Diwali holiday: ದೀಪಾವಳಿಗೆ ಅಮೆರಿಕಾ ನಗರದ ಶಾಲೆಗಳಿಗೆ ರಜೆ ಘೋಷಣೆ !

latest news scholl holidays Holiday announced for Diwali in American city schools

Diwali Holiday : ಸಾಮಾನ್ಯವಾಗಿ ದೀಪಾವಳಿ ಅಂದಾಗ ಎಲ್ಲೆಡೆ ಸಂತಸ ಮನೆಮಾಡಿರುತ್ತದೆ. ದೀಪಗಳ ಬೆಳಗಿಸಿ, ಪಟಾಕಿ ಸಿಡಿಸಿ, ಜನರು ಹಬ್ಬ ಆಚರಿಸುತ್ತಾರೆ. ಶಾಲಾ ಮಕ್ಕಳಿಗೆ ಮಕ್ಕಳಿಗೆ ಅದಕ್ಕಿಂತಲೂ ಖುಷಿಯ ವಿಚಾರ ಏನೆಂದರೆ ದೀಪಾವಳಿಯ ನೆಪದಲ್ಲಿ ರಜೆ ಸಿಗುತ್ತದೆ ಎಂದು. ಆದರೆ, ಈ ಬಾರಿ ದೀಪಾವಳಿ ಭಾನುವಾರ ಬಂದಿದೆ. ಈ ಬಾರಿ ದೀಪಾವಳಿಗೆ ನ್ಯೂಯಾರ್ಕ್‌ ನಗರದ ಶಾಲೆಗಳಿಗೆ ಸಾರ್ವಜನಿಕ ರಜೆ ಘೋಷಣೆ (Diwali Holiday) ಮಾಡಲಾಗಿದೆ.

 

ದೀಪಾವಳಿಯು ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಬರುತ್ತದೆ. ಆದರೆ ಈ ಬಾರಿ ದೀಪಾವಳಿ ನವೆಂಬರ್ 12 ರಂದು ಭಾನುವಾರ ಬಂದಿದೆ. ಹಿಂದೂಗಳು, ಸಿಖ್ಖರು, ಜೈನರು ಮತ್ತು ಕೆಲವು ಬೌದ್ಧರು ಸೇರಿದಂತೆ ಸುಮಾರು 2 ಲಕ್ಷ ನ್ಯೂಯಾರ್ಕ್ ನಗರದ ನಿವಾಸಿಗಳು ದೀಪಾವಳಿಯನ್ನು ಆಚರಿಸುತ್ತಾರೆ ಎನ್ನಲಾಗಿದೆ.

ನ್ಯೂಯಾರ್ಕ್ ನಗರದಲ್ಲಿ ದಕ್ಷಿಣ ಏಷ್ಯಾ ಮತ್ತು ಇಂಡೋ-ಕೆರಿಬಿಯನ್ ಸಮುದಾಯಗಳ ಬೆಳವಣಿಗೆಯನ್ನು ಗಮನಿಸಿ ದೀಪಾವಳಿಗೆ ಸಾರ್ವಜನಿಕ ರಜೆ ಘೋಷಿಸಲಾಗಿದೆ. ಶಾಲೆಗಳ ಸಾರ್ವಜನಿಕ ರಜೆ ಪಟ್ಟಿಗೆ ಇದೀಗ ದೀಪಾವಳಿಯು ಸೇರಿಕೊಂಡಿದೆ ಎಂದು ಮೇಯರ್ ಎರಿಕ್ ಆಡಮ್ಸ್ ಹೇಳಿದರು.

Leave A Reply

Your email address will not be published.