7th Pay Commission: ಸರ್ಕಾರಿ ನೌಕರರಿಗೆ ಮನೆ ಬಾಡಿಗೆ ಭತ್ಯೆಯಲ್ಲಿ ಭಾರೀ ಹೆಚ್ಚಳ ?
latest news central government news 7th Pay Commission hike in March this year
7th Pay Commission: ಬಹುಪಾಲು ಸರ್ಕಾರಿ ಉದ್ಯೋಗಿಗಳಿಗೆ, ಮನೆ ಬಾಡಿಗೆ ಭತ್ಯೆ (HRA) ಸಂಬಳ ಭಾಗವಾಗಿ ಬರುತ್ತದೆ. ಈ ಹಿನ್ನೆಲೆ ದೇಶದಾದ್ಯಂತ ಸರ್ಕಾರಿ ಹುದ್ದೆಗಳಲ್ಲಿ ಕೆಲಸ ಮಾಡುವ ನೌಕರರಿಗೆ ಸಿಹಿ ಸುದ್ದಿ ನೀಡಲಾಗಿದೆ. ಈಗಾಗಲೇ ಕೇಂದ್ರವು ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಡಿಎ (7th Pay Commission) ಹೆಚ್ಚಳ ಮಾಡಿದೆ. ಇದೀಗ ಶೀಘ್ರದಲ್ಲೇ ನೌಕರರ ಮನೆ ಬಾಡಿಗೆ ಭತ್ಯೆ (HRA) ಅನ್ನು ಹೆಚ್ಚಿಸಬಹುದು ಎಂದು ಮಾಹಿತಿ ಹೊರಬಿದ್ದಿದೆ.
ಈಗಾಗಲೇ ಕಳೆದ ಬಾರಿ 2021 ರ ಜುಲೈನಲ್ಲಿ ಮನೆ ಬಾಡಿಗೆ ಭತ್ಯೆಯನ್ನು ಪರಿಷ್ಕರಿಸಲಾಯಿತು. ಆಗ ಡಿಎ ಅಂದರೆ ಶೇ. 25ಗೆ ಹೆಚ್ಚಿಸಲಾಯಿತು. ಡಿಎಯನ್ನು ಹೊಸ ಮಟ್ಟಕ್ಕೆ ಹೆಚ್ಚಿಸಿರುವುದರಿಂದ ಈ ಬಾರಿ ಮನೆ ಬಾಡಿಗೆ ಭತ್ಯೆ ಪರಿಷ್ಕರಣೆಯಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆ ಸರ್ಕಾರಿ ನೌಕರರಿಗೆ ಮನೆ ಬಾಡಿಗೆ ಭತ್ಯೆ (HRA) ಹೆಚ್ಚಾಗಬಹುದು. ಮನೆ ಬಾಡಿಗೆ ಭತ್ಯೆಯನ್ನು ಹೆಚ್ಚಿಸಿದರೆ ನೌಕರರು ತಮ್ಮ ಸಂಬಳದಲ್ಲಿ ಗಣನೀಯ ಏರಿಕೆ ಕಾಣಬಹುದಾಗಿದೆ.
ಸಾಮಾನ್ಯವಾಗಿ, ಸರ್ಕಾರಿ ನೌಕರರು ಕೆಲಸ ಮಾಡುವ ನಗರದ ವರ್ಗಕ್ಕೆ ಮನೆ ಬಾಡಿಗೆ ಭತ್ಯೆ ಇರುತ್ತದೆ. ಅದು ಹೇಗೆ ಎಂದರೆ ನಗರಗಳ ಮೂರು ವಿಭಾಗಗಳು (ನಗರ, ಪಟ್ಟಣ ಹಾಗೂ ಗ್ರಾಮ) X, Y ಮತ್ತು Z ರೀತಿಯಲ್ಲಿ ವರ್ಗೀಕರಿಸಲಾಗುತ್ತದೆ.
ಕೇಂದ್ರವು x ವರ್ಗದ ನಗರ ಉದ್ಯೋಗಿಗಳಿಗೆ ಮೂಲ ಆದಾಯದ ಶೇಕಡಾ 27 ರ ದರದಲ್ಲಿ ಮತ್ತು z ವರ್ಗದ ನಗರಗಳಿಗೆ 18 ಶೇಕಡಾ ದರದಲ್ಲಿ ಮನೆ ಬಾಡಿಗೆ ಭತ್ಯೆಯನ್ನು ನೀಡಲಾಗುತ್ತದೆ. ಇದಲ್ಲದೆ, 7 ವರ್ಗದ ಉದ್ಯೋಗಿಗಳು ಪ್ರಸ್ತುತ ತಮ್ಮ ಮೂಲ ವೇತನದ ಮೇಲೆ ಶೇ. 9ರಷ್ಟು ಮನೆ ಬಾಡಿಗೆ ಭತ್ಯೆಯನ್ನು ಪಡೆಯುತ್ತಾರೆ. Y ಗುಂಪಿನ ಉದ್ಯೋಗಿಗಳಿಗೆ ಮನೆ ಬಾಡಿಗೆ ಭತ್ಯೆ ಶೇ.18 ರಿಂದ ಶೇ. 20ರಷ್ಟು ಇರುತ್ತದೆ. ಆದರೆ z ವರ್ಗದ ಉದ್ಯೋಗಿಗಳಿಗೆ ಮನೆ ಬಾಡಿಗೆ ಭತ್ಯೆ ಶೇ. 9 ರಿಂದ ಶೇ. 10 ಕ್ಕೆ ಏರುತ್ತದೆ.
ವರದಿ ಪ್ರಕಾರ, ಸರ್ಕಾರಿ ನೌಕರರಿಗೆ ಮನೆ ಬಾಡಿಗೆ ಭತ್ಯೆ ಶೀಘ್ರದಲ್ಲೇ ಶೇ. 3 ರವರೆಗೆ ಹೆಚ್ಚಾಗಬಹುದು. X ವರ್ಗದ ನಗರ ಕೇಂದ್ರ ಸರ್ಕಾರಿ ನೌಕರರು ತಮ್ಮ ಮನೆ ಬಾಡಿಗೆ ಭತ್ಯೆಯಲ್ಲಿ ಶೇ. 3ರಷ್ಟು ಹೆಚ್ಚಿನದನ್ನು ಪಡೆಯುವ ಸಾಧ್ಯತೆಯಿದೆ. ಆದರೆ y ವರ್ಗದ ನಗರಗಳಲ್ಲಿರುವವರು ತಮ್ಮ ಭತ್ಯೆಯಲ್ಲಿ ಶೇ. 2ರಷ್ಟು ಪ್ರಮಾಣವನ್ನು ಕಾಣಬಹುದಾಗಿದೆ. ಇನ್ನು 2 ವರ್ಗದ ಉದ್ಯೋಗಿಗಳು ತಮ್ಮ ಮನೆ ಬಾಡಿಗೆ ಭತ್ಯೆಯಲ್ಲಿ ಶೇ.1ರಷ್ಟು ಮೊತ್ತವನ್ನು ಪಡೆಯಬಹುದು ಎನ್ನಲಾಗುತ್ತಿದೆ. ಇನ್ನು ನಗರವಾರು ವರ್ಗದ ಪ್ರಕಾರ ಮನೆ ಬಾಡಿಗೆ ಭತ್ಯೆಯನ್ನು ಹೆಚ್ಚಿಸಿದರೆ, ಸರ್ಕಾರಿ ನೌಕರರಿಗೆ ಮನೆ ಬಾಡಿಗೆ ಭತ್ಯೆ ಅತ್ಯುತ್ತಮ ಸನ್ನಿವೇಶದಲ್ಲಿ ಶೇ.27 ರಿಂದ ಶೇ.30 ವರೆಗೆ ಹೆಚ್ಚಿಸಲಿದೆ.