Eid al-Adha: ಬಕ್ರೀದ್ಗೆಂದು ತಂದ ಮೇಕೆಗಳ ಎದುರು ಹನುಮಾನ್ ಚಾಲೀಸಾ ಪಠಣ, ಯಾಕೆ ಗೊತ್ತಾ ?
latest news Chanting Hanuman Chalisa in front of goats brought for Bakrid
Mumbai Bakrid Goat controversy: ಮುಂಬೈನಲ್ಲೊಂದು ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮೀರಾ ರೋಡ್ ಸಹಕಾರಿ ಹೌಸಿಂಗ್ ಸೊಸೈಟಿಯಲ್ಲಿ ಮೇಕೆ(goat) ತರುವ ವಿಚಾರವಾಗಿ ಹಿಂದೂ ಹಾಗೂ ಮುಸಲ್ಮಾನ್ ಸಮುದಾಯಗಳ ನಡುವೆ ಜಗಳ (Mumbai Bakrid Goat controversy) ನಡೆದಿದೆ.
ಹೌದು, ಮಹಾರಾಷ್ಟ್ರದ ರಾಜಧಾನಿ ಮುಂಬೈಯಲ್ಲಿ(Mumbai) ಭಾರಿ ವಿವಾದ ಭುಗಿಲೆದ್ದಿದೆ. ಜೂ.29ರಂದು ಬಕ್ರೀದ್ ಹಬ್ಬವಿದೆ. ಹೀಗಾಗಿ ಆ ಹೌಸಿಂಗ್ ಸೊಸೈಟಿಯ ಮುಸ್ಲಿಂ ಕುಟುಂಬವೊಂದು ಬಕ್ರೀದ್ ಹಬ್ಬದ ಮುಂಚಿತವಾಗಿ ಎರಡು ಮೇಕೆಗಳನ್ನು ಬಲಿ ಕೊಡಲು ಮನೆಗೆ ತಂದಿದ್ದರು. ಅವರು ಸೊಸೈಟಿಯ ಗೇಟ್ ದಾಟುತ್ತಿದ್ದಂತೆ, ಅದೇ ಸೊಸೈಟಿಯಲ್ಲಿ ವಾಸವಾಗಿರುವ ಎಲ್ಲ ಹಿಂದು ನಿವಾಸಿಗಳು ಗಲಾಟೆ ಎಬ್ಬಿಸಿದ್ದಾರೆ. ಅಲ್ಲದೆ ಆ ಮೇಕೆಗಳನ್ನು ಮುಂದೆ ಒಯ್ಯುವುದನ್ನು ತಡೆದು, ಹಿಂದು ಧರ್ಮೀಯರೆಲ್ಲ ಸೇರಿ ಹನುಮಾನ್ ಚಾಲೀಸಾ (Hanuman Chalisa) ಪಠಣ ಮಾಡಿದ್ದಾರೆ. ಮತ್ತೆ ಕೆಲವರು ‘ಜೈ ಶ್ರೀ ರಾಮ್’ ಎಂದು ಘೋಷಣೆಗಳನ್ನು ಕೂಗಿದ್ದಾರೆ.
ಸೊಸೈಟಿಯ ಹಿಂದೂ ಸದಸ್ಯರು ಮೇಕೆಗಳನ್ನು ಸೊಸೈಟಿಯ ಆವರಣದಿಂದ ಹೊರಗೆ ತೆಗೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಇವರ ವಿರೋಧಕ್ಕೆ ಮಣಿದ ಮೊಹ್ಸೀನ್ ಶೇಖ್, ಮೇಕೆಯನ್ನು ಅಲ್ಲಿಂದ ಹೊರಗೆ ತೆಗೆದುಕೊಂಡು ಹೋಗಿದ್ದಾನೆ. ಗಲಭೆಯು ಹೆಚ್ಚಾದ ಕಾರಣ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು(police) ಶಾಂತಿ ಮತ್ತು ಕೋಮು ಸೌಹಾರ್ದ ಕಾಪಾಡಲು ಯತ್ನಿಸಿದರು.
ವರದಿ ಪ್ರಕಾರ, “ಈ ಹೌಸಿಂಗ್ ಸೊಸೈಟಿಯಲ್ಲಿ ಸುಮಾರು 200 ರಿಂದ 250 ಮುಸ್ಲಿಂ ಕುಟುಂಬಗಳು(Muslim family) ವಾಸಿಸುತ್ತಿವೆ. ನಾನು ಪ್ರತಿವರ್ಷ ಬಕ್ರೀದ್ ವೇಳೆ ಮೇಕೆಗಳನ್ನು ತಂದು ಇದೇ ಸೊಸೈಟಿಯ ಆವರಣದಲ್ಲಿ ಕಟ್ಟುತ್ತಿದ್ದೆ. ಆದರೆ ಈ ಬಾರಿ ಹೌಸಿಂಗ್ ಸೊಸೈಟಿ ಆವರಣದಲ್ಲಿ ಮೇಕೆಗಳನ್ನು ಕಟ್ಟಲು ಅವಕಾಶ ನೀಡಲಿಲ್ಲ. ಹೀಗಾಗಿ ಲಿಫ್ಟ್ ನ ಮೂಲಕ ಮನೆಯೊಳಗೆ ತರಲು ಯತ್ನಿಸಿದೆ. ಆದರೆ ಅದಕ್ಕೂ ಅವಕಾಶ ಕೊಡಲಿಲ್ಲ. ನಾವು ಪ್ರತಿ ವರ್ಷ ಬಕ್ರಿದ್ ಸಮಯದಲ್ಲಿ ಮೇಕೆಗಳನ್ನು ತಂದು ಕಟ್ಟಿ ಹಾಕುತ್ತಿದ್ದೆವು ಆದರೆ ಯಾವತ್ತೂ ಬಲಿ ಕೊಟ್ಟಿಲ್ಲ” ಎಂದು ಮೊಹ್ಸೀನ್ ಶೇಖ್ ಪೊಲೀಸರ ಎದುರು ಹೇಳಿಕೆ ನೀಡಿ, ಬೇಸರ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಇವರ ಜಗಳವನ್ನು ಪರಿಹರಿಸಿ, ಸೊಸೈಟಿ ಆವರಣದಲ್ಲಿ ಏನಾದರೂ ಮೇಕೆಯನ್ನು ಬಲಿ ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಸೊಸೈಟಿಯ ಹಿಂದೂ ಸಮುದಾಯದವರಿಗೆ ಭರವಸೆ ನೀಡಿ ಹೋಗಿದ್ದಾರೆ.