IND vs WI: ಮೊದಲ ಟೆಸ್ಟ್’ಗೆ ಟೀಂ ಇಂಡಿಯಾದ ಈ ದೈತ್ಯ ಪ್ರತಿಭೆ ಕೂಡಾ ಔಟ್ ?

latest news Two Test match between India and West Indies will start

IND vs WI: ಕ್ರಿಕೆಟ್ (cricket) ಪ್ರಿಯರಿಗೆ ಇದೊಂದು ಮಹತ್ವ ಮಾಹಿತಿ ಆಗಿದೆ. ಜುಲೈ 12 ರಿಂದ ಭಾರತ ಮತ್ತು ವೆಸ್ಟ್ ಇಂಡೀಸ್ (IND vs WI) ನಡುವಿನ ಎರಡು ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಜುಲೈ 12 ರಂದು ವೆಸ್ಟ್ ಇಂಡೀಸ್‌ನ ಡೊಮಿನಿಕಾದಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ.
ಸದ್ಯ ಟೆಸ್ಟ್ ಪಂದ್ಯವು ಭಾರತದ ಸಮಯ ಸಂಜೆ 7.30ಕ್ಕೆ ಪ್ರಾರಂಭವಾಗಲಿದೆ.

ಈಗಾಗಲೇ ಎರಡು ಡಬ್ಲ್ಯುಟಿಸಿ ಫೈನಲ್ ಸೋತಿರುವ ಭಾರತಕ್ಕೆ ಮುಂದಿನ ಆವೃತ್ತಿಯ ಡಬ್ಲ್ಯುಟಿಸಿ ಫೈನಲ್ ಗೆಲ್ಲಬೇಕೆಂದರೆ ಈಗಿನಿಂದಲೇ ಬಲಿಷ್ಠ ತಂಡವನ್ನು ಕಟ್ಟುವ ಕೆಲಸವನ್ನು ರೋಹಿತ್ ಹಾಗೂ ದ್ರಾವಿಡ್ ಮಾಡಬೇಕಿದೆ. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ಗೆ ಆಡುವ ಟೀಮ್ ಆಯ್ಕೆ ಮಾಡುವುದು ನಾಯಕ ರೋಹಿತ್ ಶರ್ಮಾಗೆ ಒಂದು ಸವಾಲು ಆಗಿದೆ.

ತಂಡದ ಬ್ಯಾಟಿಂಗ್ ವಿಭಾಗವನ್ನು ನೋಡುವುದಾದರೆ ರೋಹಿತ್ ಶರ್ಮಾ, ಶುಭ್​ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಆಡುವುದು ಖಚಿತ ಎನ್ನಬಹುದಾಗಿದೆ.

ಹಾಗೆಯೇ ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್, ನವದೀಪ್ ಸೈನಿ ಮತ್ತು ಜಯದೇವ್ ಉನದ್ಕಟ್​ಗೆ ನಾಯಕ ರೋಹಿತ್ ಅವಕಾಶ ನೀಡಿದರೆ, ಶಾರ್ದೂಲ್ ಠಾಕೂರ್ ಆಡುವ ಹನ್ನೊಂದರಿಂದ ಹೊರಗುಳಿಯಲಿದ್ದಾರೆ.

ಇನ್ನು ವಿಕೆಟ್ ಕೀಪಿಂಗ್ ವಿಭಾಗದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕೆಎಸ್ ಭರತ್ ತಂಡದಿಂದ ಹೊರಗುಳಿಯುವ ಸಾಧ್ಯತೆಗಳಿವೆ. ಇಶಾನ್ ಕಿಶನ್ ಈ ಟೆಸ್ಟ್​ನಲ್ಲಿ ಪದಾರ್ಪಣೆ ಮಾಡುವ ಅವಕಾಶ ಪಡೆಯಲಿದ್ದು, ಕೀಪಿಂಗ್ ಜೊತೆಗೆ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ.

ಮೊದಲ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ (ಉಪನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್,ನವದೀಪ್ ಸೈನಿ, ಜಯದೇವ್ ಉನದ್ಕಟ್, ಮೊಹಮ್ಮದ್ ಸಿರಾಜ್.

ಟೆಸ್ಟ್ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಠಾಕೂರ್, ಮುಖೇಶ್ ಕುಮಾರ್, ಜಯದೇವ್ ಉನದ್ಕಟ್, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್.

ಒಟ್ಟಿನಲ್ಲಿ ನಾಯಕ ರೋಹಿತ್ ಶರ್ಮಾಗೆ ಇದೊಂದು ಸವಾಲುಗಳ ಮೆಟ್ಟಿಲಾಗಿದ್ದು, ತಂಡವನ್ನು ಹೇಗೆ ನಿಭಾಯಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ.

 

ಇದನ್ನು ಓದಿ: High Court: ಖಾತೆ ನಿರ್ಬಂಧ ಪ್ರಕರಣ: ಟ್ವಿಟರ್ ಸಂಸ್ಥೆ ಅರ್ಜಿ ವಜಾಗೊಳಿಸಿ 50 ಲಕ್ಷ ದಂಡ ವಿಧಿಸಿದ ಹೈಕೋರ್ಟ್ ! 

Leave A Reply

Your email address will not be published.