CM Siddaramaiah: ಧರ್ಮಸ್ಥಳದ ಸಂಘ ಸೇರಿ ಸ್ತ್ರೀ ಶಕ್ತಿ ಸಂಘದಲ್ಲಿ ಸಾಲ ಮಾಡಿದವರ ಸಾಲ ಮನ್ನಾ – ಸಿದ್ದರಾಮಯ್ಯ ಕೊಟ್ರು ಬಿಗ್ ನಿರೀಕ್ಷೆ !

latest news CM Siddaramaiah Loan waiver in Dharamsthala Sangh and Stri Shakti Sangh

CM Siddaramaiah: ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಐದು ಗ್ಯಾರಂಟಿ ಘೋಷಿಸಿದೆ. ಅವುಗಳಲ್ಲಿ ಒಂದು ಈಗಾಗಲೇ ಜಾರಿಗೆ ಬಂದಿದೆ. ಇನ್ನೊಂದು, ಗೃಹಲಕ್ಷ್ಮೀ ಯೋಜನೆಗಳ ಜೊತೆಗೆ ಇನ್ನೊಂದು ಗ್ಯಾರಂಟಿ ನೀಡಿದ್ದಾರೆ. ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿ ಸಿದ್ದರಾಮಯ್ಯನವರು ಮಹಿಳೆಯರ ಶ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಈಗ ಮಹಿಳಾ ಸಂಘಟನೆಗಳು ಈ ವಿಷಯವನ್ನು ಗಟ್ಟಿಯಾಗಿ ಹಿಡಿದುಕೊಂಡಿವೆ. ನಿನ್ನೆ ಕೂಡ ಸಿದ್ದರಾಮಯ್ಯನವರ ನಿವಾಸ ಎದುರು ಕೋಲಾರ ಮತ್ತು ಚಿಕ್ಕಬಳ್ಳಾಪುರದ ಮಹಿಳಾ ಸಂಘ ಸಂಸ್ಥೆಗಳು ಸಾಲ ಮನ್ನಾ ಮಾಡುವಂತೆ ಪ್ರತಿಭಟನೆ ನಡೆಸಿದ್ದವು.

ನಿನ್ನೆ ಬುಧವಾರ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು ಸ್ತ್ರೀಶಕ್ತಿ ಸಂಘದ ಸಾಲ ಮನ್ನಾ ಮಾಡುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಬುಧವಾರ ಬೆಳಗ್ಗೆಯಿಂದಲೇ ಸಿಎಂ ಸಿದ್ದರಾಮಯ್ಯ ಅವರ ಮನೆಯ ಎದುರು ಮಹಿಳೆಯರ ದೊಡ್ಡ ದಂಡೇ ಜಮಾಯಿಸಿತ್ತು. ಚುನಾವಣಾ ಸಂದರ್ಭ ಕೊಟ್ಟ ಮಾತಿನಂತೆ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡಬೇಕು ಎಂದು ಮಹಿಳೆಯರು ಆಗ್ರಹಿಸಿ ಪ್ರತಿಭಟನೆ ಮಾಡಿದ್ದಾರೆ. ತಮ್ಮ ಸಂಪುಟ ಸಭೆಯ ಮುಗಿಸಿದ ನಂತರ ಸಿದ್ದರಾಮಯ್ಯನವರು ಪ್ರತಿಭಟನೆ ಮಾಡುತ್ತಿದ್ದ ಮಹಿಳೆಯರ ಬಳಿ ಮಾತನಾಡಿದ್ದಾರೆ.

ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಮಹಿಳೆಯರ ಸ್ತ್ರೀ ಶಕ್ತಿ ಸಂಘದ ಸಾಲ ಮನ್ನಾಕ್ಕೆ ವಿಚಾರ ಮಾಡಲಾಗಿದೆ ಆದರೆ ಈ ಸಾಲ ಮನ್ನಾ ಮಾಡಲು ರಾಜ್ಯ ಸರ್ಕಾರಕ್ಕೆ 24,000 ಕೋಟಿ ರೂಪಾಯಿಗಳು ಬೇಕಾಗುತ್ತದೆ. ಈ ವರ್ಷ ಇತರ ಉಚಿತ ಯೋಜನೆಗಳನ್ನು ನೀಡಬೇಕಾದ ಒತ್ತಡ ಮತ್ತು ಅನಿವಾರ್ಯತೆಯ ಸರಕಾರಕ್ಕೆ ಇದೆ. ಹಾಗೆ ಇರುವುದರಿಂದ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ. ಆದರೆ ಮುಂದಿನ ವರ್ಷ ಸಾಲ ಮನ್ನಾ ಮಾಡುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಈ ಬಗ್ಗೆ ಮಹಿಳೆಯರ ಜೊತೆಗೆ ಚರ್ಚಿಸುವುದಾಗಿಯೂ ಕೂಡ ಸಿದ್ದರಾಮಯ್ಯ ಅವರು ಹೇಳಿದರು. ಈ ಮೂಲಕ ಬರುವ ವರ್ಷದಿಂದ ಸ್ತ್ರೀಶಕ್ತಿ ಗುಂಪುಗಳ ಸಾಲ ಮನ್ನಾ ಆಗುವ ಎಲ್ಲಾ ಸಾಧ್ಯತೆಗಳು ಇವೆ. ಇದೇ ರೀತಿಯಲ್ಲಿ ಧರ್ಮಸ್ಥಳ ಶ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಆಗುತ್ತಾ ಆಗಬೇಕು ಎನ್ನುವ ಭರವಸೆಯಲ್ಲಿ ಬಡ ಮಹಿಳೆಯರಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ಸು ಗೃಹಜೋತಿ ಉಚಿತ ವಿದ್ಯುತ್ತು ಮತ್ತು ಗೃಹಲಕ್ಷ್ಮಿ ಯೋಜನೆಯ ಅಡಿ 2000 ಕೊಡುವ ಬೃಹತ್ ಓಲೈಕೆಯ ಪರಿಣಾಮವಾಗಿ ರಾಜ್ಯದಾದ್ಯಂತ ಮಹಿಳಾ ಮತದಾರರು ಕಾಂಗ್ರೆಸ್ ಸರ್ಕಾರದ ಕಡೆಗೆ ತಿರುಗಿದರು. ಇದೀಗ ಶ್ರೀ ಶಕ್ತಿ ಸಂಘಗಳ ಮತ್ತಿತರ ಸಂಘಗಳ ಸಾಲ ಮನ್ನಾ ಮಾಡಿದರೆ ಅದು ಕಾಂಗ್ರೆಸ್ಸಿಗೆ ಬಹುದೊಡ್ಡ ಚುನಾವಣಾ ವೋಟ್ ಬ್ಯಾಂಕ್ ಆಗಿ ಪರಿವರ್ತನೆ ಆಗಲಿದೆ ಎನ್ನಲಾಗಿದೆ.

 

ಇದನ್ನು ಓದಿ:  Shakthi Free Bus Effect: ಫ್ರೀ ಬಸ್ ಹತ್ತಿ ಹೋದ ಹೆಂಡ್ತಿ ಇನ್ನೂ ವಾಪಸ್ಸಿಲ್ಲ, ಅದೇ ಫ್ರೀ ಬಸ್ ಅಡಿಗೆ ತಲೆ ಕೊಡಲು ಹೋದ ಗಂಡ !

Leave A Reply

Your email address will not be published.