LPG Cylinder Price: ಜುಲೈ ದುಬಾರಿ ದುನಿಯಾ: LPG ಸಹಿತ ಬದಲಾಗಲಿವೆ ಈ ಎಲ್ಲ ದರಗಳು !
latest news what prices including LPG will change in the month of July
LPG Cylinder Price: ದಿನಂಪ್ರತಿ ಪ್ರತಿ ವಸ್ತುಗಳ ಬೆಲೆ ಏರಿಕೆ ಬಿಸಿ ಜನರನ್ನು ಹೈರಾಣಾಗಿಸಿದೆ. ಇನ್ನೇನು ಎರಡೇ ದಿನದಲ್ಲಿ ಜೂನ್ ತಿಂಗಳಿಗೆ ವಿದಾಯ ಹೇಳಿ ಜುಲೈ ತಿಂಗಳು ಆರಂಭವಾಗಲಿದೆ. ಈಗಾಗಲೇ ತರಕಾರಿ, ವಿದ್ಯುತ್, ದೈನಂದಿನ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನತೆಗೆ ಜುಲೈ ತಿಂಗಳ ಅವಧಿಯಲ್ಲಿ ಏನೆಲ್ಲ ಬದಲಾವಣೆಗಳು ಆಗಲಿವೆಯೋ ಎಂಬ ಚಿಂತೆ ಕಾಡುತ್ತಿದೆ. ಈ ಸಮಯದಲ್ಲಿ ಅಡುಗೆ ಅನಿಲ, ವಾಣಿಜ್ಯ ಅನಿಲ, ಸಿಎನ್ಜಿ-ಪಿಎನ್ಜಿ ಸೇರಿದಂತೆ ದೈನಂದಿನ ವಸ್ತುಗಳ ಬೆಲೆಯಲ್ಲಿ ವ್ಯತ್ಯಾಸ ಕಂಡುಬರುವುದು ಸಹಜ.
ಜುಲೈ ತಿಂಗಳು ಶುರುವಾದಂತೆ ಆಗಬಹುದಾದ ಬದಲಾವಣೆಗಳು :
# CNG ಮತ್ತು PNG ಬೆಲೆಗಳಲ್ಲಿ ಏರಿಳಿತ:
ಜುಲೈ ತಿಂಗಳಲ್ಲಿ ಸಿ ಎನ್ ಜಿ ಮತ್ತು PNG (ಪೈಪ್ಡ್ ನ್ಯಾಚುರಲ್ ಗ್ಯಾಸ್) ಬೆಲೆಯಲ್ಲಿ ಬದಲಾವಣೆಯಾಗುವ ಸಾಧ್ಯತೆ ದಟ್ಟವಾಗಿದೆ. ಪ್ರತಿ ತಿಂಗಳ ಮೊದಲ ದಿನ ದೆಹಲಿ ಮತ್ತು ಮುಂಬೈನಲ್ಲಿನ ಪೆಟ್ರೋಲಿಯಂ ಕಂಪನಿಗಳು ಗ್ಯಾಸ್ ಬೆಲೆಗಳನ್ನು ಪರಿಶೀಲಿಸಿ ಬದಲಾವಣೆ ಮಾಡುತ್ತವೆ. ಹೀಗಾಗಿ, ದರ ಬದಲಾವಣೆ ಆಗುವ ಸಂಭವವಿದೆ.
# ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವ ಗಡುವು
ಪ್ರತಿಯೊಬ್ಬ ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ (ITR) ಅನ್ನು ಸಕ್ಕಿಸಬೇಕಾಗುತ್ತದೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಜುಲೈ 31 ರ ಒಳಗೆ ಮಾಡಲು ಅವಕಾಶವಿದ್ದು, ನೀವೇನಾದರೂ ಇನ್ನೂ ITR ತೆರಿಗೆ ರಿಟರ್ನ್ ಪ್ರಕ್ರಿಯೆ ಮಾಡಿಲ್ಲದಿದ್ದರೆ ಬೇಗ ಮಾಡಿಕೊಳ್ಳುವುದು ಉತ್ತಮ. ಇಂದು ಭಾರತದಲ್ಲಿ ಬಹುತೇಕ ಎಲ್ಲ ಹಣಕಾಸು ಮೊದಲಾದ ವಹಿವಾಟುಗಳನ್ನು ಡಿಜಿಟಲ್ ರೂಪದಲ್ಲಿ ಮಾಡಲಾಗುತ್ತಿರುವ ಹಿನ್ನೆಲೆ ದೇಶದಲ್ಲಿ ಪ್ರಸ್ತುತ ಆದಾಯ ತೆರಿಗೆ ಪಾವತಿಯು ಸರಳ ಹಾಗೂ ಸುಲಭವಾಗಿದೆ.
# ಕ್ರೆಡಿಟ್ ಕಾರ್ಡ್ ವೆಚ್ಚಗಳ ಮೇಲೆ 20% TCS
ಜುಲೈ 1, 2023 ರಿಂದ ಕ್ರೆಡಿಟ್ ಕಾರ್ಡ್ ಖರ್ಚು ವೆಚ್ಚಗಳ ಮೇಲೆ ಹೊಸ ನಿಬಂಧನೆಯನ್ನು ಜಾರಿಗೆ ತರುವ ಸಂಭವವಿದೆ. ವಿದೇಶದಲ್ಲಿ ಕ್ರೆಡಿಟ್ ಕಾರ್ಡ್ ವೆಚ್ಚಗಳನ್ನು TCS ಗೆ ಒಳಪಡಿಸಲಾಗುತ್ತದೆ. ಅಂದರೆ, 7 ಲಕ್ಷಕ್ಕಿಂತ ಹೆಚ್ಚಿನ ವೆಚ್ಚಗಳಿಗೆ, 20 ಪ್ರತಿಶತದವರೆಗೆ TCS ಶುಲ್ಕವನ್ನು ಹಾಕಲಾಗುತ್ತದೆ. ಇಲ್ಲಿ ಶಿಕ್ಷಣ ಮತ್ತು ವೈದ್ಯಕೀಯ ವೆಚ್ಚಗಳಿಗೆ ಈ ಶುಲ್ಕವನ್ನು ಶೇಕಡಾ 5 ಕ್ಕೆ ಇಳಿಕೆ ಮಾಡಲಾಗಿದೆ. ಇದರ ಜೊತೆಗೆ ನೀವು ವಿದೇಶದಲ್ಲಿ ಶಿಕ್ಷಣ ಸಾಲವನ್ನು ಪಡೆಯುತ್ತಿದ್ದರೆ TCS ಶುಲ್ಕವನ್ನು 0.5 ಪ್ರತಿಶತಕ್ಕೆ ಕಡಿಮೆ ಮಾಡಲಾಗುತ್ತದೆ.
# ಎಲ್ಪಿಜಿ ಗ್ಯಾಸ್ನಲ್ಲಿ ಸಂಭವನೀಯ ಬೆಲೆ ಬದಲಾವಣೆ
ಸರ್ಕಾರಿ ತೈಲ ಕಂಪನಿಗಳು ಎಲ್ಪಿಜಿ ಗ್ಯಾಸಿನ ಬೆಲೆಯನ್ನು ಪ್ರತಿ ತಿಂಗಳು ನಿಯಮಿತವಾಗಿ ಪರಿಶೀಲಿಸುವ ಜೊತೆಗೆ ದರ ಪರಿಷ್ಕರಣೆ ಪ್ರಕ್ರಿಯೆ ನಡೆಸುತ್ತವೆ. ಹೀಗಾಗಿ, ಜುಲೈ 1 ರಂದು ಎಲ್ಪಿಜಿ ಗ್ಯಾಸ್ ಬೆಲೆಯಲ್ಲಿ ಬದಲಾವಣೆಯಾಗುವ ಸಾಧ್ಯತೆ ದಟ್ಟವಾಗಿದೆ. ಕಳೆದ ಏಪ್ರಿಲ್ ನಲ್ಲಿ ಏರಿಕೆಯಾಗಿದ್ದ19 ಕೆಜಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯು ಮೇಯಲ್ಲಿ ಕೊಂಚ ಮಟ್ಟಿಗೆ ಇಳಿಕೆ ಕಂಡಿತ್ತು. ಈ ನಡುವೆ 14 ಕೆಜಿ ಗ್ಯಾಸ್ ಸಿಲಿಂಡರ್ನ ಬೆಲೆ ತಟಸ್ಥವಾಗಿತ್ತು. ಇದರಿಂದಾಗಿ ಎಲ್ ಪಿ ಜಿ ದರದಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ.