Gruha Lakshmi Scheme: ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವ ಮುನ್ನ ಎಚ್ಚರ..!! ಫೇಕ್ ಆಪ್’ಗಳಿಂದ ನಿಮ್ಮ ಅಕೌಂಟ್ ಹ್ಯಾಕ್ ಆಗ್ಬೋದು!!

latest news Beware of fake applications before applying for Grilahaxmi Yojana

Gruha Lakshmi Scheme: ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಲ್ಲಿ ಮನೆಯ ಯಜಮಾನಿಗೆ ಎರಡು ಸಾವಿರ ರೂಪಾಯಿ ದೊರೆಯುತ್ತದೆ. ಈ ಎಲ್ಲಾ ಸೌಲಭ್ಯ BPL ಮತ್ತು APL ಕಾರ್ಡುದಾರರಿಗೂ ಲಭ್ಯವಾಗಲಿದೆ‌. ಸದ್ಯ ಜನತೆ ಯೋಜನೆಯ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಕೆಗೆ ಮುಂದಾಗಿದ್ದಾರೆ. ಆದರೆ ಜನರೇ, ಗೃಹಲಕ್ಷ್ಮೀ (Gruha Lakshmi Scheme) ಯೋಜನೆಗೆ ಅರ್ಜಿ ಸಲ್ಲಿಸುವ ಮುನ್ನ ಎಚ್ಚರ!!

ಯೋಜನೆಯ ಹೆಸರಿನಲ್ಲಿ ಹಲವಾರು ಫೇಕ್ ಆಯಪ್‌ಗಳು ತಲೆ ಎತ್ತುತ್ತಿವೆ. ಈಗಾಗಲೇ ಪ್ಲೇ ಸ್ಟೋರ್‌ನಲ್ಲಿ ಐದಾರು ಫೇಕ್ ಆಯಪ್‌ಗಳು ಇವೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ತರಾತುರಿಯಲ್ಲಿ ನೀವೇನಾದರೂ ಫೇಕ್ ಆಯಪ್‌ಗಳಲ್ಲಿ
ನಿಮ್ಮ ಮಾಹಿತಿಯನ್ನು ಹಂಚಿದರೆ ನಿಮ್ಮ ಅಕೌಂಟ್ ಹ್ಯಾಕ್ ಆಗಲಿದೆ.

ಗೃಹ ಲಕ್ಷ್ಮೀ ಯೋಜನೆಗೆ ಸರ್ಕಾರದಿಂದ ಪ್ರತ್ಯೇಕ ಆಯಪ್ ಬಿಡುಗಡೆ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮೀ ಹೆಬ್ಬಾಳ‌ ಹೇಳಿದ್ದಾರೆ. ಆದರೆ, ಸರ್ಕಾರದಿಂದ ಗೃಹಲಕ್ಷ್ಮೀ ಆಯಪ್‌ನನ್ನು ಬಿಡುಗಡೆಯಾಗಿಲ್ಲ ಎನ್ನಲಾಗಿದೆ.

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಸಮೀಪದ ನಾಡಕಚೇರಿ, ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್​ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲುಬಹುದು. ಅಲ್ಲದೇ ಸ್ವಯಂಸೇವಾ ಸಂಸ್ಥೆಗಳಿಗೂ ಆಹ್ವಾನ ನೀಡಲಾಗಿದೆ. ಗೃಹಲಕ್ಷ್ಮೀ ಯೋಜನೆಯ ಪ್ರಯೋಜನ ಪಡೆಯಲು ಅಕೌಂಟ್ ನಂಬರ್, ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಸೇರಿದಂತೆ ಹಲವು ದಾಖಲೆಗಳನ್ನು ನೀಡಬೇಕು. ಈ ಅರ್ಜಿ ನಮೂನೆಯನ್ನು ಸಲ್ಲಿಸಿದ್ರೆ ಮಾತ್ರ ಪ್ರತಿ ಕುಟುಂಬ ಮನೆಯೊಡತಿಗೆ 2000 ರೂಪಾಯಿ ಬ್ಯಾಂಕ್‌ ಖಾತೆಗೆ ಜಮೆಯಾಗಲಿದೆ.

 

ಇದನ್ನು ಓದಿ: Upasana-Ram charan: ಉಪಾಸನಾ ರಾಮ್ ಚರಣ್ ಹೆರಿಗೆಯ ಬಿಲ್ ಕೇಳಿದ್ರೆ ತಲೆ ಗಿರ್ರ್ ಅನ್ನೋದು ಗ್ಯಾರಂಟಿ !! ಆ ದುಡ್ಡಲ್ಲಿ ಒಂದು ಸಂಸಾರ ಜೀವನ ಪೂರ್ತಿ ಬದುಕಬೋದು… ! 

Leave A Reply

Your email address will not be published.