು
ಯಾವುದೇ ರೀತಿಯ ಸ್ಫೋಟಕಗಳು
ಉರಿಯಬಲ್ಲ ಘನವಸ್ತುಗಳು ಮತ್ತು ಒದ್ದೆಯಾದ ಬ್ಯಾಟರಿಗಳು
ಚಾಕುಗಳು, ಕತ್ತಿಗಳು, ಖಡ್ಗಗಳು, ಕ್ಲೀವರ್ ಗಳು, ಕಟ್ಲರಿಗಳು ಮುಂತಾದ ಯಾವುದೇ ಚೂಪಾದ ವಸ್ತುಗಳು
ಸ್ಕ್ರೂಡ್ರೈವರ್, ವ್ರೆಂಚ್, ಪ್ಲೈಯರ್ ಗಳು ಮತ್ತು ಇತರ 7 ಇಂಚು ಅಥವಾ 5 ಸೆಂಟಿ ಮೀಟರ್ ಉದ್ದವನ್ನು ಹೊಂದಿರುವ ಉಪಕರಣಗಳನ್ನು ಒಯ್ಯುವಂತಿಲ್ಲ.

ಯಾವುದೇ ರೀತಿಯ ಸಾಕುಪ್ರಾಣಿಗಳು ಮತ್ತು ಪ್ರಾಣಿಗಳು, 15 ಕೆಜಿ ಗಿಂತ ಹೆಚ್ಚಿನ ತೂಕದ ದೊಡ್ಡ ಸಾಮಾನುಗಳು
ಆಕ್ರಮಣಕಾರಿ ವಸ್ತುಗಳು, ಸತ್ತ ಪ್ರಾಣಿಗಳ ಶವಗಳು, ರಕ್ತ ಮತ್ತು ಮೂಳೆಗಳಿಗೆ ಸಂಬಂಧಿಸಿದ ಯಾವುದೇ ವಸ್ತು, ಮಾನವ ದೇಹದ ಭಾಗಗಳು, ಅಸ್ಥಿಪಂಜರಗಳು ಮತ್ತು ಚಿತಾಭಸ್ಮವನ್ನು ತೆಗೆದುಕೊಂಡು ಹೋಗುವಂತಿಲ್ಲ.

 

ಇದನ್ನು ಓದಿ:  Gruha jyothi Scheme: ಕೇವಲ 4 ನಿಮಿಷಗಳಲ್ಲಿ ಗೃಹ ಜ್ಯೋತಿ ಯೋಜನೆಗೆ ಮನೆಯಲ್ಲೇ ಕೂತು ಅರ್ಜಿ ಸಲ್ಲಿಸಿ ! ಈಗ ಇನ್ನಷ್ಟು ಸಿಂಪಲ್ !