Bangalore- Mysore Expressway: ಬೆಂಗಳೂರು-ಮೈಸೂರು ಮರಣ ಹೈವೇ: ಬೈಕ್ ಆಟೋ, ಕೃಷಿ ವಾಹನ ಸಂಚಾರಕ್ಕೆ ನಿಷೇಧ, ದಿನಾಂಕ ಗಮನಿಸಿ !

latest news Ban on bike, auto, agricultural vehicle traffic on Bengaluru-Mysore highway

Bangalore- Mysore Expressway: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಜುಲೈ ತಿಂಗಳಿಂದ ಸೈಕಲ್‌, ದ್ವಿಚಕ್ರ ವಾಹನ, ತ್ರಿಚಕ್ರ ವಾಹನಗಳು ಹಾಗೂ ಟ್ರ್ಯಾಕ್ಟರ್‌ಗಳಂತಹ ಕೃಷಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಈ ನಿಯಮ ಮುಂದಿನ 10-15 ದಿನಗಳಲ್ಲಿ ಜಾರಿಯಾಗಲಿದೆ ಎಂದು ತಿಳಿದುಬಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೇಗೆ ಚಾಲನೆ ನೀಡಿದ್ದಾರೆ. ಸುಮಾರು 8,479 ಕೋಟಿ ರೂ. ವೆಚ್ಚದಲ್ಲಿ ಎಕ್ಸ್‌ಪ್ರೆಸ್‌ ಹೈವೇ (Bangalore- Mysore expressway) ನಿರ್ಮಾಣವಾಗಿದೆ. ಆದರೆ, ಅಂದಿನಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಯಲ್ಲಿ ಹೆಚ್ಚಿನ ಅಪಘಾತ ನಡೆಯುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕಳೆದ ಅಕ್ಟೋಬರ್‌ನಲ್ಲಿ ಸಂಚಾರಕ್ಕೆ ತೆರೆಯಲಾದ 6-10 ಲೇನ್ ಎಕ್ಸ ಪ್ರೇಸ್ ವೇಯಲ್ಲಿ 150 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಇದೀಗ ಬೆಂಗಳೂರು-ಮೈಸೂರು ಮರಣ ಹೈವೇಯಲ್ಲಿ ಬೈಕ್ ಆಟೋ, ಕೃಷಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು ಗಂಟೆಗೆ 120 ಕಿಮೀ ವೇಗದಲ್ಲಿ ಚಲಿಸಲು ಅನುಮತಿಸಲಾದ ವಾಹನಗಳಿಗೆ ಅಪಾಯವನ್ನು ಉಂಟುಮಾಡುತ್ತವೆ. ಹಾಗಾಗಿ ಎಕ್ಸ್ ಪ್ರೆಸ್ ಹೆದ್ದಾರಿ ಸಂಚಾರಕ್ಕೆ ಸಿದ್ದಗೊಂಡಾಗಿನಿಂದ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ನಿಷೇಧಿಸಲು ಚರ್ಚೆಗಳು ನಡೆಯುತ್ತಿತ್ತು. ಇದೀಗ ಜುಲೈನಿಂದ ಬೈಕ್, ಆಟೋ ಸಂಚಾರಕ್ಕೆ ನಿಷೇದಿಸಲಾಗಿದೆ.

ದೆಹಲಿ-ಮೀರತ್ ಮತ್ತು ದೆಹಲಿ-ವಡೋದರಾ ಎಕ್ಸ್‌ಪ್ರೆಸ್‌ವೇಗಳ ಮಾರ್ಗದಲ್ಲಿ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ನಿಷೇಧಿಸಲಾಗುವುದು. ಸೂಚನೆ ನೀಡಿದ ನಂತರ, ನಿಷೇಧವನ್ನು ತಕ್ಷಣವೇ ಜಾರಿಗೊಳಿಸಲಾಗುವುದು ಎಂದು ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ವಿವೇಕ್ ಜೈಸ್ವಾಲ್ ಹೇಳಿದರು.

 

ಇದನ್ನು ಓದಿ: CM Siddaramaiah: ಧರ್ಮಸ್ಥಳದ ಸಂಘ ಸೇರಿ ಸ್ತ್ರೀ ಶಕ್ತಿ ಸಂಘದಲ್ಲಿ ಸಾಲ ಮಾಡಿದವರ ಸಾಲ ಮನ್ನಾ – ಸಿದ್ದರಾಮಯ್ಯ ಕೊಟ್ರು ಬಿಗ್ ನಿರೀಕ್ಷೆ ! 

Leave A Reply

Your email address will not be published.