ಬೆಂಗಳೂರಿಗರೇ ಎಚ್ಚರ..! ʻಬಕ್ರೀದ್ʼ ಪ್ರಯುಕ್ತ ಸಂಚಾರ ವ್ಯತ್ಯಯ, ಹೀಗಿದೆ ಪರ್ಯಾಯ ಮಾರ್ಗ

Bengalore : ಬೆಂಗಳೂರಿನ ಈದ್ಗಾ ಮೈದಾನದಲ್ಲಿ ತ್ಯಾಗ ಬಲಿದಾನ ಸಂಕೇತವಾದ ʻಬಕ್ರೀದ್ ಹಬ್ಬʼ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಬೆಂಗಳೂರು ನಗರದಲ್ಲಿ ಬೆಳಗ್ಗೆ 8 ರಿಂದ 11.30 ರವರೆಗೆ ಸಂಚಾರ ವ್ಯತ್ಯಯ ಬೆಂಗಳೂರು(Bengalore)ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಾಗಿದ್ರೆ ನಾಳೆ ಸಿಟಿಯಲ್ಲಿ ಓಡಾಡುವ ಜನರ ಅನುಕೂಲಕ್ಕಾಗಿ ಪರ್ಯಾಯ ಮಾರ್ಗವನ್ನು ಕಲ್ಪಿಸಲಾಗಿದೆ

ಹೀಗೆ ಪರ್ಯಾಯ ಮಾರ್ಗ

 

ಬಸವೇಶ್ವರ ವೃತ್ತದಿಂದ ಸಿಐಡಿ ಜಂಕ್ಷನ್‌ವರೆಗೆ ಸಂಚಾರವನ್ನು ನಿರ್ಬಂಧಿಸಲಾಗಿರುವುದರಿಂದ ಪ್ರಯಾಣಿಕರು ದೇವರಾಜ ಅರಸು ರಸ್ತೆಯನ್ನು ಬಳಸಲು ಕೋರಲಾಗಿದೆ.

ಲಾಲ್‌ಬಾಗ್ ಮುಖ್ಯ ಗೇಟ್‌ನಿಂದ ಕಣ್ಣಪ್ಪ ಪೆಟ್ರೋಲ್ ಬಂಕ್‌ವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಪ್ರಯಾಣಿಕರು ಊರ್ವಶಿ, ಸಿದ್ದಯ್ಯ ರಸ್ತೆ, 34ನೇ ಜಂಕ್ಷನ್, ವಿಲ್ಸನ್ ಗಾರ್ಡನ್ ಮುಖ್ಯರಸ್ತೆ ಮತ್ತು ಹೊಸೂರು ರಸ್ತೆಯನ್ನು ಬಳಸಲು ಸೂಚಿಸಲಾಗಿದೆ.

ಟೋಲ್ ಗೇಟ್ ಜಂಕ್ಷನ್‌ನಿಂದ ಶಿರಸಿ ವೃತ್ತದವರೆಗೆ ಸಂಚಾರ ನಿರ್ಬಂಧಿಸಿರುವುದರಿಂದ ಸಿರ್ಸಿ ವೃತ್ತದಿಂದ ಬಲ ತಿರುವು ಪಡೆದು ಬಿನ್ನಿ ಮಿಲ್, ಟ್ಯಾಂಕ್ ಬಂಡ್ ರಸ್ತೆ, ಮಾಗಡಿ ರಸ್ತೆ ಮತ್ತು ವಿಜಯನಗರ ಮಾರ್ಗವಾಗಿ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ.

ಮೈಸೂರು ರಸ್ತೆಯಿಂದ ಸಿಟಿ ಮಾರ್ಕೆಟ್ ಕಡೆಗೆ ಪ್ರಯಾಣಿಸುವವರು ಕಿಮ್ಕೋ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ವಿಜಯನಗರ, ಮಾಗಡಿ ಮುಖ್ಯರಸ್ತೆ ಮತ್ತು ಸಿರ್ಸಿ ವೃತ್ತದ ಮೂಲಕ ಮಾರುಕಟ್ಟೆಗೆ ತೆರಳಬಹುದಾಗಿದೆ.

ಇದನ್ನೂ ಓದಿ :ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಮೇಲೆ ಗುಂಡಿನ ದಾಳಿ

Leave A Reply

Your email address will not be published.