Upasana-Ram charan: ಉಪಾಸನಾ ರಾಮ್ ಚರಣ್ ಹೆರಿಗೆಯ ಬಿಲ್ ಕೇಳಿದ್ರೆ ತಲೆ ಗಿರ್ರ್ ಅನ್ನೋದು ಗ್ಯಾರಂಟಿ !! ಆ ದುಡ್ಡಲ್ಲಿ ಒಂದು ಸಂಸಾರ ಜೀವನ ಪೂರ್ತಿ ಬದುಕಬೋದು… !
latest news How much did Ram Charan paid the bill for upasana delivery
Upasana-Ram charan: ಮದುವೆಯಾಗಿ ಸುಮಾರು 11 ವರ್ಷಗಳ ಬಳಿಕ ರಾಮ್ ಚರಣ್(Ram charan) ಮತ್ತು ಉಪಾಸನಾ (Upasana-Ram Charan) ದಂಪತಿ ಹೆಣ್ಣು ಮಗುವಿಗೆ ತಂದೆ ತಾಯಿಯಾಗಿದ್ದಾರೆ. ಇದೀಗ ತಾಯಿ ಮಗು ಆರೋಗ್ಯವಾಗಿದ್ದು, ಮೆಗಾ ಸ್ಟಾರ್(Mega star) ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ನಾಮಕರಣಕ್ಕೂ ಏರ್ಪಾಡು ನಡೆಯುತ್ತಿದೆ. ಆದರೆ ಈ ನಡುವೆ ಉಪಾಸನಾ ಹೆರಿಗೆ ಸಮಯದ ಆಸ್ಪತ್ರೆ ಬಿಲ್(Hospital bill)ಬಗ್ಗೆ ಭಾರೀ ಸುದ್ಧಿಯಾಗುತ್ತಿದೆ.
ಹೌದು, ಹೆರಿಗೆಗೆ ಒಂದು ದಿನ ಮುಂಚಿತವಾಗಿ ಉಪಾಸನಾ ಅವರು ಹೈದರಾಬಾದ್(Hyderabad) ನಲ್ಲಿರೋ ತಮ್ಮ ಕುಟುಂಬದ ಒಡೆತನದ್ದೇ ಆದ ಅಪೋಲೊ(Apollo) ಆಸ್ಪತ್ರೆಗೆ ದಾಖಲಾಗಿದ್ದರು. ಮರುದಿನ ನುರಿತ ವೈದ್ಯರು ಹೆರಿಗೆ ಮಾಡಿಸಿದ್ದರು. ಉಪಾಸನಾ ಹೆರಿಗೆ ದಿನ ದೊಡ್ಡಮಟ್ಟದಲ್ಲಿ ಅಭಿಮಾನಿಗಳು ಆಸ್ಪತ್ರೆ ಆವರಣದಲ್ಲಿ ಜಮಾಯಿಸಿದ್ದರು. ಎಲ್ಲರಿಗೂ ಮೆಗಾ ಫ್ಯಾಮಿಲಿ ಧನ್ಯವಾದ ತಿಳಿಸಿತ್ತು. ಅನೇಕ ವರ್ಷಗಳ ನಂತರ ಮನೆಗೆ ಹೊಸ ಅತಿಥಿ ಆಗಮನದ ಹಿನ್ನೆಲೆಯಲ್ಲಿ ಉಪಾಸನಾಳನ್ನು ಭಾರೀ ಕೇರ್(Care) ಮಾಡಲಾಗಿತ್ತು. ಆಸ್ಪತ್ರೆಯಲ್ಲೂ ಕೂಡ. ಹಾಗಿದ್ರೆ ಹೆರಿಗೆಯ ಆಸ್ಪತ್ರೆಯ ಬಿಲ್ ಎಷ್ಟಾಯ್ತು ಗೊತ್ತಾ? ಇದನ್ನು ಕೇಳಿದ್ರೆ ನೀವೇ ಶಾಕ್ ಆಗ್ತೀರಾ!!
ಗರ್ಭಿಣಿ(Pregnancy) ಎಂದು ಗೊತ್ತಾಗುತ್ತಿದ್ದಂತೆ ಉಪಾಸನಾ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದರು. ನುರಿತ ವೈದ್ಯರಿಂದ ಚೆಕಪ್ ಮಾಡಿಸಿಕೊಳ್ಳುತ್ತಿದ್ದರು. ಉಪಾಸನಾ ಹೆರಿಗೆಗೆ ಬೇಕಾದ ಪರಿಕರಗಳನ್ನು ಕೂಡ ವಿದೇಶದಿಂದ ತರಿಸಲಾಗಿತ್ತು ಎನ್ನಲಾಗ್ತಿದೆ. ಇನ್ನು ಉಪಾಸನಾ ತಮ್ಮ ಹೊಕ್ಕುಳ ಬಳ್ಳಿಯ ರಕ್ತ ಶೇಖರಿಸಿಡಲು ನಿರ್ಧರಿಸಿದ್ದರಂತೆ. ಅದಕ್ಕಾಗಿಯೂ ವಿಶೇಷ ಕಾಳಜಿ ವಹಿಸಲಾಗಿತ್ತು ಎನ್ನಲಾಗ್ತಿದೆ. ಹಾಗಾಗಿ ಹೆರಿಗೆ ಹಾಗೂ 5 ದಿನ ಆಸ್ಪತ್ರೆಯಲ್ಲಿ ಇದ್ದಿದ್ದಕ್ಕೆ ಅಂದಾಜು 1.50 ಕೋಟಿ ರೂ. ವೆಚ್ಚವಾಗಿದೆ ಎನ್ನುವ ಗುಸುಗುಸು ಕೇಳಿಬರ್ತಿದೆ.
ಅಂದಹಾಗೆ ಉಪಾಸನಾ ಅಪೊಲೋ ಆಸ್ಪತ್ರೆ ಸಮೂಹದ ಸ್ಥಾಪಕ ಪ್ರತಾಪ್ ಸಿ. ರೆಡ್ಡಿ(Prathap reddy) ಮೊಮ್ಮಗಳು. ಉಪಾಸನಾ ಅಫೋಲೊ ಚಾರಿಟಿಯ ವೈಸ್ ಪ್ರೆಸಿಡೆಂಟ್(Charity Vice president) ಕೂಡ ಆಗಿದ್ದಾರೆ. ತಮ್ಮದೇ ಆಸ್ಪತ್ರೆಯಲ್ಲಿ ಉಪಾಸನಾ ಹೆರಿಗೆ ನಡೆದಿದೆ. ಹಾಗಾಗಿ ಯಾವುದೇ ಬಿಲ್ ಕಟ್ಟುವ ಪ್ರಮೇಯ ಬರುವುದಿಲ್ಲ ಎನ್ನುವುದು ಕೆಲವರ ವಾದ. ಆಸ್ಪತ್ರೆ ಅವರದ್ದೇ ಆದರೂ ಕೂಡ ಹೆರಿಗೆಗೆ 1.50 ಕೋಟಿ ರೂ. ವೆಚ್ಚ ತಗುಲಿದೆ. ಅದನ್ನು ಅತ್ತೆ ಮಾವ ಪಾವತಿಸಲು ಮುಂದಾದಾಗ ರಾಮ್ ಚರಣ್ ಒಪ್ಪಲಿಲ್ಲವಂತೆ. ಅಷ್ಟು ಪೂರ್ತಿ ಹಣವನ್ನು ರಾಮ್‌ಚರಣ್(Ramcharan) ಪಾವತಿಸಿದರು ಎಂದು ಕೆಲವರು ಹೇಳುತ್ತಿದ್ದಾರೆ. ಸದ್ಯ ಇದೀಗ ಉಪಾಸನಾ ತಮ್ಮ ಮಗಳ ಜೊತೆಗೆ ತಾಯಿಯ ಮನೆಗೆ ಹೊರಟಿದ್ದಾರೆ ಎನ್ನಲಾಗ್ತಿದೆ. ಇನ್ನು ಕೆಲವೇ ಸಮಯದಲ್ಲಿ ಮಗುವಿನ ನಾಮಕರಣ ಕೂಡ ಅದ್ಧೂರಿಯಾಗಿ ನಡೆಯಲಿದೆ.